ಪತಿ ಮಲಗಿದಾಗ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪಿ ಪತ್ನಿಗೆ ಲಿಂಗಸುಗೂರು ತಾಲೂಕಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶುಕ್ರವಾರ ಜೀವಾವಧಿ ಶಿಕ್ಷೆ ,30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಲಿಂಗಸೂಗೂರು ತಾಲ್ಲೂಕಿನ ರೋಡಲಬಂಡಾ ಕ್ಯಾಂಪ್ ( ಯು ಕೆ ಪಿ ) ವಸತಿ ಗೃಹದಲ್ಲಿ 2018ರ ಜುಲೈ 18ರಂದು ರಾತ್ರಿ 11:30 ಗಂಟೆ ಸುಮಾರಿಗೆ ಪತಿ ಮಹಾಂತೇಶ ಮಲಗಿದಾಗ ಪತ್ನಿ ಸರಸ್ವತಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಳು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇದೆ ಸಂದೇಶ ;ಹೌಹಾರಿದ ಜನ
ಅಂದಿನ ಲಿಂಗಸೂಗುರು ಸಿ.ಪಿ.ಐ ವಿ.ಎಸ್.ಹಿರೇಮಠ ನ್ಯಾಯಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ರಾಯಚೂರು ಪಿಠಾಸೀನ ಲಿಂಗಸೂಗುರು ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಇಂದು ತೀರ್ಪು ನೀಡಿದರು.
ಎ.ಗಡಕರಿ ಸರಕಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ. ಲಿಂಗಸೂಗುರು ಠಾಣೆಯ ಪಿ.ಸಿ. ನಿಂಗಯ್ಯಾ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸಿದ್ದರು.
