ಕೊಪ್ಪಳ | ಕಾರ್ಖಾನೆಗಳಲ್ಲಿ ಕಾರ್ಮಿಕರ ಶೋಷಣೆ; ಕೆಲಸದ ಭದ್ರತೆ, ಯೋಗ್ಯ ವೇತನ ನೀಡದೆ ಅನ್ಯಾಯ!

Date:

Advertisements

ಕಲ್ಯಾಣಿ-ಮುಕುಂದ, ಕಿರ್ಲೊಸ್ಕರ್, ಅಲ್ಟ್ರಾಟೆಕ್ ಇನ್ನಿತರ ಕಾರ್ಖಾನೆಗಳಲ್ಲಿ ವ್ಯಾಪಕವಾಗಿ ಕಾರ್ಮಿಕರ ಶೋಷಣೆ ಮಾಡಿ ಕೆಲಸದ ಭದ್ರತೆ, ಜೀವನ ಯೋಗ್ಯ ವೇತನ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಎಐಟಿಯುಸಿ ಕಾರ್ಯಕರ್ತರು ಆರೋಪಿಸಿದರು.

ಗ್ರಾಮದ ಸೇವಾಲಾಲ್ ಸರ್ಕಲ್‌ನಲ್ಲಿ ಗಿಣಿಗೇರ ನಾಗರಿಕ ಹೋರಾಟ ಸಮಿತಿ ಮತ್ತು ಕಟ್ಟಡ ಕಟ್ಟುವ ಮತ್ತು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಜಂಟಿಯಾಗಿ ಆಚರಿಸಿದ 139ನೇ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಕಾರ್ಮಿಕರು ತಮ್ಮ ಕೆಲಸದ ಭದ್ರತೆಗೆ ಒತ್ತಾಯಿಸಿದರು.

ಕಾರ್ಮಿಕ ಮುಖಂಡ ನೂರ್ ಸಾಬ ಹೊಸಮನಿ ಮಾತನಾಡಿ, “ಅಂದು ದುಡಿಯುವ ಸಮಯ ಎಂಟು ಗಂಟೆ ಅವಧಿಗೋಸ್ಕರ ಹಾಗೂ ಜೀವನ ಭದ್ರತೆಗಾಗಿ ಕಾರ್ಮಿಕರು ಹೋರಾಟ ಕಟ್ಟಿ ಇಂದಿಗೂ ಸ್ಪೂರ್ತಿಯಾಗಿದ್ದಾರೆ. ಅವರ ದಿರೋದಾತ್ತ ಹೋರಾಟವನ್ನು ಇಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನವಾಗಿ ವಿಶ್ವದ ಎಲ್ಲ ದುಡಿಯುವ ವರ್ಗದ ಜನ ಆಚರಿಸುತ್ತಾರೆ” ಎಂದರು.

Advertisements

ಕಾರ್ಮಿಕ ಮುಖಂಡ ಶರಣು ಗಡ್ಡಿ ಮಾತನಾಡಿ, “ಗಿಣಿಗೇರಿ ಸುತ್ತಮುತ್ತ ದೈತ್ಯ ಕಾರ್ಖಾನೆಗಳಿದ್ದರೂ ಸ್ಥಳೀಯ ಯುವಕರಿಗೆ ಕಾಯಂ ಕೆಲಸ ನೀಡುತ್ತಿಲ್ಲ. ಈಗಾಗಲೇ ಹದಿನೈದು ಇಪ್ಪತ್ತು ವರ್ಷಗಳಿಂದ  ಗ್ರಾಮದ ಸುತ್ತಲಿನ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಕೂಡಲೇ ಕಾಯಂಗೊಳಿಸಬೇಕು. ಕಾರ್ಮಿಕರಿಗೆ ಸಿಗುವಂತ ಕನಿಷ್ಠ ವೇತನ ಸೇರಿದಂತೆ ಎಲ್ಲ ಹಕ್ಕುಗಳನ್ನು ಗೌರವಿಸಿ ಜೀವನ ಭದ್ರತೆ ಒದಗಿಸಬೇಕು. ಐಟಿಐ, ಡಿಪ್ಲೊಮಾ, ವೃತ್ತಿಪರ ಕೋರ್ಸ್‌ಗಳನ್ನು ಮುಗಿಸಿದ ಎಲ್ಲ ಯುವಕರಿಗೆ ಕೂಡಲೇ ಕೆಲಸದ ಭದ್ರತೆ ಒದಗಿಸಬೇಕು” ಎಂದು ಒತ್ತಾಯಿಸಿದರು.

“ಇನ್ನೊಂದಡೆ ಎಲ್ಲ ಸರ್ಕಾರಗಳು ಕಾರ್ಮಿಕರ ಪ್ರಜಾತಾಂತ್ರಿಕ ಹಕ್ಕುಗಳನ್ನು ದಮನ ಮಾಡಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿ ಮಾಡುತ್ತಿವೆ. ದುಡಿಯುವ ಸಮಯ ಸೇರಿದಂತೆ ಕನಿಷ್ಠ ವೇತನ ನಿಗದಿ ಮಾಡದೆ ಕೇವಲ ಗುತ್ತಿಗೆ-ಹೊರಗುತ್ತಿಗೆ, ಸ್ಕೀಮ್ ನೌಕರಿ ಸೇರಿದಂತೆ ಇತರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡಿ ದುಡಿಯುವ ವರ್ಗವನ್ನು ವ್ಯಾಪಕವಾಗಿ ಶೋಷಣೆ ಮಾಡಲಾಗುತ್ತಿದೆ. ಪ್ರಪಂಚದಲ್ಲಿ ಎರಡೇ ವರ್ಗಗಳಿರುವುದು ಒಂದು ಬಂಡವಾಳಶಾಹಿ ವರ್ಗ ಹಾಗೂ ಕಾರ್ಮಿಕ ವರ್ಗ. ಕಾರ್ಮಿಕರು, ವರ್ಗ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ನೈಜ ಕ್ರಾಂತಿಕಾರಿ ಸಂಘಟನೆಯನ್ನು ಬಲಪಡಿಸಬೇಕು” ಎಂದು ಹೇಳಿದರು.

ಇದನ್ನೂ ಓದಿದ್ದೀರಾ? ಎಟಿಎಂ ಶುಲ್ಕ ಹೆಚ್ಚಳದಿಂದ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಅವಧಿ ಇಳಿಕೆವರೆಗೆ: ಆರ್ಥಿಕ ಬದಲಾವಣೆಗಳ ಪರಿಣಾಮಗಳೇನು?

ಮಂಗಳೇಶ ರಾತೋಡ್ ಮಾತನಾಡಿ, “ಗ್ರಾಮದ ಸಮಸ್ಯೆಗಳ ವಿರುದ್ಧ ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಹೆಸರಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ನಡೆದ ಹೋರಾಟ ಯಸಶ್ವಿಯಾಗಿದೆ. ಸಾರ್ವಜನಿಕ ಆರೋಗ್ಯ, ಪರಿಸರ ಮಾಲಿನ್ಯ, ಸ್ಥಳೀಯ ಯುವಕರಿಗೆ ಉದ್ಯೋಗ ಭದ್ರತೆ ಇತರ  ಸಮಸ್ಯೆಗಳ ಪರಿಹಾರಕ್ಕಾಗಿ ನಿತ್ಯ ನಿರಂತರ ನಡೆಯುವ ಹೋರಾಟವನ್ನು ಬಲಪಡಿಸುವ ಅಗತ್ಯವಿದೆ” ಎಂದರು.

ಕಾರ್ಮಿಕ ಮುಖಂಡರಾದ ರಾಜಪ್ಪ, ಚವ್ಹಾಣ, ಅಶೋಕ ಗುಜಮಾಗಡಿ, ಸಮಿತಿ ಸದಸ್ಯರಾದ ಸುರೇಶ ಕಲಾಲ್, ಹನುಮಂತ ಕಟೀಗಿ, ಯುವ ಮುಖಂಡ ಬಸವರಾಜ ಬಂಗಿ, ಮಾರುತಿ, ಹನುಮಂತ ಕನಕಾಪುರ, ಮಲ್ಲಿಕಾರ್ಜುನ ಹಲಿಗೇರಿ, ರಾಘು ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X