ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರನ್ನು ಹೀಲಿಂಗ್ ಟ್ರೀ ಆಸ್ಪತ್ರೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶನಿವಾರ ಸಂಜೆ ನೆಹರೂ ಕ್ರೀಡಾಂಗಣ ಸಮೀಪದ ರೋಟರಿ ವೃತ್ತದಲ್ಲಿ ಮೇಣದ ಬತ್ತಿ ಬೆಳಗಿಸಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.
‘ಆತಂಕವಾದಿ ದಾಳಿಯಲ್ಲಿ ಪ್ರಾಣ ಕಳೆದುಕೊಂಡು ದುಃಖಸಾಗರದಲ್ಲಿ ಮುಳುಗಿದ ಕುಟುಂಬಗಳಿಗೆ ಧೈರ್ಯ ತುಂಬಲು ಮತ್ತು ಅವರ ಜೊತೆಗೆ ನಾವಿದ್ದೇವೆ. ರಾಷ್ಟ್ರೀಯ ದುಃಖದ ಸಮಯದಲ್ಲಿ ಶಾಂತಿ, ಸಹಾನುಭೂತಿ ಮತ್ತು ಏಕತೆಯನ್ನು ಉತ್ತೇಜಿಸಲು ಬದ್ಧವಾಗಿದೆ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಇಓ ಸಿರಾಜುದ್ದೀನ್ ಸೇರಿದಂತೆ ನವೀನ್ ಜಾವೀದ್ ಹಾಗೂ ವೈದ್ಯರು, ಸಿಬ್ಬಂದಿ ಭಾಗವಹಿಸಿದ್ದರು.