ಸೊರಬ ತಾಲೂಕಿನ ಹೊಳೆಮರೂರಿನಲ್ಲಿ ಅಂಬೇಡ್ಕರ್ ಉತ್ಸವ ಮತ್ತು ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ ಈದಿನ ಡಾಟ್ ಕಾಮ್ ಹೊರ ತಂದಿರುವ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹೊರಾಟಗಾರರು, ಪ್ರಗತಿಪರ ಸಂಘಟನೆಗಳ ತಾಲೂಕ್ ಸಂಚಾಲಕರಾದ ರಾಜಪ್ಪ ಮಾಸ್ಟರ್ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆಗೆ ಚಾಲನೆ ನೀಡಿದರು.

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ನಿವೃತ್ತ ಜನಸಂಪರ್ಕ ಅಧಿಕಾರಿ, ಕೈಗಾ, ಸಂಚಾಲಕರಾದ ಸುಭಾಷ್ ಕಾನಡೆ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳನ್ನು ಪರಮೇಶ್ವರ್ ಕೆ ಆಲಳ್ಳಿ ನೆರವೇರಿಸಿದರು.
ಲೇಖಕರು, ನಿವೃತ್ತ ಉಪನ್ಯಾಸಕರು. ಸಹಯಾನದ ಮಾಧವಿ ಭಂಡಾರಿ ಕೆರೆಕೋಣರಿಂದ ಅಂಬೇಡ್ಕರ್ ಕುರಿತಾದ ಉಪನ್ಯಾಸ ವಹಿಸಿಕೊಂಡು ಅಂಬೇಡ್ಕರವರ ವಿಚಾರ ಧಾರೆ, ಸಂವಿಧಾನದ ಮಹತ್ವ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ್ದು ನೆರದಿದ್ದವರ ಮನ ಮಿಡಿವಂತೆ ಅಂಬೇಡ್ಕರರವರ ಕುರಿತಾಗಿ ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ಈದಿನ ಡಾಟ್ ಕಾಮ್ ಹೊರ ತಂದಿರುವ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಳೆಮೂರೂರಿನ ಹಿರಿಯ ಮಹಿಳೆಯಾದ ಶ್ರೀಮತಿ ಕೆರಿಯಮ್ಮ ಬೋರ್ಕರ್ ವಹಿಸಿದ್ದರು.ಈ ಒಂದು ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಮುಖ್ಯರುವಾರಿಯಾಗಿ ಚಂದ್ರಪ್ಪ ಹೊಳೆಮರೂರು, ಮೋಹನ್ ಕಾನಡೆ,ˌ ದಿಲೀಪ್,ˌ ಶಶಾಂಕ,ˌ ಅಖಿಲೇಶ ಮುಂತಾದವರು ಸಕ್ರಿಯವಾಗಿ ಪಾಲ್ಗೊಂಡರು. ಅವಿನಾಶ್ ಹೊಳೆಮರೂರು ಕಾರ್ಯಕ್ರಮ ನಿರ್ವಹಿಸಿದರು.
ನಂದನ್ ಬೋರ್ಕರ್ˌ ಲಕ್ಷ್ಮಣ್ ಬೋರ್ಕರ್ˌ ಹರ್ಷ ಐಗೋಡು. ಕೇಶವ್ ಕಾನಡೆˌ ಚಂದನ್ ನಾಯ್ಕˌ ಮುಮತಿ ಕಿರಣ್ ಕುಮಾರ್ ದಂಪತಿಗಳು ಹಾಗೂ ಮತ್ತಿತರ ವಿವಿಧ ಸಂಘಟನೆಗಳ ಪದಾದಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.