ಈ ವರ್ಷದ ಮಾವಿನ ಹಣ್ಣಿನ ಸೀಜ಼ನ್ ಶುರುವಾಗಿದ್ದು, ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರಲು ಪ್ರಾರಂಭಿಸಿವೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿಗೆ ಬೆಲೆ ಇದ್ದರೂ ಕೂಡ ಮಳೆ ಗಾಳಿಯಿಂದಾಗಿ ಮಾವಿನ ಹಣ್ಣಿನ ಹೂವುಗಳು ಉದುರುತ್ತವೆಂಬ ಆತಂಕದಲ್ಲಿ ರೈತರು ಕೊರಗುವಂತಾಗಿದೆ.
ವಾರಗಳ ಹಿಂದೆ ಸುರಿದ ಮಳೆ ಗಾಳಿಯಿಂದ ಮಾವಿನ ಹೂವುಗಳು ಉದುರಿವೆ. ಇದರಿಂದ ಸ್ವಲ್ಪಮಟ್ಟಿಗೆ ಹಣ್ಣಿನ ಇಳುವರಿ ಕಡಿಮೆಯಾಗಿದೆ.
ರಾಮದುರ್ಗ ತಾಲೂಕಿನ ಹಣ್ಣು ಬೆಳೆಗಾರ ಫಕೀರಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಈ ವರ್ಷ ಮಾವಿನ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದೆ. ನಾವು ಒಂದು ಎಕರೆಯಲ್ಲಿ ಮಾವಿನ ಹಣ್ಣಿನ ಮರಗಳನ್ನು ಬೆಳೆಸಿದ್ದು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದೇವೆ. ಆದರೆ ವಾರದ ಹಿಂದಿನ ಮಳೆ ಗಾಳಿಯಿಂದ ಹೂವುಗಳು ಉದುರಿದ್ದರಿಂದ ಸ್ವಲ್ಪಮಟ್ಟಿಗೆ ಹಾನಿಯಾಗಿದೆ” ಎಂದು ತಿಳಿಸಿದರು.
ಅಥಣಿ ತಾಲೂಕಿನ ಕುಲಹಳ್ಳಿ ಗ್ರಾಮದ ಮಾವಿನ ಬೆಳೆಗಾರ ಅಡಿವೆಪ್ಪ ಮಾತನಾಡಿ, “ಮಾವಿನ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಮಾವಿನ ಹಣ್ಣುಗಳು ಅವುಗಳ ತಳಿಗಳ ಮೇಲೆ ಅವುಗಳ ಬೆಲೆ ನಿಗದಿಯಾಗುತ್ತದೆ. ಕೆಲವು ಹಣ್ಣುಗಳಿಗೆ ಒಂದು ಕೆಜಿಗೆ ₹80 ರಿಂದ ₹100 ಇದ್ದರೆ, ಇನ್ನೂ ಕೆಲವು ಹಣ್ಣುಗಳಿಗೆ ₹150ರಿಂದ ₹180ರವರೆಗೆ ಬೆಲೆ ಇದೆ. ಅಪೂಸ್ ಮಾವಿನ ಹಣ್ಣಿಗೆ ₹250ರಿಂದ ₹300ರವರೆಗೆ ಬೆಲೆಯಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು; ಸಿಂಧಗಿಯ 26 ಗ್ರಾಮಗಳಿಗೆ ಅನುಕೂಲ
ಮಾವಿನ ಹಣ್ಣಿನ ಮಾರಾಟಗಾರ ಅನಿಲ ಮಾತನಾಡಿ, “ರೈತರು ಬೆಳೆದ ಮಾವಿನ ಹಣ್ಣುಗಳ ಸಾಗಾಟವು ಸ್ವಲ್ಪ ಕಷ್ಟವಿದೆ ಮತ್ತು ಮಾವಿನ ಹಣ್ಣಿಗೆ ಬೇಡಿಕೆಯೂ ಇದೆ. ಕೆಲವು ಸಾರಿ ಮಾವಿನ ಹಣ್ಣುಗಳ ಮಾರಟವಾಗಿದ್ದಿದ್ದರೆ ಹಾನಿಯಾಗುತ್ತವೆ. ಉತ್ತಮ ಬೇಡಿಕೆ ಇರುವುದರಿಂದ ಆತಂಕವಿಲ್ಲ” ಎಂದು ತಿಳಿಸಿದರು

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು