ಸಾರ್ವಜನಿಕ ಸೇವೆ ಸಮಯದಲ್ಲಿ ಗ್ರಾಮ ಪಂಚಾಯತ್ ಗೆ ಬೀಗ ಹಾಕಿ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ. ಸಮಸ್ಯೆಗಳನ್ನು ಕೇಳಲು ಹೋದ ಸಾರ್ವಜನಿಕರಿಗೆ ಬಲಕುಂದಿ ಗ್ರಾಮ ಪಂಚಾಯತಿಯಲ್ಲಿ ಯಾರು ಸಿಬ್ಬಂದಿಗಳು ಇಲ್ಲದ ಕಾರಣ ಗೊಂದಲ ಉಂಟಾಗಿದ್ದು, ಜನರ ಸಮಸ್ಯೆ ಆಲಿಸುವವರೇ ಇಲ್ಲದಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲ್ಲೂಕಿನ ಬಲಕುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಲಕುಂದಿ ತಾಂಡಾ ೧, ತಾಂಡಾ ೨ , ಹೊಸುರು ಗ್ರಾಮದ ಸಾರ್ವಜನಿಕರು ಸಮಸ್ಯೆಗಳ ಕುರಿತು ಬಲಕುಂದಿ ತಾಂಡಾ ಗ್ರಾಮದ ನಿವಾಸಿ, ಎಸ್. ಎಫ್. ಐ ಮುಖಂಡ ಚಂದ್ರು ರಮೇಶ್ ರಾಠೋಡ ಅವರು ಮನವಿ ಸಲ್ಲಿಸಲು ಸೋಮವಾರ ಪಂಚಾಯಿತಿಗೆ ಹೋಗಿದ್ದರು. ಪಂಚಾಯಿತಿ ಬಾಗಿಲು ತೆರೆಯದೆ ಇದ್ದುದರಿಂದ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
“ಸುಮಾರು ಮದ್ಯಾನ 3(೧-೪) ಗಂಟೆಯಾದರೂ ಯಾವ ಅಧಿಕಾರಿಗಳು ಬರಲಿಲ್ಲ. ಇತರಹದ ವ್ಯವಸ್ಥೆಯಿಂದ ಪಂಚಾಯತಿ ಅಭಿವೃದ್ಧಿ ಕುಂಠಿತಗೊಂಡಿದೆ. ಕಂದಾಯ ಗ್ರಾಮವಾಗಿ ಘೋಷಣೆಯಾಗಿ ಸುಮಾರು 5 ವರ್ಷವಾದರೂ ಕೂಡ ಅಲ್ಲಿನ ಜನರಿಗೆ ಹಕ್ಕುಪತ್ರಗಳನ್ನು ನೀಡಿಲ್ಲ. ಸರಿಯಾಗಿ ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ ಇಲ್ಲ” ಎಂದು ಚಂದ್ರು ರಾಠೋಡ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯಾದ್ಯಂತ ಸಂಭ್ರಮದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತ್ಯುತ್ಸ
“ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಸ್ಥಳೀಯ ಶಾಸಕರು ವಿಜಯಾನಂದ ಕಾಶಪ್ಪನವರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕೂಡಲೇ ಆದಷ್ಟು ಬೇಗ ಸಮಸ್ಯೆಗಳನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದರು.

ನಮ್ಮ ಗ್ರಾಮದ ಪಂಚಾಯತ್ ವ್ಯವಸ್ಥೆ ತುಂಬಾ ಚೆನ್ನಾಗಿದೆ ಏಕೆಂದರೆ ಇಂದು ನಮ್ಮ ಬಲಕುಂದಿ ಗ್ರಾಮದ ಗ್ರಾಮಸ್ತರ ಮನೆಯ ತಕರಾರು ತುಂಬಾ ಕಷ್ಟಕರ ವಾದ ಸಮಸ್ಯೆ ಇತ್ತು ಅದನ್ನು ಮಾನ್ಯ pdo ಸರ್ ಅಧ್ಯಕ್ಷರು ವಾರ್ಡಿನ ಸದಸ್ಯರು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಈ ಸಮಸ್ಯೆಯನ್ನು ಸರಿಪಡಿಸಿ ಅರ್ಜಿದಾರರಾದ ಎಲ್ಲರಿಗೂ ಒಪ್ಪಿಸಿ ಒಂದು ಗೂಡಿಸಿ ಸಮಸ್ಯೆಯನ್ನು ಪರಿಹರಿಸಿದರು.
ಆದ್ರೆ ಒಂದು ವಿಷಯ ಏನೆಂದರೆ ಈ ಮೇಲೆ ಕಳಿಸಿದ ಚಿತ್ರ ಇವತ್ತಿನದು ಅಲ್ಲ ಎಂದು ನಾವು ಅಂದ್ರೆ ಗ್ರಾಮಸ್ಥರ ಸಮ್ಮುಖದಲ್ಲಿ ರುಜುವಾತು ಮಾಡುತ್ತೇವೆ.
ಬೇಕಾದ್ರೆ ಈಗಲೇ ಬೇಗನೆ ಬನ್ನಿ ಪರೀಕ್ಷಿಸಿ ಇಂತಹ ಸುಳ್ಳು ಸುದ್ದಿ ಹೊರಡಿಸುವವರ ವಿರುದ್ಧ ಖಂಡಿಸಿ
ಹಾಗೆ ಸುಮ್ಮನೆ ಇಂತಹ ಸುಳ್ಳು ಸುದ್ದಿಗಳನ್ನು ಕಳಿಸಿ ಜನಕ್ಕೆ ಮೋಸ ಮಾಡ್ಬೇಡಿ