ಕೊಲೆ ಪ್ರಕರಣವೊಂದರಲ್ಲಿ ಬಂಧನವಾಗಿ ಹೊರಗೆ ವ್ಯಕ್ತಿಯೊಬ್ಬರ ಭೀಕರ ಹತ್ಯೆಗೈದು ಅಪರಿಚಿತರಿಬ್ಬರು ಪರಾರಿಯಾದ ಘಟನೆ ಧಾರವಾಡ ತಾಲೂಕಿನ ಕೋಟೂರ ಗ್ರಾಮದಲ್ಲಿ ನಡೆದಿದೆ.
ಶಂಕ್ರಯ್ಯ ಮಠಪತಿ ಹತ್ಯೆಗೀಡಾದ ವ್ಯಕ್ತಿಯಾಗುದ್ದು, ಇತ್ತೀಚಿಗಷ್ಟೇ ಹತ್ಯೆ ಪ್ರಕರಣವೊಂದರಲ್ಲಿ ಬಂಧಿತರಾಗಿ ಹೊರಗೆ ಬಂದಿದ್ದರು. ಇದನ್ನರಿತ ಇಬ್ಬರು ಯುವಕರು ಸಂಜೆ ವೇಳೆ ಮನೆಯ ಮುಂದೆ ಕೂತಿದ್ದ ಶಂಕ್ರಯ್ಯನ ಬಳಿ ಏಕಾಏಕಿಯಾಗಿ ಬೈಕ್ ಮೇಲೆ ಬಂದು ಹರಿತವಾದ ಆಯುಧಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಶಂಕ್ರಯ್ಯಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳೀಯರು ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಶಂಕ್ರಯ್ಯ ಸಾವನ್ನಪ್ಪಿದ್ದಾರೆ. ಆರೋಪಿಗಳು ಚಾಕುವಿನಿಂದ ಒಂಭತ್ತಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಧಾರವಾಡ | ರಸ್ತೆಗೆ ಬಾಗಿದ ವಿದ್ಯುತ್ ಕಂಬಗಳು; ಆತಂಕದಲ್ಲಿ ಸಾರ್ವಜನಿಕರು
ಈ ಕುರಿತು ಗರಗ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಹುಡುಕಾಟದಲ್ಲಿದ್ದಾರೆ.