ಧಾರವಾಡ ಅಂಜುಮನ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಅಂಜುಮನ ಅಲುಮ್ನಿ ಅಸೋಸಿಷೇನ್ ಸಂಯುಕ್ತ ಆಶ್ರಯದಲ್ಲಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಐ ಎ ಮುಲ್ಲಾ ವಹಿಸಿಕೊಂಡಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಹುಬ್ಬಳ್ಳಿಯ ಚೇತನ್ ಬಿಸಿನೆಸ್ ಸ್ಕೂಲ್ ಡೀನ್ ಕಿರಣ್ ಕುಮಾರ್ ಗಲಗಲಿ ಮಾತನಾಡಿ, ವಿದ್ಯಾರ್ಥಿಗಳು ಪದವಿಯ ನಂತರದ ಜೀವನದಲ್ಲಿ ತಮ್ಮ ಕೌಶಲ್ಯದ ಪ್ರದರ್ಶನ ಹಾಗೂ ಸಂವಹನವನ್ನು ನಿರ್ವಹಿಸುವ ಕುರಿತು ವಿವರಿಸುತ್ತಾ, ವಿದ್ಯಾರ್ಥಿಗಳು ತಮ್ಮ ಜಾಲಬಂಧವನ್ನು ವೃದ್ಧಿಪಡಿಸಿಕೊಳ್ಳುವ ಬಗ್ಗೆ ತಿಳಿಸಿದರು. ಉದ್ಯೋಗಕ್ಕಾಗಿ ಸಲ್ಲಿಸುವ ರೆಸ್ಯುಮ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಯಾವ ರೀತಿಯಲ್ಲಿ ಸೇರಿಸಬೇಕು ಎಂಬುದನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಯೋಜಕ ಡಾ. ಏನ್ ಬಿ ನಾಲತವಾಡ, ಹುಬ್ಬಳ್ಳಿಯ ಚೇತನ್ ಬಿಸಿನೆಸ್ ಸ್ಕೂಲ್‌ನ ಮಲ್ಲಿಕಾರ್ಜುನ ಅರ್ಕಸಾಲಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಉಲ್ಲಾಸ ದೊಡ್ಡಮನಿ, ಪ್ರೊ. ಜ್ಯೋತಿ ಪಾಟೀಲ್, ಪ್ರೊ. ಶಬಿನಾ ಬೀಡಿ, ಪ್ರೊ. ಮುತ್ತುಬಾಯಿ ದರಗದ ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಸರ್.ಸಿದ್ದಪ್ಪ ಕಂಬಳಿ, ಉತ್ತರ ಕರ್ನಾಟಕದಲ್ಲಿ ಅಕ್ಷರಜ್ಯೋತಿ ಪ್ರಜ್ವಲಿಸಲು ಹೋರಾಡಿದವರು: ರಾಮಪ್ಪ ಬಡಿಗೇರ
ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆಯನ್ನು ಸವಿತಾ ವಾಲೀಕರ, ಕುರಾನ್ ಪಠಣವನ್ನು ಆಲಿಜನಾಬ ಸೌದಾಗರ ಹಾಗೂ ವಿಭಾಗದ ಮುಖ್ಯಸ್ಥ ಪ್ರೊ. ಉಲ್ಲಾಸ್ ದೊಡ್ಡಮನಿ ಸ್ವಾಗತ ಭಾಷಣವನ್ನು ಮಾಡಿದರು. ಕು. ನಯಾಗಾಕ ಡೆಬ್ರಾ ವಂದನಾರ್ಪಣೆ, ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಕು. ಸಾದಿಯ ಮೊರಬ ನಿರೂಪಿಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದರು.