ತುಮಕೂರು | ಶ್ರಮ ಸಂಸ್ಕೃತಿಯ ಪರಿಕಲ್ಪನೆ ಕಾಯಕ ಚಳುವಳಿ : ಬಿ.ಉಮೇಶ್‌

Date:

Advertisements

ಬಸವಣ್ಣನವರ ಕಾಯಕ ಸಿದ್ದಾಂತ ಭಾರತದ ಆರ್ಥಿಕ ಚಲನೆಗೆ ಕಾರಣವಾಗಿದೆ ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಉಮೇಶ್‌ ತಿಳಿಸಿದರು.

ತುಮಕೂರು ನಗರದ ಭವನದಲ್ಲಿ ಆಯೋಜಿಸಿದ್ದ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ವಿಶ್ವಗುರು ಬಸವಣ್ಣನವರ 892ನೇ ಜಯಂತಿ ಹಾಗೂ ಪ್ರೊ. ಬಿ ಕೃಷ್ಣಪ್ಪನವರ 22ನೇ ಸ್ಮರಣೆಯ ಅಂಗವಾಗಿ ಕಾಯಕ ಚಳುವಳಿ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಭಾಷೆಯಲ್ಲಿ ವಚನಗಳ ರಚನೆ ಮಾಡಿ ಕರ್ಮ ಸಿದ್ದಾಂತದ ಬದಲಾಗಿ ಕಾಯಕ ಸಿದ್ದಾಂತವನ್ನು ಬಸವಣ್ಣನವರು ಚಾಲನೆಗೆ ತಂದರು ಈ ಮೂಲಕ ಶ್ರಮ ಸಂಸ್ಕೃತಿಯ ಪರಿಕಲ್ಪನೆ ಕಾಯಕ ಮತ್ತು ದಾಸೋಹಕ್ಕೆ ಪೂರಕವಾಗಿಸಿತ್ತು. ಅಂದು ಸ್ಥಿತಿ ಪ್ರಜ್ಞೆ ಇದ್ದಂತಹ ಸಮಾಜದಲ್ಲಿ ಪ್ರೀತಿ, ತಾಳ್ಮೆ, ಲಿಂಗ ಸಮಾನತೆ ಸಂವೇದನೆ ಸಾಮಾನ್ಯ ಜನರಲ್ಲಿ ಒಗ್ಗೂಡಿಸಲು ಕಾಯಕ ಪ್ರಮುಖ ಕಾರಣವಾಯಿತು. ಆದರೆ ಇಂದಿನ ಸಮಾಜ ಜನಿವಾರ ಮತ್ತು ಹಿಜಾಬ್‌ ಚರ್ಚೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮುಖ್ಯತೆ ಇಲ್ಲದಂತೆ ಮಾಡಿದೆ ಎಂದರು

ಅಧಿಕಾರದ ಲಾಭಕ್ಕಾಗಿ ಇಂದಿನ ಪ್ರಭುತ್ವ ಹಲವಾರು ರೀತಿಯ ಯೋಜನೆಗಳನ್ನು ಮಾಡುತ್ತಿದೆ, ಲಾಭವೆ ಪ್ರಭುತ್ವದ ಧೇಯವಾಗಿದೆ. ಕಾಯಕ ಮತ್ತು ದಾಸೋಹದ ಚೈತನ್ಯ ಸಂಸ್ಕೃತಿ ಇಂದು ಮಠ ಸಂಸ್ಕೃತಿಯಲ್ಲಿ ಮನುಷ್ಯರ ಜೀವನ ಕ್ರಮಕ್ಕೆ ಪರ್ಯಾಯ ನೀಡಲು ವ್ಯವಸ್ಥೆಯನ ಭಾಗವಾಗಿರುವುದು ವಿಪರ್ಯಾಸವಾಗಿದೆ. ಹಾಗಾಗಿ ವಚನಕಾರರ ದಿಕ್ಕಿನಲ್ಲಿ ನಾವು ಸಂಘಟಿತರಾಗಿ ಸಮಾಜ ಬದಲಾವಣೆಗೆ ಪ್ರಯತ್ನಿಸಬೇಕೆಂದರು. 

Advertisements

  ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ  ಬಸವಣ್ಣ ಜನ್ಮ ತಾಳುವ ಮೊದಲೇ ಈ ದೇಶದಲ್ಲಿ ಲೋಕಾಯತರು, ಮಹಾವೀರ, ಬುದ್ಧನಂತಹ ಮಹಾಪುರುಷರು 5ರಿಂದ 9ನೇ ಶತಮಾನದ ವರೆಗೂ ಹಾಗೂ ಬಸವ ಪೂರ್ವ ಯುಗದಲ್ಲಿ 39 ಶಿವಶರಣರು 9ರಿಂದ 11ನೇ ಶತಮಾನದವರೆವಿಗೂ ಜನರ ಮೇಲಿನ ಶೋಷಣೆಯನ್ನು ನಿರಾಕರಿಸಿ ಸುಧಾರಣೆಗಾಗಿ ಪ್ರಯತ್ನಿಸಿದರು. ಸಮಾಜದಲ್ಲಿರುವ ಅನುತ್ಪಾದಕ ಅಲ್ಪಸಂಖ್ಯಾತ ಪುರೋಹಿತ ವರ್ಣಗಳು ಸದಾ ಉತ್ಪಾದನೆಯಲ್ಲಿ ತೊಡಗಿರುವ ಬಹುಸಂಖ್ಯಾತ ವರ್ಣಗಳಾದ ಶೂದ್ರರನ್ನು, ಪಂಚಮರನ್ನು ಮತ್ತು ಮಹಿಳೆಯರನ್ನು ಏಕೆ ದೂರವಿಟ್ಟಿದ್ದಾರೆ ಎನ್ನುವುದನ್ನು ಬಸವಣ್ಣ ಗಮನಿಸಿ ವರ್ಣ, ಜಾತಿ, ಜ್ಞಾನ ಹಾಗೂ ಅಧಿಕಾರದ ಮೂಲಕ ಸುಲಿಗೆ ಅಥವಾ ಶೋಷಣೆಯೇ ಜನರ ದುಃಖದ ಮೂಲವೆಂದು ಜನಸಮುದಾಯಕ್ಕೆ ತೋರಿಸಿಕೊಟ್ಟರು ಸುಲಿಗೆ ಮತ್ತು ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ಹೊಸ ದಾರಿ ತೋರಿಸುವುದೇ ಬಸವಣ್ಣನವರ ಬದುಕಿನ ಗುರಿಯಾಗಿತ್ತು. ಹಾಗಾಗಿ ಜಡ ಸಂಸ್ಕೃತಿಯ ಬದಲು ಕಾಯಕ ಪ್ರಧಾನವಾದಂತಹ ಚೈತನ್ಯ ಸಂಸ್ಕೃತಿಗೆ ಹೊಸ ದೇವರು, ಹೊಸ ಜೀವನ ಕ್ರಮ , ಹೊಸ ವಿಚಾರ, ಹೊಸ ತಿಳುವಳಿಕೆ , ಹೊಸ ಮೌಲ್ಯ, ಮಾನವ ಪ್ರೀತಿ ಸಂಬಂಧವನ್ನು ಕಲ್ಪಿಸುವ ಚಿಂತನೆ ಮಾಡಿ ಕಾಯಕ ಚಳುವಳಿಯನ್ನು ಅಂದಿನ ಸಂದರ್ಭದಲ್ಲಿ ಕಟ್ಟಿದರು ಎಂದು ತಿಳಿಸಿದರು.

 ಕಾಯಕ ತತ್ವಕ್ಕೆ ಜಾತಿ ವರ್ಗಗಳ ಬೇಧವಿಲ್ಲದೇ ಶ್ರಮ ತತ್ವದ ಮೇಲೆ ಗೌರವಿಸುವ ಕಾಯಕ ನಿಷ್ಠೆಗೆ ಬದ್ಧರಾಗಿ ಸಂತೃಪ್ತ ಬದುಕು ಸಮಾನತೆ, ನಿಸ್ವಾರ್ಥ ಭಾವನೆ ಅರ್ಪಣ ಮನೋಭಾವಗಳಿಂದ ಶರೀರ ಧಣಿಸುವುದಷ್ಟೆ ಅಲ್ಲ ಪರಿಶುದ್ಧ ಮನಸ್ಸಿನಿಂದ ಕೂಡಿದ ಕರ್ತವ್ಯ ನಿಷ್ಠೆಯೇ ಕಾಯಕವೆಂದರು. ಸಮಾನತೆಯ ತತ್ವದ ಆಧಾರದ ಮೇಲೆ ರೂಪುಗೊಂಡ ವಿಶಿಷ್ಟ ಕಲ್ಪನೆಯೇ ಕಾಯಕ ದಾಸೋಹಕ್ಕೆ ಮನ್ನಣೆ ನೀಡಿ ಕಾಯಕವೇ ಕೈಲಾಸವೆಂದು ಬಸವಣ್ಣ ಪ್ರತಿಪಾಧಿಸಿದರು ಇದರ ಜೊತೆಗೆ ಡಾ. ಬಿ.ಆರ್‌ ಅಂಬೇಡ್ಕರ್‌ ನವಭಾರತದ ಸಂವಿಧಾನವನ್ನು ರಚಿಸಿದರು. ಬಸವಣ್ಣನವರು 12ನೇ ಶತಮಾನದಲ್ಲಿ ಮನುಕುಲದ ಸಂವಿಧಾನವನ್ನು ರಚಿಸಿ ವಿಶ್ವ ಮಾನವ ಕಲ್ಪನೆಯಲ್ಲಿ ವಚನಗಳನ್ನು ಬರೆದು ಯಾವುದೇ ಒಂದು ಜಾತಿ ಸಮುದಾಯದ ಹೇಳಿಗೆಯನ್ನು ಬಯಸದೇ ಸಕಲ ಜೀವಿಗಳಿಗೆ ಲೇಸನ್ನು ಬಯಸಿದರು. ಆ ಮೂಲಕ ಸಂಸ್ಕಾರ, ನಾಗರೀಕತೆ ಮೌಲ್ಯಗಳನ್ನು ನೈತಿಕತೆಯ ಶುದ್ಧತೆ-ಬದ್ಧತೆಯ ಆಧಾರದಲ್ಲಿ ಸಮಾನತೆಯನ್ನು ಎತ್ತಿಹಿಡಿದರು. ಹಾಗಾಗಿ ಸಾಮಾನ್ಯ ಜನರ ಆತ್ಮ ವಿಮರ್ಶೆಯಿಂದ 1409 ವಚನಗಳು ಲೋಕ ಸಂಧೇಶವನ್ನು ನೀಡುವ ಮಾನವ ಕುಲದ ಸಂವಿಧಾನವಾಗಿ ಸಮಾಜ ಮುಖಿಯ ಚಿಂತನೆಯ ವ್ಯಕ್ತಿಯಾಗಿ ಬಸವಣ್ಣ ಕಂಡುಬರುತ್ತಾರೆ. ಇಷ್ಟೇ ಅಲ್ಲದೆ ಮಹಿಳೆಯರಿಗೆ ವೈಚಾರಿಕ, ಅಭಿವ್ಯಕ್ತಿ, ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾಧಿಸಿ ಸಮಾನತೆಗಾಗಿ ಎಲ್ಲರಿಗೂ ಇಷ್ಟಲಿಂಗ ಧಾರಣೆ ಮಾಡಿ ಸಮಾಜವನ್ನು ಶುದ್ಧೀಕರಣ ಮಾಡುವ ಕೆಲಸ ಮಾಡಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಜಗಜ್ಯೋತಿ ಬಸವಣ್ಣ ಗುರುತರವಾದ ಅಪೂರಪದ ಮಹಾನ್‌ ವ್ಯಕ್ತಿಯಾಗಿದ್ದಾರೆ ಎಂದರು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X