ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೆರೆಗಳಾದ ಸಂಗೋಗಿ, ತಡವಲಗಾ, ನಿಂಬಾಳ ಕೆಡಿ, ಹಂಜಗಿ ಕೆರೆಗಳಿಗೆ ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಅವರ ನೇತೃತ್ವದಲ್ಲಿ ಆಕಸ್ಮಿಕ ಭೇಟಿ ನೀಡಿದರು.
ಸಂಗೋಗಿ ಕೆರೆಗೆ ರೈತರು ಜೋಡಿಸಿದ್ದ 25 ಪಂಪ್‌ಸೆಟ್‌ಗಳನ್ನು ಜಪ್ತಿ ಮಾಡಿ, ʼಕೆರೆಯ ನೀರು ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಸಲಾಗುತ್ತಿದ್ದು, ರೈತರು ಕೃಷಿಗೆ ಬಳಸಿದರೆ ಎಫ್‌ಐಆರ್ ದಾಖಲಿಸಲಾಗುವುದು” ಎಂದು ತಾಕೀತು ಮಾಡಿದರು.
“ಬೇಸಿಗೆ ಬೇಗೆಯ ಕಾವು ತಾಲೂಕಿನಾದಂತ ಏರುತ್ತಿರುವಂತೆಯೇ ತಾಲೂಕಿನಲ್ಲಿ ಜಲಸಂಕಟದ ಭೀತಿ ಎದುರಾಗಿದೆ. ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಸದ್ಯ ಕೆರೆಯಲ್ಲಿರುವ ನೀರು ಕೇವಲ ಗ್ರಾಮದ ಜನರಿಗೆ ಉಪಯೋಗಕ್ಕೆ ಮಾತ್ರ ಬಳಸಲು ಆದೇಶವಿದೆ. ರೈತರು ಕೃಷಿಗೆ ಬಳಸಬಾರದು” ಎಂದು ಎಸಿ ಅನುರಾಧಾ ಹೇಳಿದರು.

“ಮೇ ತಿಂಗಳಲ್ಲಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಲುವಾಗಿ ಕೆರೆಗಳಲ್ಲಿ ನೀರು ಸಂಗ್ರಹಿಸಲಾಗುತ್ತಿದೆ. ಅದನ್ನು ಕೃಷಿಗೆ ಬಳಸಿದರೆ ಮುಂದೆ ಕೆರೆ ತುಂಬಲು ಕಷ್ಟ. ಹೀಗಾಗಿ ಕೆರೆಯ ನೀರು ಬಳಸಬಾರದು” ಎಂದು ವಿನಂತಿಸಿದರು.
ಇಒ ನಂದೀಪ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕಂದಾಯ ನಿರೀಕ್ಷಕ ಎಚ್ ಎಚ್ ಗುನ್ನಾಪುರ, ಪಿಡಿಒ ಅಶೋಕ ಹೊನವಾಡ, ಪಿಎಸ್‌ಐ ಎಸ್ ಬಿ ಗಂಗನಹಳ್ಳಿ ಸೇರಿದಂತೆ ಇತರರು ಇದ್ದರು.
ಮಹಿಳಾ ಧ್ವನಿ ಪ್ರಾಯೋಗಿಕ ಪತ್ರಿಕೆಯ 100ನೇ ಸಂಚಿಕೆ ಬಿಡುಗಡೆ

ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಹಿಳಾ ಧ್ವನಿ ಪ್ರಾಯೋಗಿಕ ಪತ್ರಿಕೆಯ 100ನೇ ಸಂಚಿಕೆಯನ್ನು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಬಿಡುಗಡೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | 8 ಮಂದಿ ಮಕ್ಕಳೊಂದಿಗೆ ಆರಂಭವಾದ ಶಾಲೆಯಲ್ಲಿ ಇಂದು 148 ದಾಖಲಾತಿ; ಕಾರಣವೇನು?
ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್ ಎಂ ಚಂದ್ರಶೇಖರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ, ಸಹಾಯಕ ಪ್ರಾಧ್ಯಾಪಕ ಸಂದೀಪ, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಇದ್ದರು.