ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ, ಅವರಿಗೆ ಎಸ್‌ಸಿ ಸ್ಥಾನಮಾನ ದೊರೆಯುವುದಿಲ್ಲ. ಅವರು ಮಾತಾಂತರಗೊಂಡ ತಕ್ಷಣ ತಮ್ಮ SC ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಮಾತ್ರವಲ್ಲ, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ವ್ಯಾಪ್ತಿಯಿಂದಲೂ ಹೊರಗುಳಿಯುತ್ತಾರೆ. ಅವರಿಗೆ ಆ ಕಾಯ್ದೆಯಡಿ ರಕ್ಷಣೆ ನೀಡಲಾಗುವುದಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ಹೇಳಿದೆ.
ಗುಂಟೂರು ಜಿಲ್ಲೆಯ ಕೊತ್ತಪಾಲೆಂನಲ್ಲಿ ದಲಿತ ಸಮುದಾಯದ ಚಿಂತದ ಆನಂದ್ ಎಂಬವರು ದಶಕಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಚರ್ಚ್‌ನ ಪಾದ್ರಿಯೂ ಆಗಿದ್ದರು. ಆದಾಗ್ಯೂ, ತಮ್ಮನ್ನು ಮೂಲತಃ ದಲಿತನೆಂದು ಪ್ರಬಲ ಜಾತಿಗೆ ಸೇರಿದವರು ಜಾತಿ ಆಧಾರದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ, ಆರೋಪಿ ಅಕ್ಕಲಾ ರಾಮಿರೆಡ್ಡಿ ಮತ್ತಿತರರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ 2021ರ ಜನವರಿಯಲ್ಲಿ ದೂರು ದಾಖಲಿಸಿದ್ದರು.
ಅವರು ದಾಖಲಿಸಿರುವ ದೂರನ್ನು ವಜಾಗೊಳಿಸುವಂತೆ ಕೋರಿ ಆರೋಪಿ ಅಕ್ಕಲಾ ರಾಮಿರೆಡ್ಡಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎನ್ ಹರಿನಾಥ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ಆರೋಪಿ ಅರ್ಜಿದಾರರ ಪರವಾಗಿ ವಾದ ಮಂಡಿಸಿದಿದ ವಕೀಲರು, “ಆನಂದ್ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಹತ್ತು ವರ್ಷಗಳ ಕಾಲ ಪಾದ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.ಅವರು ಸಂವಿಧಾನದ ಪರಿಶೀಷ್ಟ ಜಾತಿಗಳು ಕಾಯ್ದೆಯ ಅಡಿಯಲ್ಲಿ ಎಸ್‌ಸಿ ಸದಸ್ಯರೆಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
ಅವರ ವಾದಕ್ಕೆ ಪ್ರತಿವಾದ ಮಂಡಿಸಿದ ಪಾದ್ರಿ ಆನಂದ್ ಪರ ವಕೀಲರು, “ಆನಂದ್ ಅವರು ಎಸ್‌ಸಿ ಹಿಂದು ಜಾತಿ ಪ್ರಮಾಣಪತ್ರವನ್ನು ಹೊಂದಿದ್ದಾರೆ. ಹೀಗಾಗಿ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅವರು ರಕ್ಷಣೆಗೆ ಅರ್ಹರಾಗಿದ್ದಾರೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಶಾಮನೂರು ಹುನ್ನಾರವೇನು? ಕಾಂಗ್ರೆಸ್‌ನಲ್ಲಿ ಕ್ರಮ ಯಾಕಿಲ್ಲ?
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, “ಕ್ರೈಸ್ತ ಧರ್ಮದಲ್ಲಿ ಜಾತಿ ಆಧಾರಿತ ಭೇದಗಳು ಇರವುದಿಲ್ಲ. ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಕಾರಣ ಅವರು ಯಾವುದೇ ಜಾತಿ ಪ್ರಮಾಣವನ್ನು ಹೊಂದಿದ್ದರೂ ಅವರ SC ಸ್ಥಾನಮಾನ ರದ್ದಾಗುತ್ತದೆ. ಎಸ್‌ಸಿ, ಎಸ್‌ಟಿ ಸಮುದಾಯಗಳನ್ನು ತಾರತಮ್ಯ ಮತ್ತು ದೌರ್ಜನ್ಯಗಳಿಂದ ರಕ್ಷಿಸಲು ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಅದರ ನಿಬಂಧನೆಗಳು ಇತರ ಧರ್ಮಗಳಿಗೆ ಮತಾಂತರ ಆಗಿರುವವರಿಗೆ ಅನ್ವಯವಾಗುವುದಿಲ್ಲ” ಎಂದು ಹೇಳಿದೆ.
ಪಾದ್ರಿ ಆನಂದ್ ಅವರು ಸುಳ್ಳು ದೂರು ದಾಖಲಿಸುವ ಮೂಲಕ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದಿರುವ ನ್ಯಾಯಾಲಯವು ಆರೋಪಿಗಳ ವಿರುದ್ದದ ಪ್ರಕರಣವನ್ನು ರದ್ದುಗೊಳಿಸಿದೆ.
ಆಂದ್ರಪ್ರದೇಶದ ದಲ್ಲಿ ನ್ಯಾಯಾಧೀಶರ ಕೊಟ್ಟ ತೀರ್ಪು ದಲಿತರಿಗೆ ಹೃದಯದ ಭಾಗಕ್ಕೆ ತಿಳಿದಂತೆ… ಈಗ ನಾವು ದಳಿತರು ಒಲೆ, ಮಾದಿಗರು … ಬಾಡು ತಿನ್ನಲ್ಲ, ಯಾವುದೇ ಅಶುದ್ಧ ವಸ್ತುಗಳನ್ನು ಮುಟ್ಟಲ್ಲ, ನಾವು ಸಹ ಭಕ್ತಿ ಮಾಡುತ್ತಿದ್ದೇವೆ, ಮೇಟಿ ಹಿಂದುಗಳು, ನಮ್ಮನ್ನು ಬ್ರಾಹ್ಮಣ, ಲಿಂಗಾಯತ, ಮತ್ತು ಅರ್ಚಕರ ಜಾತಿಗೆ ಸೇರಿಸಲಿ, ನಮ್ಮನ್ನು ತಿರುಪತಿ, ಮಂತ್ರಾಲಯ, ಧರ್ಮಸ್ಥಳ, ಉಡುಪಿ ಮುಂತಾದ ಮಂದಿರಗಳಲ್ಲಿ ಪ್ರಾಧಾನ ಮುಖ್ಯ ಅರ್ಚಕರನ್ನಾಗಿ ಮಾಡಲಿ… ದಳಿತನಿಗೆ ನ್ಯಾಯ ಸಿಗಲಿಲ್ಲ, ದಳಿತನಿಗೆ ಅನ್ಯಾಯ ತೀರ್ಪುನಿಡಿದ್ದಾರೆ….. ಆ ಫಾದರ್ ರವರ ಅಪ್ಪ ತಾತ ಮತ್ತು ಪೂರ್ವಜರು ವೃತ್ತಿ ಅದಾಗಿತ್ತು ಅದರಿಂದ ಆ ಜಾತಿ ಬಂದಿರಬಹುದು,
ಜಡ್ಜ್ ಸಾಹೇಬರೆ ತಾವು ನ್ಯಾಯದೀಶ್ವರರಲ್ಲವೆ ತಾವು ದೇವರ ಸಮಾನರಾಗಿದ್ದಿರಿ… ಚಪ್ಪಲಿ ಹೊಲಿಯುವ ಸ್ಥಿತಿ ಯಲ್ಲಿ ಇರುವ ನಮ್ಮನ್ನು ಪ್ರದಾನ ಅರ್ಚಕರನ್ನಾಗಿ ಮಾಡಿ,,,