ಹಳೆ ವೈಷಮ್ಯದಿಂದಾಗಿ ಯುವಕನೊಬ್ಬನಿಗೆ ತನ್ನ ಸ್ನೇಹಿತರೇ ಸೇರಿ ಚಾಕುವಿನಿಂದ ಇರಿದು ಭೀಕರ ಕೊಲೆ ಮಾಡಿರುವ ಘಟನೆ ಆಳಂದ ತಾಲ್ಲೂಕಿನ ನರೋಣಾ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ನರೋಣಾದ ಚನ್ನವೀರ ಗುರುಲಿಂಗಪ್ಪ ಹೀರಾ (24) ಕೊಲೆಗೀಡಾದ ಯುವಕ ಎಂದು ಗುರುತಿಸಲಾಗಿದೆ.
ಜನವರಿಯಲ್ಲಿ ಆಯೋಜಿಸಿದ್ದ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನಡೆದಿದ್ದ ಮನಸ್ತಾಪ ಹಿನ್ನಲೆ ಯುವಕನನ್ನು ಕೊಲೆ ಮಾಡಲಾಗಿದೆ. ರವಿಚಂದ್ರ ಓಂಕಾರ, ಮಹಾದೇವ ಪೀರಶೆಟ್ಟಿ, ಜಗದೇವಪ್ಪ ಪೀರಶೆಟ್ಟಿ, ಶಂಕರ ವಾಲಿ ಕೊಲೆ ಆರೋಪಿಗಳಾಗಿದ್ದಾರೆ ಎಂದು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ದೂರು ಶ್ರೀನಿವಾಸುಲು, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಸಿದ್ದರಾಮ ನಿಂಬರ್ಗಾ ಶುಕ್ರವಾರ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.
ಮೃತ ಯುವಕನ ತಂದೆ ಗುರುಲಿಂಗಪ್ಪಾ ಹೀರಾ ಅವರು ನೀಡಿದ ದೂರಿನ ಮೇರೆಗೆ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.