ಶಿವಮೊಗ್ಗ ನಗರದ ಸಮಾಜ ಸೇವಕರು ಹಾಗೂ ಆರ್ ಎಂ ಎಲ್ ನಗರ ನಿವಾಸಿಯಾದ ಸಯ್ಯದ್ ಜಮೀಲ್ ರವರು ಇಂದು ತಮ್ಮ ಹುಟ್ಟುಹಬ್ಬವನ್ನು ಸರಳತೆಯಿಂದ ಆಚರಿಸಿಕೊಂಡರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಸಯ್ಯದ್ ಜಮೀಲ್ 28 ನೆ ವಾರ್ಡ್ ಆರ್ ಎಂ ಎಲ್ ನಗರದ ನಿವಾಸಿಯಾಗಿದ್ದು ತಮ್ಮ 39 ನೆ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕಾಶ್ಮೀರದಲ್ಲಿ ಪಹಲ್ಗಮ ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿ ನಮನ ಸಲ್ಲಿಸಿದರು.
ನಂತರ ಶಿವಮೊಗ್ಗ ನಗರದ ಪೌರ ಕಾರ್ಮಿಕರಿಗೆ ಈದಿನ ಡಾಟ್ ಕಾಮ್ ಹೊರ ತಂದಿರುವ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಬಾಬಾ ಸಾಹೇಬರ ವಿಚಾರಧಾರೆ ಎಲ್ಲರ ಮನಸಲ್ಲಿ ಪಸರಿಸಲಿ, ದೇಶದಲ್ಲಿ ಸಂವಿಧಾನ ಆಶಯ ಉಳಿಯುವಂತೆ ಮಾಡುವುದು ಈ ಸಂದರ್ಭದಲ್ಲಿ ಮುಖ್ಯವಾಗಿದೆ ಎಂದರು ಜಮೀಲ್.

ಅರಿವೇ ಅಂಬೇಡ್ಕರ ವಿಶೇಷ ಸಂಚಿಕೆ ತುಂಬಾ ಮಹತ್ವಯುಳ್ಳ ಸಂಚಿಕೆಯಾಗಿದೆ ಇದನ್ನು ಎಲ್ಲರೂ ಖರೀದಿಸಿ ಓದುವ ಮೂಲಕ ದೇಶದ ಏಕತೆ ಹಾಗೂ ಸಂವಿಧಾನದ ಆಶಯ ತಿಳಿಯುವುದು, ಈ ಸಂದರ್ಭದಲ್ಲಿ ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಒಂದು ಮಹತ್ವಪೂರ್ಣ ಪುಸ್ತಕ ತಂದಿರುವ ಈದಿನ ಡಾಟ್ ಕಾಮ್ ಗೆ ಧನ್ಯವಾದಗಳನ್ನ ತಿಳಿಸಿದರು.ನಂತರ ಮಾತನಾಡಿದ ಸಯ್ಯದ್ ಜಮೀಲ್ ದೇಶದಲ್ಲಿ ಶಾಂತಿ ಸೌಹಾರ್ದತೆ ಮೊದಲ ಆದ್ಯತೆ ಹಾಗಾಗಿ ದುಃಖದ ಸಮಯದಲ್ಲಿ ನನ್ನ ಹುಟ್ಟುಹಬ್ಬದ ಆಚರಣೆ ಮಾಡಬಾರದು ಎಂದು ತೀರ್ಮಾನಿಸಿದ್ದೆ.
ಆದರೆ ಸ್ನೇಹಿತರು ಹಾಗೂ ಹಿತೈಷಿ ಬಳಗದವರು ಹುಟ್ಟುಹಬ್ಬದ ಆಚರಣೆಯನ್ನು ಮುಂಚಿತವಾಗಿ ಸಿದ್ಧತೆ ಮಾಡಿದ್ದ ಕರಣ ಅರ್ಥಪೂರ್ಣವಾಗಿ ಮಾಡಬೇಕು ಎಂದು ನಿರ್ಧಾರ ಮಾಡಿದೆ.
ಇದೆ ಸಂದರ್ಭದಲ್ಲಿ ಏಪ್ರಿಲ್ ತಿಂಗಳು ಅಂಬೇಡ್ಕರ್ ಜಯಂತಿ ಆಗಿರುವ ಸಂತೋಷದ ಜೊತೆಗೆ ನಾನು ಸಹ ಏಪ್ರಿಲ್ ತಿಂಗಳಲ್ಲಿ ಜನನ ಆಗಿರುವ ಕಾರಣ ಅಂಬೇಡ್ಕರ್ ಅವರ ವಿಶೇಷ ಸಂಚಿಕೆ ಈದಿನ ಡಾಟ್ ಕಾಮ್ ಹೊರ ತಂದಿರುವುದನ್ನು ನೋಡಿ ಸಂತೋಷವಾಯಿತು,
ಪೌರ ಕಾರ್ಮಿಕರಿಗೆ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬದ ಆಚರಣೆ ಮಹತ್ವ ಎನಿಸಿತು ಎಂದರು.

ಹಾಗಾಗಿ 10ಕ್ಕು ಹೆಚ್ಚು ಪೌರ ಕಾರ್ಮಿಕರಿಗೆ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆಯನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ವೈ ಎಚ್ ನಾಗರಾಜ್, ಮಾತನಾಡಿ ಮುಂದಿನ ದಿನಗಳಲ್ಲಿ ಇಂತಃ ಒಳ್ಳೇಯ ವ್ಯಕ್ತಿತ್ವಯುಳ್ಳ ಜಮೀಲ್ ಅವರ ಮುಂದಿನ ಜೀವನ ಸುಖಮಯವಾಗಿರಲಿ, ಮುಂದಿನ ದಿನಗಳಲ್ಲಿ ಜಮೀಲ್ ಅವರು ಆರ್ ಎಂ ಎಲ್ ನಗರದ ಮಹಾನಗರ ಪಾಲಿಕೆ ಸದಸ್ಯರಾಗಲಿ ನಾವೆಲ್ಲರೂ ಇವರೊಂದಿಗೆ ಇರುತ್ತೇವೆ ಎಂದು ಶುಭ ಕೋರಿದರು.
ನಂತರ ಕಾಂಗ್ರೇಸ್ ನ ಮಹಿಳಾ ಮುಖಾಂಡಾರದ ಶಮಿಮ್ ಬಾನು ಜಮೀಲ್ ಅವರ ಸಾಮಾಜಿಕ ಕಾಳಜಿ ಹಾಗೂ ಕಾರ್ಯಗಳನ್ನು ಶ್ಲಾಘಿಸಿದರು.ಹುಟ್ಟುಹಬ್ಬದ ದಿನ ಹಾಗೂ ಮುಂದಿನ ದಿನಗಳು ಶುಭವಾಗಲಿ ಎಂದು ಹಾರೈಸಿದರು.

ಸಿನಿಮಾ ನಟರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ದಾನಮ್ ಶುಭಾಶಯಗಳನ್ನ ಕೋರುತ್ತ ಅಂಬೇಡ್ಕರ್ ವಿಚಾರ ಧಾರೆ ಸಂವಿಧಾನ ಆಶಯ ತಿಳಿಸುವ ಒಂದು ವಿಶಿಷ್ಟ ಹುಟ್ಟುಹಬ್ಬದ ಆಚರಣೆ ಮಾಡಿಕೊಂಡ ಜಮೀಲ್ ಮನೋಸ್ಥಿತಿ ಎಲ್ಲರಲ್ಲಿ ಬರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಜಮೀಲ್ ಅವರ ಆತ್ಮೀಯ ಗೆಳಯರು ಹಾಗೂ ಬಳಗದವರು ಏರ್ಪಡಿಸಿದ್ದ ಹುಟ್ಟುಹಬ್ಬದ ಕಾರ್ಯಕ್ರಮ ಅರ್ಥಪೂರ್ಣವಾಯಿತು ಎಂದು ನೆರದಿದ್ದವರು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೊಹಮ್ಮದ್ ಹಮೀದ್, ನಸ್ರುಲ್ಲ, ರಗಿಬ್ ಶರೀಫ್, ವೈ ಎಚ್ ನಾಗರಾಜ್, ಪಿಒ ಶಿವಕುಮಾರ್, ಮೊಹಮ್ಮದ್ ಯೂಸುಫ್, ಅವೈಜ್, ಮುಷೀರ್ ಉಲ್ ಹಕ್, ನಜಿಮಾ ಮಹಿಳಾ ಕಾಂಗ್ರೆಸ್, ಶಮೀಮ್ ಬಾನು ಎಕ್ಸ್ ಕೌನ್ಸಿಲೋರ್, ಇಮ್ರಾನ್, ನಟ ದನಮ್, ಸಮೀಯುಲ್ಲ, ಅಯೂಬ್, ರಹಿಲ್ ವಾರ್ಡ್ ಪ್ರೆಸಿಡೆಂಟ್, ಝುಲ್ಫೇಹಾನ್, ಇರ್ಫಾನ್ ಜಮೀಲ್ ಅವರಿಗೆ ಶುಭ ಕೋರಿದರು