ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಸೇಬು ಬೆಳೆದ ರೈತ ಶ್ರೀಶೈಲ ತೇಲಿಯವರ ಹೆಸರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಮನ್ ಕೀ ಬಾತ್’ನಲ್ಲಿ ಉಲ್ಲೇಖಿಸಿದ್ದಾರೆ.
“ಗುಡ್ಡಗಾಡು ಪ್ರದೇಶದಲ್ಲಿ ಸೇಬು ಬೆಳೆಬಹುದು ಎನ್ನುವುದನ್ನು ಸುಳ್ಳಾಗಿಸಿ ಬಯಲು ಪ್ರದೇಶ, 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುವಲ್ಲಿ ತೇಲಿಯವರು ಸೇಬು ಬೆಳೆದು ತೋರಿಸಿದ್ದಾರೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮೈಸೂರಲ್ಲಿ ಆಗಸ್ಟ್ 28 ರಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕ ಒಕ್ಕೂಟದ ಸಮ್ಮೇಳನ
“ಗ್ರಾಮವೊಂದರಲ್ಲಿ ವಾಸವಿರುವ ನನ್ನ ಬಗ್ಗೆ ಪ್ರಧಾನಿಯವರು ಮನ್ ಕೀ ಬಾತ್‌ನಲ್ಲಿ ಉಲ್ಲೇಖಿಸಿದ್ದು ನನಗೆ ಖುಷಿ ತಂದಿದೆ. ದ್ರಾಕ್ಷಿ ಬೆಳೆಯಿಂದ ನಾಶವಾದಾಗ, ಸ್ನೇಹಿತರ ಜೊತೆ ಚರ್ಚಿಸಿ ಸಾವಯವ ಪದ್ಧತಿಯಲ್ಲಿ ಸೇಬು ಬೆಳೆದೆ. ಎರಡು ವರ್ಷಗಳ ಹಿಂದೆ 7 ಎಕರೆ ಜಮೀನಿನಲ್ಲಿ ಸೇಬು ಬೆಳೆದೆ. ಈಗಾಗಲೇ ಒಮ್ಮೆ ಫಸಲು ಬಂದಿದ್ದು, ಉತ್ತಮ ಬೆಲೆ ಸಿಕ್ಕಿದೆ. ಎರಡನೇ ಫಸಲಿನ ನಿರೀಕ್ಷೆಯಲ್ಲಿದ್ದೇನೆ” ಎಂದು ಶ್ರೀಶೈಲ ತೇಲಿ ಮನದಾಳದ ಮಾತುಗಳನ್ನಾಡಿದ್ದಾರೆ.