ಜಾಗತಿಕ ಭೂಪಟದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವೈವಿಧ್ಯತೆಗೆ ಭಾರತ ಹೆಸರುವಾಸಿಯಾಗಿದ್ದರೆ, ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭೂಪಟದಲ್ಲಿ ಕರ್ನಾಟಕದ ಸ್ಥಾನ ಎದ್ದು ತೋರುವಂಥದ್ದು. ಭಾರತದ ಮಟ್ಟಿಗೆ ಧರ್ಮ ಮತ್ತು ಅಧ್ಯಾತ್ಮಗಳ ಗೆರೆ ಅತ್ಯಂತ ತೆಳುವಾದ್ದರಿಂದ ಇಲ್ಲಿ ಅಧ್ಯಾತ್ಮ ಅನ್ನುವಾಗಲೇ ಧರ್ಮವೂ ಸೇರಿಕೊಂಡುಬಿಡುವುದು ಮತ್ತು ಧಾರ್ಮಿಕತೆಯೊಡನೆ ಗುರುತಿಸಿಕೊಂಡ ಸಾಧಕರು, ಅವಧೂತರು, ರಹಸ್ಯದರ್ಶಿಗಳು ಆಧ್ಯಾತ್ಮವಾದಿಗಳೆಂಬ ಗುರುತು ಪಡೆಯುವರು. ವಾಸ್ತವದಲ್ಲಿ ಅಧ್ಯಾತ್ಮಕ್ಕೆ ಧರ್ಮದ ಅಗತ್ಯವಿಲ್ಲ. ದೇವರ ಅಗತ್ಯವೂ ಇಲ್ಲ. ಆದರೆ ಧಾರ್ಮಿಕತೆಗೆ ಅಧ್ಯಾತ್ಮದ ಅಗತ್ಯ ಇದೆ. ಈ ಜಗತ್ತು ಕೇವಲ ಮನುಷ್ಯರಿಗೆ…

ಗಾಯತ್ರಿ ಎಚ್. ಎನ್.
ತೀರ್ಥಹಳ್ಳಿಯವರಾದ ಗಾಯತ್ರಿ ಎಚ್.ಎನ್ ಅವರು ಲೇಖಕಿಯಾಗಿ ಚೇತನಾ ತೀರ್ಥಹಳ್ಳಿ ಎಂಬ ಹೆಸರಿನಿಂದ ಚಿರಪರಿಚಿತರು. ಅಲಾವಿಕಾ ಹೆಸರಿನಲ್ಲಿ ಒಂದು `ಇ-ಪುಸ್ತಕ’ ಪ್ರಕಟಿಸಿದ್ದಾರೆ. ಉಫೀಟ್ (ಕವನ ಸಂಕಲನ), ಭಾಮಿನಿ ಷಟ್ಪದಿ (ಅಂಕಣ ಕಾದಂಬರಿ), ಗುಟ್ಟು ಬಚ್ಚಿಡಲು ಬರುವುದಿಲ್ಲ (ಕವನ ಸಂಕಲನ), ಸಿದ್ಧಾರ್ಥ (ಅನುವಾದಿತ ಕೃತಿ), ಬಿಸಿಲ ಚೂರಿನ ಬೆನ್ನು (ಪ್ರಬಂಧ ಸಂಕಲನ), ನೀಲಿಬಾನಿನಲ್ಲಿ ಕೆಂಪು ಸೂರ್ಯ (ಜೆ.ಎನ್.ಯು ಭಾಷಣಗಳ ಅನುವಾದ) ಸೇರಿದಂತೆ 15ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಿಸಿದ್ದಾರೆ. ಕೆಲ ವರ್ಷ ಪತ್ರಕರ್ತೆಯಾಗಿದ್ದ ಅವರು, ಪ್ರಸ್ತುತ ಫ್ರೀಲಾನ್ಸ್ ಕಂಟೆಂಟ್ ಕ್ರಿಯೇಟರ್ ಮತ್ತು ಅನುವಾದಕಿಯಾಗಿದ್ದಾರೆ. ಜೊತೆಗೆ Aralimara.com ಎಂಬ ಅಧ್ಯಾತ್ಮ - ಜೀವನ ಶೈಲಿ ಸಂಬಂಧಿತ ಜಾಲತಾಣ ನಿರ್ವಹಣೆ ಮಾಡುತ್ತಿದ್ದಾರೆ.