ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದು, ರಾಜ್ಯದಲ್ಲಿ ಶೇಕಡ 66.14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಶೇಕಡ 8ರಷ್ಟು ಫಲಿತಾಂಶ ಹೆಚ್ಚಳವಾಗಿದೆ. 22 ವಿದ್ಯಾರ್ಥಿಗಳು 625ಕ್ಕೆ 625 ಅಂಕವನ್ನು ಪಡೆದಿದ್ದಾರೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ, ಎರಡನೇ ಸ್ಥಾನವನ್ನು ಉಡುಪಿ ಪಡೆದಿದೆ.
ಇದನ್ನು ಓದಿದ್ದೀರಾ? ಸಿಬಿಎಸ್‌ಸಿ 10 ಮತ್ತು 12 ನೇ ತರಗತಿ ಫಲಿತಾಂಶ ಪ್ರಕಟ
ದಕ್ಷಿಣ ಕನ್ನಡ ಜಿಲ್ಲೆ (ಶೇ.91.12), ಉಡುಪಿ ಜಿಲ್ಲೆ (ಶೇ.89.96), ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ಮೊದಲ ನಾಲ್ಕು ಸ್ಥಾನ ಪಡೆದಿವೆ. ಕೊನೆಯ ಸ್ಥಾನವನ್ನು ಕಲಬುರಗಿ ಪಡೆದಿದೆ.
ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರಿನ ಜಾನ್ಹವಿ, ಧನಲಕ್ಷ್ಮೀ ಟಾಪರ್‌ಗಳಾಗಿದ್ದಾರೆ. ಒಟ್ಟು 22 ವಿದ್ಯಾರ್ಥಿಗಳು ಟಾಪರ್ಸ್‌ಗಳಾಗಿದ್ದಾರೆ.
ಈ ಬಾರಿ ಶೇಕಡ 74 ಹೆಣ್ಣುಮಕ್ಕಳು ಉತ್ತೀರ್ಣರಾದರೆ, ಶೇಕಡ 58.07 ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ.
