ಬೆಳಗಾವಿ ನಗರದ ಬೋಗಾರ್ವೇಸ್ ವೃತ್ತದ ಪೇ ಪಾರ್ಕಿಂಗಿನಲ್ಲಿ ನಿಲ್ಲಿಸಿದ್ದ ಗುತ್ತಿಗೆದಾರರೊಬ್ಬರ ಕಾರಿನ ಗ್ಲಾಸ್ ಒಡೆದು, ಕಾರಿನಲ್ಲಿದ್ದ ಐವತ್ತು ಸಾವಿರ ರೂ ದುಡ್ಡು ಕಳ್ಳತನ ಮಾಡಿದ ಘಟನೆ ನಡೆದಿದೆ
ನಗರದ ಗುತ್ತಿಗೆದಾರರೊಬ್ಬರು ನಗರದಲ್ಲಿರುವ ತಮ್ಮ ಖಾಸಗಿ ಕಾರ್ಯದ ನಿಮಿತ್ತ, ಪೇ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಕಾರನ್ನು ಪಾರ್ಕಿಂಗ್ ಮಾಡಿ ಹೋಗಿದ್ದು, ತಮ್ಮ ಕಾರ್ಯ ಮುಗಿಸಿ ಒಂದು ಗಂಟೆಯ ನಂತರ ಬಂದು ನೋಡುವಷ್ಟರಲ್ಲಿ ಕಾರಿನ ಗ್ಲಾಸ್ ಒಡೆದು, ಕಾರಿನಲ್ಲಿದ್ದ ಬ್ಯಾಗ್ ಅನ್ನು ಖದೀಮರು ದೋಚಿಕೊಂಡು ಹೋಗಿದ್ದಾರೆ.
ಇತ್ತ ಪಾರ್ಕಿಂಗ್ ವ್ಯವಸ್ಥೆಯ ಸಿಬ್ಬಂದಿಯನ್ನು ಕೇಳಿದಾಗ ತಮಗೆ ಏನು ತಿಳಿದಿಲ್ಲ, ಕಾರಿನ ಉಷ್ಣತೆಯಿಂದ ಗ್ಲಾಸು ಒಡೆದಿರಬಹುದು, ನಮ್ಮ ನಿಯಮಗಳ ಪ್ರಕಾರ ಕಾರಿನಲ್ಲಿರುವ ವಸ್ತುಗಳಿಗೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ.
For damages prior to parking in pay park slots, Pay parking staff/ employees are responsible for any and all types of damages done to car parked in pay parking slots.