“ಪ್ರತಿಯೊಬ್ಬ ದಲಿತರ ಮಕ್ಕಳು ಶಿಕ್ಷಣ ಪಡೆದು ಉನ್ನತ ಸರಕಾರಿ ಹುದ್ದೆ ಪಡೆಯಬೇಕು. ಆಗ ಮಾತ್ರ ಶೋಷಿಣೆಯಿಂದ ಮುಕ್ತಿ ಪಡೆಯಲು ಸಾಧ್ಯ” ಎಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು.
ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಹಾವಂಶಿ ಗ್ರಾಮದಲ್ಲಿ ಮಾದಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತ್ಯೋತ್ಸವ ಆಚರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಅಂದಿನ ಕಾಲಾವಧಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೆಳ ಸಮುದಾಯದಲ್ಲಿ ಜನಿಸಿ ಮೇಲ್ವರ್ಗದ ಜನರಿಂದ ಸಾಕಷ್ಟು ನೋವನ್ನು ಕಂಡರು.ಅಂದಿನ ಅನಿಷ್ಟ ಜಾತಿ ಪದ್ದತಿಯನ್ನು ಮೆಟ್ಟಿ ನಿಂತು ಶಿಕ್ಷಣ ಪಡೆದು ದೇಶಕ್ಕೆ ಸಂವಿಧಾನ ನೀಡಿ ಎಲ್ಲ ಶೋಷಿತರನ್ನು ಸಮನಾಗಿ ಕಾಣಲು ತಮ್ಮ ಜೀವನವನ್ನೆ ಸವಿಸಿ ಜಗತ್ತಿಗೆ ಹೆಸರಾದರು. ಅವರು ಹಾಕಿಕೊಟ್ಟ ಮಾರ್ಗದಿಂದ ನಾವು ಇಂದಿನ ಸಮಯದಲ್ಲಿ ಸುಧಾರಣೆ ಕಾಣಲು ಸಾಧ್ಯವಿದೆ.ರಾಜ್ಯ ಸರಕಾರ ಕೂಡಲೇ ಮಾದಿಗರ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ಬರುವ ತಾ.ಪಂ,ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಸವರಾಜ ಹೆಡಿಗೊಂಡ ಮಾತನಾಡಿ, “ಅಂಬೇಡ್ಕರ್ ಅವರು ನಮ್ಮನ್ನು ಸಮಾಜದಲ್ಲಿ ಮೇಲಸ್ತರಕ್ಕೆ ತರಲು ತಮ್ಮ ಜೀವನವನ್ನೇ ಮುಡುಪಾಗಿಟ್ಟರು.ದಲಿತರು ಏಳಿಗೆ ಆಗದಂತೆ ಮೇಲ್ಜಾತಿಯ ಜನರು ಬಹಳ ಹೀನ ರೀತಿಯಲ್ಲಿ ಕಾಣುವುದನ್ನು ಇಂದಿಗೂ ಅಲ್ಲಲ್ಲಿ ಇದೆ.ಇದನ್ನು ನಾವು ಹೋಗಲಾಡಿಸಬೇಕಾದರೆ ಪ್ರತಿಯೊಬ್ಬ ದಲಿತರು ಶಿಕ್ಷಣವಂತರಾಗಬೇಕು. ರಾಜಕೀಯ,ಸಾಮಾಜಿಕ,ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಬೆಳೆಯಬೇಕು” ಎಂದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾವಂಶಿ ಗ್ರಾಮದ ವಿವಿಧ ಬೀದಿಗಳಲ್ಲಿ ಜಾಂಗ್ ಮೇಳ ಹಾಗೂ ವಿವಿಧ ವಾಧ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಜರುಗಿತು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಂಜಯಗಾಂಧಿ ಸಂಜೀವಣ್ಣನವರ, ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ, ಮುತ್ತು ಮಾದರ, ಹನುಮಂತಪ್ಪ ಸಿ.ಡಿ, ಜಗದೀಶ್ ಹರಿಜನ, ಮಹೇಶಪ್ಪ ಹರಿಜನ, ಶಂಭುಲಿಂಗಪ್ಪ ದುಟಗೇರ, ದೇವೇಂದ್ರಪ್ಪ ಗೂರವರ, ಚನ್ನವೀರಪ್ಪ ನಡುವನಹಳ್ಳಿ, ನಿಂಗಪ್ಪ ಬಣಕಾರ, ಮಂಜುನಾಥ ಬ್ಯಾಲುಹುಣಸಿ, ಬಸಪ್ಪ ದಾನಮ್ಮನವರ, ಲೋಕೇಶ್ ಮಡಿವಾಳರ, ದಿಳ್ಳೇಪ್ಪ ಬೂದಮೂರು, ಫಕ್ಕೀರಪ್ಪ ಮುದಕಮ್ಮನವರ, ನಿಂಗರಾಜ ಮುದಕಮ್ಮನವರ, ಚನ್ನಬಸಪ್ಪ ಹರಿಜನ, ಉಚ್ಚೆಂಗಪ್ಪ ಹರಿಜನ, ಮಹಿಂದ್ರಪ್ಪ ಮಾದರ, ದುರಗಪ್ಪ ಹರಿಜನ, ಪರಸಪ್ಪ ತಿಪ್ಪಣ್ಣನವರ, ರವಿ ಹರಿಜನ, ಪರಶುರಾಮ ಕರಿಯಮ್ಮನವರ, ಮಹೇಶ ಕುರವತ್ತಿ, ಕುಮಾರ ಹರಿಜನ, ಮಾರುತಿ ಕರಿಯಮ್ಮನವರ, ಮರಿಯಪ್ಪ ಮಾದರ, ರಾಮಪ್ಪ ಮುದಕಮ್ಮನವರ, ಅವಿನಾಶ ದೊಡ್ಡಮನಿ, ಪರಸಪ್ಪ ಹರಿಜನ ಹಾಗೂ ಅನೇಕರಿದ್ದರು.