ಧಾರವಾಡ | ಪ್ರೀತಿ, ಗೌರವ, ವಿಶ್ವಾಸಗಳು ಸೇವೆಯ ಮೌಲ್ಯ ಹೆಚ್ಚಿಸುತ್ತವೆ: ಗುರುರಾಜ ಜಮಖಂಡಿ

Date:

Advertisements

ಸರಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಸೇವೆಯಲ್ಲಿರುವವರು ಪರಸ್ಪರ ಪ್ರೀತಿ, ಗೌರವ, ವಿಶ್ವಾಸ ಹೊಂದಿರಬೇಕು. ಇವು ಸೇವೆಯ ಮೌಲ್ಯವನ್ನು ಮತ್ತು ವೃತ್ತಿ ಗೌರವವನ್ನು ಹೆಚ್ಚಿಸುತ್ತವೆ ಎಂದು ಹಿರಿಯ ಪತ್ರಕರ್ತ ಗುರುರಾಜ ಜಮಖಂಡಿ ಹೇಳಿದರು.

ಧಾರವಾಡದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿ ಸಂಗಪ್ಪ ಯರಗುದ್ದಿ ವರ್ಗಾವಣೆ ಹಿನ್ನಲೆಯಲ್ಲಿ ಜರುಗಿದ ಬಿಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ‌ ಅವರು, ಸೇವೆಯಲ್ಲಿದ್ದಾಗ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಆಗುವದರಿಂದ ಹೊಸ ಜನರ, ಪ್ರದೇಶಗಳ ಪರಿಚಯವಾಗುತ್ತದೆ. ಮತ್ತು ಸೇವೆಯಲ್ಲಿದ್ದಾಗ ಪರಸ್ಪರ ಪ್ರೀತಿ, ಗೌರವ, ವಿಶ್ವಾಸಗಳು ಸೇವೆಯ ಮೌಲ್ಯ ಹೆಚ್ಚಿಸುತ್ತವೆ ಎಂದರು.

ಜರ್ನಲಿಸ್ಟ ಗಿಲ್ಡ್ ಅಧ್ಯಕ್ಷ ಬಸವರಾಜ ಹೊಂಗಲ ಮಾತನಾಡಿ, ಸಂಗಪ್ಪ ಅವರು ಸಂಘ ಜೀವಿ ಆಗಿದ್ದಾರೆ. ಇಲಾಖೆಯ ಸಂಬಂಧಗಳ ಹೊರತಾಗಿಯೂ ಗ್ರಾಮೀಣ ಜೀವನ, ಮೂಲ ಸೌಲಭ್ಯಗಳ ಬಗ್ಗೆ ಹೆಮ್ಮೆ, ಕಾಳಜಿ ವ್ಯಕ್ತಪಡಿಸುತ್ತಿದ್ದರು‌ ಎಂದರು. ಸಂಗಪ್ಪನವರು ಮಾಧ್ಯಮದವರಿಗೆ ಮತ್ತು ವಾರ್ತಾ ಇಲಾಖೆಗೆ ಕೊಂಡಿಯಂತೆ ಕೆಲಸ ಮಾಡಿದ್ದರು ಹಿರಿಯ ಪತ್ರಕರ್ತ ಬಸವರಾಜ ಹಿರೇಮಠ ಹೇಳಿದರು. ಹಿರಿಯ ಛಾಯಾಗ್ರಾಹಕ ಪ್ರಶಾಂತ ದಿನ್ನಿ ಮಾತನಾಡಿದರು. ವಾರ್ತಾ ಸಹಾಯಕ ಅಧಿಕಾರಿ ಡಾ.ಸುರೇಶ ಹಿರೇಮಠ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisements

ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಕಸ ವಿಲೇವಾರಿ ವಾಹನ ಹರಿದು 6 ವರ್ಷದ ಬಾಲಕಿ ಸಾವು

ಕಾರ್ಯಕ್ರಮದಲ್ಲಿ ಪತ್ರಕರ್ತ ಧನ್ಯಪ್ರಸಾದ, ಡಿ.ವಿ.ಕಮ್ಮಾರ, ಜಾವಿದ ಅಧೋನಿ, ಮಿಲಿಂದ ಪಿಸೆ, ಮಂಜುನಾಥ ಯಡಳ್ಳಿ, ಶ್ರೀಧರ ಮುಂಡರಗಿ, ವಾಸಿಂ ಬಾವಿಮನಿ, ಉಳವನಗೌಡ ಪಾಟೀಲ, ಮಂಜುನಾಥ ಕವಳಿ, ಹನಮಂತ ಗುಡೆನ್ನವರ, ಅಕ್ಷಯ ಕಮತಗಿ, ವಿಜೇತ ಹೊಸಮಠ, ವಾರ್ತಾ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಭಾರತಿ ಮಟ್ಟಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಕಂಪ್ಲಿ, ಎಂ.ಎಸ್.ಚೊಪದಾರ, ಕಾವ್ಯಾ ಗೌಡರ, ಶಿವಾನಂದ ಭೋವಿ, ಮನೋಜ ಮಸನಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X