ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಭರತ್ ಭೂಷಣ್ ಕುಟುಂಬಕ್ಕೆ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್(ಎಂಇಐ) ಸಂಸ್ಥೆಯಿಂದ ಒಂದು ಲಕ್ಷದ ಆರ್ಥಿಕ ನೆರವು ನೀಡಲಾಯಿತು.
ಭರತ್ ಭೂಷಣ್ ರವರ ನಿವಾಸಕ್ಕೆ ಕಂಪನಿಯ ಅಧ್ಯಕ್ಷರಾದ ಎಸ್.ಮನೋಹರ್ , ವ್ಯವಸ್ಥಾಪಕ ನಿರ್ದೇಶಕರಾದ ಡಿ ಪದ್ಮಾವತಿ ಹಾಗೂ ಅಧಿಕಾರಿಗಳು ತೆರಳಿ ಭರತ್ ಭೂಷಣ ರವರ ಧರ್ಮಪತ್ನಿ ಸುಜಾತ ಅವರಿಗೆ ಒಂದು ಲಕ್ಷ ರೂಪಾಯಿ ಅರ್ಥಿಕ ಸಹಾಯವನ್ನು ಸಂಸ್ಥೆ ವತಿಯಿಂದ ನೀಡಿದರು.
ಈ ಸಂದರ್ಭದಲ್ಲಿ ಭರತ್ ಭೂಷಣ್ ಅವರ ಧರ್ಮಪತ್ನಿ ಹಾಗೂ ಅವರ ಮಗು ಹಾಗೂ ಭರತ್ ಭೂಷಣ್ರವರ ತಂದೆಯನ್ನ ಭೇಟಿ ಮಾಡಿ ಅವರಿಗೆ ಆತ್ಮಸ್ಥೈರ್ಯವನ್ನು ತುಂಬಿ, ಸಾಂತ್ವನದ ನುಡಿಗಳನ್ನು ತಿಳಿಸಿದರು.
ಕಾಶ್ಮೀರದಲ್ಲಿ ನಡೆದ ಅತ್ಯಂತ ಹೇಯ ಕೃತ್ಯವನ್ನು ಈ ಸಂದರ್ಭದಲ್ಲಿ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉಗ್ರಗಾಮಿಗಳನ್ನ ಸದೆ ಬಡಿಯುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಂಪನಿಯ ಅಧಿಕಾರಿಗಳಾದ ಶರಣಪ್ಪ, ತಿಮ್ಮಣ್ಣ, ಸಂತೋಷ್ ಹಾಗೂ ಶ್ರೀಮತಿ ಕೀರ್ತಿ ಹಾಗೂ ರೇಖಾ ಅವರು ಉಪಸ್ಥಿತರಿದ್ದರು.
