ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ನೀಡಲು ರಚಿಸಲಾಗಿರುವ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಆಯೋಗ ಮೇ 5 ರಿಂದ ಜಾತಿಗಣತಿ ನಡೆಸಲಿದ್ದು ಮಾದಿಗ ಸಮೂದಾಯ ಜನರು ಬೇರೆ ಬೇರೆ ಉಪಜಾತಿಗಳನ್ನು ನಮೂದಿಸುವ ಬದಲು ಮಾದಿಗ ಎಂದು ನಮೂದಿಸಬೇಕೆಂದು ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ಜೆ.ಬಿ.ರಾಜು ಮನವಿ ಮಾಡಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ ಕಳೆದ 35 ವರ್ಷಗಳಿಂದ ಒಳ ಮೀಸಲಾತಿಗೆ ಆಗ್ರಹಿಸಿ ರಾಜ್ಯದಲ್ಲಿ ಹೋರಾಟ ನಡೆದಿದೆ. ಕೊನೆಗೂ ತಾರ್ಕಿಕ ಅಂತ್ಯ ಕಾಣುವ ದಿನಗಳು ಸಮೀಪಿಸಿವೆ. ಮನೆ ಮನೆಗೆ ಬರುವ ಗಣತಿದಾರರಿಗೆ ಕಲಂ 61 ರಲ್ಲಿ ಮಾದಿಗ ಎಂದ ನಮೂದಿಸಬೇಕಿದೆ. ಬೇರೆ ಬೇರೆ ಉಪಜಾತಿಗಳಿಂದ ಸಮೂದಾಯ ಜನರನ್ನು ಕರೆಯಲಾಗುತ್ತಿದ್ದು ಮಾದಿಗ ಎಂದು ನಮೂದಿಸಿದರೆ ಖಚಿತ ದತ್ತಾಂಶ ಸಂಗ್ರಹಕ್ಕೆ ಸಹಕಾರಿಯಾಗುತ್ತದೆ ಎಂದರು.
ಜಾತಿ ಗಣತಿ ನಡೆಯಲು ಸಮೂದಾಯ ಸಂಘಟಕರು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಜಾತಿ ನಮೂದಿಸಲು ಜಾಗೃತಿ ಮೂಡಿಸಲಾಗುತ್ತದೆ. ಮೇ 1 ರಂದು ಜಾಗೃತಿ ಜಾಥಾ ನಡೆಸಲಾಗುತ್ತದೆ. ಜಿಲ್ಲೆಯ ಎಲ್ಲಾ ತಾಲೂಕ, ಹೋಬಳಿ ಕೇಂದ್ರಗಳಿಗೆ ತೆರಳಿ ಸಮೂದಾಯ ಜನರಲ್ಲಿ ಅರಿವು ಮೂಡಿಸಲಾಗುತ್ತದೆ.ನಗರದ ಅಂಬೇಡ್ಕರ್ ವೃತ್ತದಿಂದ ಜಾಥಾ ಪ್ರಾರಂಭಗೊಳ್ಳುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವೈಯಕ್ತಿಕ ದ್ವೇಷ ;ಕ್ಲರ್ಕ್ ಮೇಲೆ ಮಚ್ಚಿನಿಂದ ಕೊಲೆಗೆ ಯತ್ನ
ಎಂ ವಿರೂಪಾಕ್ಷಿ ಮಾತನಾಡಿ ಜಿಲ್ಲೆಯಲ್ಲಿ ನಡೆಯುವ ಜಾತಿ ಗಣತಿಯಿಂದ ಸಮೂದಾಯ ಜನರು ವಂಚಿತರಾಗದಂತೆ ಎಚ್ಚರವಹಿಸಬೇಕಿದೆ. ಸಮೂದಾಯ ಜನರಿಗೆ ತಿಳುವಳಿಕೆ ನೀಡಲು ಮೇ 1 ರಿಂದ ಪ್ರಾರಂಭವಾಗುವ ಜಾಗೃತಿ ಜಾಥಾವನ್ನು ಮಹಾನಗರ ಪಾಲಿಕೆ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ ಉದ್ಘಾಟಿಸಲಿದ್ದಾರೆ.
ಮತ್ತೊಬ್ಬ ಹೋರಾಟಗಾರ ಅಂಬಣ್ಣ ಆರೋಲಿಕರ ಮಾತನಾಡಿ ಮೇ 5 ರಿಂದ ಪ್ರಾರಂಭವಾಗುವ ಜಾತಿ ಗಣತಿ ಮೇ 31 ಕ್ಕೆ ಅಂತ್ಯಗೊಳ್ಳುತ್ತದೆ. ಸಮೂದಾಯ ಜನರ ಆಧಾರ ಕಾರ್ಡ, ಜಾತಿ ಪ್ರಮಾಣ ಪತ್ರ ಸೇರಿದಂತ ಇತರೆ ದಾಖಲೆಗಳನ್ನು ಪರಿಶೀಲಿಸಿ ಉಪ ಜಾತಿ ನಮೂದಿಸಲಾಗುತ್ತದೆ. ಸುಳ್ಳು ಮಾಹಿತಿ ನೀಡಲು ಅವಕಾಶವೇ ಇಲ್ಲ. ಸಮುದಾಯ ಜನರು ಗೊಂದಲಕ್ಕೆ ಒಳಗಾಗದೇ ಮಾದಿಗ ಎಂದು ನಮೂದಿಸಬೇಕು.ಸಮಾಜದ ಮುಖಂಡರುಗಳು ಸರಿಯಾದ ದಾಖಲೀಕರಣಕ್ಕೆ ಸಹರಿಸಬೇಕೆಂದರು.
ಈ ಸಂದರ್ಬದಲ್ಲಿ ನರಸಿಂಹಲು ಮಾಡಗಿರಿ, ಕೆ.ಪಿ.ಅನಿಲ್‌ಕುಮಾರ, ನರಸಪ್ಪ ಆಶಾಪುರು, ಶಂಕರಪ್ಪ ಹೊಸೂರು ಸೇರಿ ಅನೇಕರಿದ್ದರು.
