ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರ ಲಿಬರಲ್ ಪಕ್ಷವು ಅತ್ಯಂತ ಕುತೂಹಲಕಾರಿಯಾದ ಫೆಡರಲ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೆನಡಾದಲ್ಲಿ ಮುಂದಿನ ಸರ್ಕಾರವನ್ನು ರಚಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
343 ಸದಸ್ಯ ಬಲದ ಸಂಸತ್ತಿನಲ್ಲಿ ಲಿಬರಲ್ ಪಕ್ಷವು ವಿರೋಧ ಪಕ್ಷವಾದ ಕನ್ಸರ್ವೇಟಿವ್ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮುನ್ಸೂಚನೆ ಇದೆ. ಆದಾಗ್ಯೂ, ಪಕ್ಷವು ಸಂಪೂರ್ಣ ಬಹುಮತವನ್ನು ಪಡೆಯುವ ಬಗ್ಗೆ ಸ್ಪಷ್ಟತೆ ದೊರಕಿಲ್ಲ. ಇದು ಇತರ ಪಕ್ಷಗಳ ಬೆಂಬಲವಿಲ್ಲದೆ ಆಡಳಿತ ನಡೆಸಲು ಅನುವು ಮಾಡಿಕೊಡುತ್ತದೆ ಎನ್ನಲಾಗುತ್ತಿದೆ.
ಕೆನಡಾ 51ನೇ ರಾಜ್ಯವಾದಲ್ಲಿ ಶೂನ್ಯ ಸುಂಕ ವಿಧಿಸುವ ಭರವಸೆಯನ್ನು ಟ್ರಂಪ್ ಜಾಲತಾಣಗಳಲ್ಲಿ ಪ್ರಕಟಿಸುವರೆಗೂ ಕನ್ಸರ್ವೇಟಿವ್ ಪಕ್ಷದ ಮುಖಂಡ ಪೀರ್ ಪೊಯ್ಲಿವ್ರ್, ಹೊಸದಾಗಿ ಪ್ರಧಾನಿಯಾದ ಮಾರ್ಕ್ ಕಾರ್ನಿ ಅವರನ್ನು ಸೋಲಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಟ್ರಂಪ್ ಹೇಳಿಕೆ ಮಹತ್ವದ ಬದಲಾವಣೆಗೆ ಕಾರಣಾಗಿದ್ದು, ಕಾರ್ನಿ ಅವರು ಮತ್ತೆ ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಳಮೀಸಲಾತಿ ಗಣತಿ ಚಾರಿತ್ರಿಕ ದಾಖಲೆ, ತಪ್ಪದೇ ಭಾಗಿಯಾಗಿರಿ
ಕೆನಡಾ ಅಮೆರಿಕದ 51ನೇ ರಾಜ್ಯವಾಗಬೇಕೆಂಬ ಸಲಹೆಗಳನ್ನು ಒಳಗೊಂಡಂತೆ ಟ್ರಂಪ್ ಅವರ ಹೇಳಿಕೆಗಳು ಕೆನಡಾದ ಮತದಾರರನ್ನು ಕೆರಳಿಸಿ, ಆಡಳಿತ ಪಕ್ಷದತ್ತ ಒಲವು ತೋರಿದವು. ಇದು ಸತತ ನಾಲ್ಕನೇ ಅವಧಿಗೆ ಆ ಪಕ್ಷವನ್ನು ಮುನ್ನಡೆಸುವಂತೆ ಮಾಡಿದೆ.
ಕೆನಡಾದ ಫೆಡರಲ್ ಚುನಾವಣೆಗಳಲ್ಲಿ, ಹೌಸ್ ಆಫ್ ಕಾಮನ್ಸ್ 343 ಸ್ಥಾನಗಳನ್ನು ಹೊಂದಿದೆ. ಬಹುಮತದ ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಒಂದು ಪಕ್ಷಕ್ಕೆ 172 ಸ್ಥಾನಗಳು ಬೇಕಾಗುತ್ತವೆ.
ಎಲೆಕ್ಷನ್ಸ್ ಕೆನಡಾ ಮಾಹಿತಿಯ ಪ್ರಕಾರ, ಚುನಾವಣಾ ದಿನದ ಮೊದಲು ದಾಖಲೆಯ 73 ಲಕ್ಷ ಜನರು ಮತದಾನ ಚಲಾಯಿಸಿದ್ದರು. ದೇಶದಲ್ಲಿ 2.8 ಕೋಟಿ ಅರ್ಹ ಮತದಾರರಿದ್ದಾರೆ.