ಗುಬ್ಬಿ ಪಟ್ಟಣದ ನಿವಾಸಿ ರಾಷ್ಟ್ರೀಯ ಕೊಕ್ಕೋ ಆಟಗಾರ ಹಾಗೂ ದೈಹಿಕ ನಿರ್ದೇಶಕ ಎಚ್.ಎನ್.ಲೋಕೇಶ್ ಆಂಧ್ರಪ್ರದೇಶದ ಕುಪ್ಪಂ ದ್ರಾವಿಡಿಯನ್ ವಿವಿಯಲ್ಲಿ ಕೊಕ್ಕೋ ಅಂಡ್ ಫುಟ್ಬಾಲ್ ಪ್ಲೆಯರ್ಸ್ ಆಫ್ ಸೆಲೆಕ್ಟೆಡ್ ಸ್ಟೇಟ್ ಯೂನಿವರ್ಸಿಟಿ ಆಫ್ ಕರ್ನಾಟಕ ಎಂಬ ವಿಷಯ ಪ್ರಬಂಧ ಮಂಡಿಸಿ ಪಿಎಚ್ ಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಗುಬ್ಬಿ ಶ್ರೀ ಚನ್ನಬಸವೇಶ್ವರ ಯುವಕ ಸಂಘದಲ್ಲಿ ಕೊಕ್ಕೋ ರಾಷ್ಟ್ರೀಯ ಆಟಗಾರರಾಗಿ ಬೆಳೆದು ನಂತರ ಎಂಪಿಎಡ್ ಪದವಿ ಗಳಿಸಿ ಪ್ರಸ್ತುತ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ದೈಹಿಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿ ನಿವೃತ್ತರಾದ ಡಾ.ಮುನಿರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಅಧ್ಯಯನ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್ ಡಿ ಪದವಿ ಲಭಿಸಿದೆ.
ಬೆಂಗಳೂರು ವಿವಿಯ ಕೊಕ್ಕೋ ತಂಡ ಆಯ್ಕೆ ಸಮಿತಿಯ ಸದಸ್ಯರಾಗಿ ಕಳೆದ 20 ವರ್ಷದಿಂದ ಕೆಲಸ ಮಾಡಿ ತರಬೇತುದಾರರಾಗಿ ಸಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪದವಿ ಪಡೆಯಲು ಸಹಕರಿಸಿದ ನಿವೃತ್ತ ರಿಜಿಸ್ಟರ್ ಡಾ.ಸುಂದರ್ ರಾಜ್ ಅರಸ್, ರಾಜ್ಯ ಕೊಕ್ಕೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್, ಶ್ರೀ ಚನ್ನಬಸವೇಶ್ವರ ಯುವಕ ಸಂಘ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.