ವರ್ಡ್ ವಿಷನ್ ಇಂಡಿಯಾ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಶಹಾಪುರ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಜೀವನ ಶಾಲೆ ಕಾರ್ಯಕ್ರಮ ಕನ್ಯಾಕೊಳೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಲಕ್ಷ್ಮಿ ಹಿರೇಮಠ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಮಕ್ಕಳಿಗೆ ನೈತಿಕ ಶಿಕ್ಷಣ ಬಹಳ ಮುಖ್ಯವೆಂದು ಹೇಳಿದರು, ವರ್ಡ್ ವಿಷನ್ ಇಂಡಿಯಾ ಸಂಸ್ಥೆಯವರು ಈ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಿದಕ್ಕಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಾಚೆಣ್ಣ ಕರ್ದಳ್ಳಿ, ಅಧ್ಯಕ್ಷ ಗ್ರಾಮ ಅಭಿವೃದ್ಧಿ ಸಂಸ್ಥೆ, ಪ್ರೀತಿ ಪೂಜಪ್ಪ ಸಹ ಶಿಕ್ಷಕಿ ಭಾಗವಹಿಸಿದರು.
ಪರಿವರ್ತನ ಅಭಿವೃದ್ಧಿಗಾಗಿ ಜೀವನ ಶಾಲೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ಕೌಶಲ್ಯಗಳನ್ನು ಕಲಿಸಲಾಯಿತು. ಸಂವಹನ ಕೌಶಲ್ಯ, ಪರಿಸರ ಸಂರಕ್ಷಣೆ, ಸ್ವಯಂ ರಕ್ಷಣೆ, ಸ್ವಅರಿವು ಇಂದ್ರಿಯ ಅಂಗಗಳು ಅವುಗಳ ಕಾರ್ಯಗಳನ್ನು ತಿಳಿಸಿಕೊಡಲಾಯಿತು.ವಮಕ್ಕಳಿಗೆ ಪಾಠಕ್ಕೆ ಸಂಬಂಧಪಟ್ಟಂತಹ ಹಾಡುಗಳನ್ನು ಹೇಳಿ ಕೊಡಲಾಯಿತು. ಸುಮಾರು 300ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದರು.
ಪ್ರಮುಖರಾದ ಲಕ್ಷ್ಮಿ , ಮದೀನಾ, ಬಸವರಾಜ್, ನಿರ್ಮಲ, ಸಿದ್ದಮ್ಮ, ಅಶೋಕ್, ಶಿವು, ಮೋಹನ್ ಕುಮಾರ್ ಹೊಸಮನಿ, ರಾಬರ್ಟ್, ಸುಂದರ್ ಮತ್ತು ಇತರ ಸ್ವಯಂಸೇವಕರು, ಗ್ರಾಮದ ಹಿರಿಯರು ಭಾಗವಹಿಸಿದ್ದರು.