“ದೇಶದಲ್ಲಿ ಪ್ರಸ್ತುತ ದಿನಮಾನದ ಬದಲಾವಣೆಗಳಲ್ಲಿ ರಾಷ್ಟ್ರದ ಏಕತೆಗೆ ಸಮಾನತೆಯ ಹರಿಕಾರ ಬಸವಣ್ಣನವರ ಕ್ರಾಂತಿಕಾರಿ ವಿಚಾರಧಾರೆಗಳು ಅವಶ್ಯವಾಗಿವೆ” ಎಂದು ಎಸ್ಎಫ್ಐ ರಾಷ್ಟ್ರೀಯ ಉಪಾಧ್ಯಕ್ಷ ನಿತೀಶ ನಾರಾಯಣ ಹೇಳಿದರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣರವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಮಾತನಾಡಿದರು.
“ಬಸವಣ್ಣ ಅವರು ಜ್ಞಾನದ ಬೆಳಕಿನ ಸಂಕೇತವಾಗಿದ್ದಾರೆ. ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಜ್ಞಾನದ ಸಂಕೇತವಾಗಿದ್ದರೆ. ಇವರು 12ನೇ ಶತಮಾನದ ಮಾನವೀಯತೆ ಸಾರಿದವರು. ಇವರ ನಂತರ ಬಂದಂತಹ ನಾರಾಯಣ ಗುರು, ಪೆರಿಯರ್, ಅಂಬೇಡ್ಕರ್, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಇವರೆಲ್ಲರೂ ಮಾನವೀಯ ಮೌಲ್ಯಕ್ಕಾಗಿ ದುಡಿದವರು. ಸಮಾಜದ ನೈತಿಕ ಮೌಲ್ಯಗಳು ಕಟ್ಟುವಲ್ಲಿ ಜಾತಿ ಗೋಡೆಗಳನ್ನು ಮೀರಿದವರು” ಎಂದರು.
“ರಾಷ್ಟ್ರೀಯದ ಏಕತೆಗಾಗಿ ಮತ್ತು ಸಮಾಜ ಸುಧಾರಣೆಗಾಗಿ ತಮ್ಮನ್ನು ತೊಡಗಿಸಿಕೊಂಡು ಕ್ರಾಂತಿಯ ಹೆಜ್ಜೆ ಇಟ್ಟವರು ಬಸವಣ್ಣ. ಇಂದು ಎಸ್ಎಫ್ಐ ಸಮಾಜದ ಬದಲಾವಣೆ ಮತ್ತು ಸಮಾನತೆಗಾಗಿ ದುಡಿಯುವುದಾಗಿದೆ. ನಾವು ಜಾತಿ ರಹಿತ ಸಮಾಜ ಮತ್ತು ತಾರತಮ್ಯವಿಲ್ಲದ ಸಮಾಜ ಕಟ್ಟುವುದಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರೋಣ | ಉದ್ಘಾಟನೆಯಾದರೂ ಬಾಗಿಲು ತೆರೆಯದ ಇಂದಿರಾ ಕ್ಯಾಂಟೀನ್; ಸ್ಥಳೀಯರ ಆಕ್ರೋಶ
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ ಎಸ್, ಜಿಲ್ಲಾಧ್ಯಕ್ಷ ಬಸವರಾಜ ಎಸ್, ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ್, ಡಾ. ದೊಡ್ಡಬಸವರಾಜ ಗುಳೆದಾಳು, ಗ್ಯಾನೇಶ್ ಕಡಗದ, ಪದಾಧಿಕಾರಿ ಸುಜಾತ ಕಲಬುರಗಿ, ಚಂದ್ರು ರಾಠೋಡ್, ಅನಂತರಾಜ್ ಬಿ ಎಮ್, ರಜಿಯಾ ಯಸ್ಮೀನ್ ಇಂಜಿನಿಯರಿಂಗ್ ಕಾಲೇಜ್ ಘಟಕ ಅಧ್ಯಕ್ಷ ರೇವಣ್ಣಸಿದ್ದು ವಿ, ಮುಖಂಡರಾದ ಬಾಲಾಜಿ ಗಂಗಾವತಿ, ಇಮಾಮ್ ಸಾಬ್ ಯಾದಗಿರಿ, ಪವನ್ ವಿಜಯನಗರ, ಜಯೆಶ್, ಸುನಿಲ್ ಕುಮಾರ್ ಎಲ್, ಕೃಷ್ಣ ನಾಯಕ, ಬಾಲ ಸಂಘಂನ ಧನುಷ್ ದೊಡ್ಡಮನಿ, ಮೈನುದ್ದಿನ್ ಇಲಿಬುಡ್ಡಿ, ಅಭಿಷೇಕ್ ಬಂಡಿವಡ್ಡರ, ತೇಜಸ್ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.