ಪಹಲ್ಗಾಮ್ ದಾಳಿ ಬೆನ್ನಲ್ಲೇ ಸಿಂಧೂ ನದಿ ಒಪ್ಪಂದವನ್ನು ಕೈಬಿಡುವ ಮೂಲಕ ಭಾರತ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಮುಂದಾಗಿದೆ. ಇದೀಗ ಕರ್ನಾಟಕದಲ್ಲೂ ಇದು ಮುಂದುವರಿದಿದ್ದು, ಪಾಕಿಸ್ತಾನಕ್ಕೆ ರಫ್ತು ಮಾಡುವ ತರಕಾರಿಗಳನ್ನು ನಿಲ್ಲಿಸಲು ಕೋಲಾರ ರೈತರು ನಿರ್ಧರಿಸಿದ್ದಾರೆ.
ಏಷ್ಯಾದಲ್ಲೇ ಎರಡನೇ ದೊಡ್ಡ ಟೊಮೊಟೊ ಮಾರುಕಟ್ಟೆ ಕೋಲಾರದಲ್ಲಿದ್ದು, ಇಲ್ಲಿಂದ ನೇಪಾಳ, ಬಾಂಗ್ಲಾ ಸೇರಿದಂತೆ ಇತರೆ ದೇಶಗಳಿಗೆ ತರಕಾರಿ, ಹಣ್ಣುಗಳನ್ನು ರಫ್ತು ಮಾಡಲಾಗುತ್ತದೆ.
ಇಲ್ಲಿಂದ ಪಾಕಿಸ್ತಾನಕ್ಕೂ ಸಹ ಬೇಡಿಕೆಯ ಅನುಸಾರ ಟೊಮೊಟೊ ಸೇರಿದಂತೆ ಇತರೆ ಹಣ್ಣು ತರಕಾರಿಗಳನ್ನು ರಫ್ತು ಮಾಡಲಾಗುತ್ತಿತ್ತು.

ಕೋಲಾರ ಜಿಲ್ಲೆಯಲ್ಲಿ ಬೇಸಿಗೆ ಸಮಯದಲ್ಲೇ ಸುಮಾರು 1500 ಹೆಕ್ಟೇರ್ ಟೊಮೊಟೊ ಬೆಳೆಯಲಾಗಿದ್ದು, ಸುಗ್ಗಿ ಸಮಯದಲ್ಲಿ ಸುಮಾರು 10 ಟನ್ ಬೆಳೆ ಇರುತ್ತದೆ. ಪ್ರತಿ ದಿನ 1500 ಕ್ಕೂ ಹೆಚ್ಚು ವಾಹನಗಳು ಇಲ್ಲಿಂದ ಹೊರದೇಶಗಳಿಗೆ ಹೋಗುತ್ತವೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಪುತ್ಥಳಿ ವಿವಾದ; ಕೆಂಪೇಗೌಡರನ್ನು ಅಪಮಾನಿಸಿದರೆ ತಕ್ಕ ಪಾಠ: ನಿರ್ಮಾಪಕ ಉಮಾಪತಿ
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನಿ ಉಗ್ರರು ದಾಳಿ ಮಾಡಿದ ಬೆನ್ನಲ್ಲೇ ಇಲ್ಲಿನ ರೈತರು, ಮಂಡಿ ವರ್ತಕರು ಟೊಮೊಟೊ ಇತ್ಯಾದಿ ಹಣ್ಣುಗಳನ್ನು ಪಾಕಿಸ್ತಾನಕ್ಕೆ ಕಳಿಸಬಾರದು ಎಂದು ನಿರ್ಧರಿಸಿದ್ದಾರೆ.