“ಬಹು ದೊಡ್ಡ ಸಂಖ್ಯೆಯಲ್ಲಿರುವ ದುಡಿಯುವ ಜನರನ್ನು ಕಾರ್ಪೊರೇಟ್ ಹುನ್ನಾರಗಳನ್ನು ಅರಿತು ವಿಫಲಗೊಳಿಸುವ ಸಾಮರ್ಥ್ಯ ಪಡೆದು ರಾಜಕೀಯ, ಸಾಂಸ್ಕೃತಿಕ ಪ್ರಜ್ಞಾವಂತರಾಗಬೇಕು. ಕಾರ್ಮಿಕ ಚಳುವಳಿ ವ್ಯಕ್ತಿತ್ವದ ಬೆಳವಣಿಗೆಯ ಆಶಯ ಎದೆಯಲ್ಲಿದೆ” ಎಂದು ಸಿ.ಐ.ಟಿ.ಯು ಮುಖಂಡ ಎಂ ಎಸ್ ಹಡಪದ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸೇವಾಲಾಲ್ ಸಮುದಾಯ ಭಾವನದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದರು.
“ಕಾರ್ಮಿಕರ ಕುಟುಂಬದಲ್ಲಿ ಮಕ್ಕಳು, ಗಂಡ ಹೆಂಡತಿ ನಡುವಿನ ಸಂಬಂಧಗಳು ಹೆಚ್ಚು ಆರೋಗ್ಯಕರವಾಗುವಂತೆ ಮಾಡುವುದು ಮೇ ದಿನದ ಆಶಯ. ಆದರೆ ದುಡಿಯುವ ಜನರನ್ನು ಹೆಚ್ಚು ಹೆಚ್ಚು ದುಡಿಸಿಕೊಂಡು, ದಿನಕ್ಕೆ ಹನ್ನೊಂದು, ಹನ್ನೆರಡು ಗಂಟೆ ಯುವಕರು ದುಡಿಯಬೇಕು ಎಂದು ಹೇಳುವ ನಾರಾಯಣ ಮೂರ್ತಿಯಂತಹ ಬಂಡವಾಳಶಾಹಿಗಳ ದುರಾಸೆಯಾಗಿದೆ. ಜಗತ್ತಿನ ಬಹುಭಾಗದ ಜನರನ್ನು ಸಾಂಸ್ಕೃತಿಕ ಕುಬ್ಜರನ್ನಾಗಿಸುವ ಹುನ್ನಾರ, ಪ್ರಜಾಪ್ರಭುತ್ವದಲ್ಲಿ ಪ್ರಜ್ಞಾವಂತರಾಗಿ ಇರುವ ಅವಕಾಶವನ್ನು ಕಸಿಯುವುದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಾರ್ಪೊರೇಟ್ ದಬ್ಬಾಳಿಕೆ, ಪ್ರಜಾಪ್ರಭುತ್ವ ನಾಶಪಡಿಸುವ ಮುಂದುವರೆದ ಹೇಳಿಕೆಗಳ ಭಾಗವಾಗಿದೆ. ಮುಂದಿನ ತಲೆಮಾರು ಕೇವಲ ಯಂತ್ರಗಳಾಗಿ ಹೇಳಿದ್ದಕ್ಕೆಲ್ಲ ತಲೆಯಾಡಿಸುವ ಕೋಲೆ ಬಸವಗಳಾಗುವಂತೆ ಮಾಡಿ ಅಪರಿಮಿತ ಸಂಪತ್ತನ್ನು ತಮ್ಮಲ್ಲಿಯೇ ಕೇಂದ್ರಿಕರಿಸುವುದು ಅವರ ಉದ್ದೇಶವಾಗಿದೆ” ಎಂದು ಹೇಳಿದರು.
“ಕೇಂದ್ರೀಕರಿಸುವ ವ್ಯವಸ್ಥೆಯನ್ನು ಸಂಘಟನಾತ್ಮಕವಾಗಿ ನಾವೆಲ್ಲರೂ ಎದುರಿಸಿ ಬದುಕನ್ನು ಕಟ್ಟಿಕೊಳ್ಳಬೇಕಿದೆ” ಎಂದು ಎಂ. ಎಸ್. ಹಡಪದ ಹೇಳಿದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ತಾಲೂಕು ಆಡಳಿತದಿಂದ ಆದಿ ಜಗದ್ಗುರು ಶಂಕರಾಚಾರ್ಯರ ಜಯಂತಿ ಆಚರಣೆ
ಕಾರ್ಯಕ್ರಮದಲ್ಲಿ ಸಿ.ಐ.ಟಿ.ಯು ಮುಖಂಡರು ಬಾಲು ರಾಠೋಡ್, ಪೀರು ರಾಠೋಡ್, ದಾವಲಾಸಾಬ ತಾಳಿಕೋಟಿ, ಮೆಹಬುಬ ಹವಾಲ್ದಾರ ಇನ್ನೂ ಅನೇಕರು ಉಪಸ್ಥಿತರಿದ್ದರು.