ಎರಡನೇ ಮಹಾಯುದ್ಧದ ವಿಜಯ ದಿನವನ್ನು ರಷ್ಯಾ ಆಚರಿಸುತ್ತಿರುವ ಕಾರಣದಿಂದಾಗಿ ಕ್ರೆಮ್ಲಿನ್ ಸೋಮವಾರ ಮೇ 8-10ರಂದು ಉಕ್ರೇನ್‌ನಲ್ಲಿ ಸಂಪೂರ್ಣ ಕದನ ವಿರಾಮವನ್ನು ಘೋಷಿಸಿದೆ.
ಯುದ್ಧ ವಿರಾಮವು ಮೇ 8ರ ಮಧ್ಯರಾತ್ರಿಯಿಂದ ಪ್ರಾರಂಭವಾಗಿ ಮೇ 10 ರವರೆಗೆ ಇರುತ್ತದೆ. ಮೇ 9ರಂದು ವಿಜಯ ದಿನಕ್ಕಾಗಿ “ಮಾನವೀಯ ಆಧಾರದ ಮೇಲೆ” ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ ಎಂದು ಕ್ರೆಮ್ಲಿನ್ ತಿಳಿಸಿದೆ.
ಇದನ್ನು ಓದಿದ್ದೀರಾ? ಗಾಜಾದಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಿ: ಇಸ್ರೇಲ್ ಪ್ರಧಾನಿಗೆ ಅಮೆರಿಕ ಅಧ್ಯಕ್ಷರ ಕರೆ
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ನಲ್ಲಿ ಶಾಂತಿ ಒಪ್ಪಂದದ ಮಧ್ಯಸ್ಥಿಕೆ ವಹಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿದೆ. ಪುಟಿನ್ ಸಂಪೂರ್ಣ ಬೇಷರತ್ತಾದ ಕದನ ವಿರಾಮವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರು.
