ಮೈಸೂರು ಜಿಲ್ಲೆ, ವರುಣಾ ವ್ಯಾಪ್ತಿ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತರಿಗೆ ನಿಖರ ಕೃಷಿ ಬೇಸಾಯದ ಕುರಿತು ಮಾಹಿತಿ ನೀಡಲು ‘ ನಿಖರ ಕೃಷಿ ಬೇಸಾಯ ಪಾತ್ಯಕ್ಷಿಕಾ ಘಟಕ ‘ ವನ್ನು ಜೆಎಸ್ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್. ಪಿ. ಉದಯಶಂಕರ್ ಉದ್ಘಾಟಿಸಿ ಎಸ್‌ಎಸ್‌ಪಿ ರೈತರಿಗೆ ಕೃಷಿ ಪರಿಕರಗಳನ್ನು ವಿತರಣೆ ಮಾಡಿದರು.
” ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರವು ಕಳೆದ 30 ವರ್ಷಗಳಿಂದ ರೈತರಿಗೆ ವಿವಿಧ ಸೇವೆಗಳನ್ನು ನೀಡುತ್ತಿದೆ. ತರಬೇತಿ, ರೈತರ ತಾಕಿನಲ್ಲಿ ಪ್ರಾತ್ಯಕ್ಷಿಕೆಗಳು ಹಾಗೂ ವಿವಿಧ ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರೈತರಿಗೆ ಕೃಷಿ ಸಂಪನ್ಮೂಲಗಳಾದ ನೀರು, ಗೊಬ್ಬರ ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ನಿಖರ ಕೃಷಿ ಬೇಸಾಯ ತಂತ್ರಜ್ಞಾನ ಪ್ರಾತ್ಯಕ್ಷಿಕೆಯನ್ನು ನಿರ್ಮಿಸಲಾಗಿದೆ. ರೈತರು ಕೆವಿಕೆಗೆ ಭೇಟಿ ನೀಡಿ ಮಾಹಿತಿ ಪಡೆಯಲು ” ಕರೆ ನೀಡಿದರು.
ಬೆಂಗಳೂರು ವಲಯ-11 ರ ಅಟಾರಿ ನಿರ್ದೇಶಕರಾದ ಡಾ. ವಿ. ಸುಬ್ರಮಣ್ಣಿಯನ್ ಮಾತನಾಡಿ ” ಸ್ವಾತಂತ್ರ್ಯದ ಮೊದಲು ನಾವು ಆಹಾರ ಉತ್ಪನ್ನಗಳಿಗೆ ಬೇರೆ ದೇಶಗಳ ಮೇಲೆ ಅವಲಂಬಿತರಾಗಿದ್ದೆವು. ಆದರೆ, ಈಗ ಕೃಷಿಯ ಎಲ್ಲಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಿ, ಹೊರ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರವು ಬಿತ್ತನೆ ಬೀಜ ಹಾಗೂ ಸಸಿಗಳನ್ನು ನೀಡಲಾಗುತ್ತಿದೆ. ಅಲ್ಲದೇ, ಎಸ್‌ಸಿಎಸ್‌ಪಿ ಯೋಜನೆಯಡಿ ವಿವಿಧ ಕೃಷಿ ಪರಿಕರಗಳನ್ನು ಕೇಂದ್ರಕ್ಕೆ ನೀಡಲಾಗಿದ್ದು, ಆಸಕ್ತ ರೈತರು ಬಾಡಿಗೆಗೆ ಪಡೆದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ” ತಿಳಿಸಿದರು.

ಮೈಸೂರಿನ ಜೆಎಸ್ಎಸ್ ಮಹಾ ವಿದ್ಯಾಪೀಠದ ಡಾ. ಸಿ.ಜಿ. ಬೆಟಸೂರ ಮಠ ಮಾತನಾಡಿ ” ಯುವ ರೈತರು ಕೃಷಿಯಿಂದ ವಿಮುಖರಾಗಿ ನಗರ ವಾಸಿಗಳಾಗುತ್ತಿದ್ದಾರೆ. ಕೃಷಿ ಭೂಮಿಯನ್ನು ಬಡಾವಣೆಗಳನ್ನಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಭವಿಷ್ಯದಲ್ಲಿ ಆಹಾರ ಉತ್ಪಾದನೆ ಕುಂಠಿತವಾಗುತ್ತಿದೆ. ಆದ ಕಾರಣ ಗ್ರಾಮೀಣ ಯುವ ರೈತರು ವ್ಯವಸಾಯದಿಂದ ವಿಮುಖರಾಗದೇ ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸು ಸಾಧಿಸಬೇಕು. ಕೃಷಿಗೆ ಸಂಬಂಧಿಸಿದ ತಾಂತ್ರಿಕ ಸಲಹೆಯನ್ನು ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಡೆಯಲು ” ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಜ್ಞಾನೇಶ್ ಬಿ.ಎನ್. ರವರು 2025 ಮೇ 3 ರಿಂದ 5ರವರೆಗೆ ಸುತ್ತೂರಿನಲ್ಲಿ ರೈತರ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ರೈತರು ಶಿಬಿರದಲ್ಲಿ ಪಾಲ್ಗೊಳ್ಳಲು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಬಡ ವರ್ಗಕ್ಕೆ ನಿವೇಶನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಹೆಚ್.ವಿ. ದಿವ್ಯಾ, ಡಾ. ಪ್ರಸಾದ್ ವೈ.ಪಿ, ಡಾ. ರಕ್ಷಿತ್ ರಾಜ್ ಯು.ಎಂ.ಸೇರಿದಂತೆ ಕೆವಿಕೆಯ ಸಿಬ್ಬಂದಿ ವರ್ಗದವರು ಹಾಗೂ 80ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಇದ್ದರು.