ಬೆಂಗಳೂರು | ಮಾರುಕಟ್ಟೆಯಲ್ಲಿ ಮತ್ತೆ ಏರಿಕೆ ಕಂಡ ಟೊಮ್ಯಾಟೊ ದರ : ಕೆಜಿಗೆ 120-150 ರೂಪಾಯಿ

Date:

Advertisements
  • ಟೊಮ್ಯಾಟೊ ಬೆಲೆ ಏರಿಕೆ ಜತೆಗೆ ಕ್ಯಾರೆಟ್‌, ಬೀನ್ಸ್‌ ದರ ದುಪ್ಪಟ್ಟು
  • ಹಾಪ್‌ಕಾಮ್ಸ್‌ನಲ್ಲಿ ಮಾರುಕಟ್ಟೆಗಿಂತ ಕೆಜಿಗೆ ₹5​-10 ದರ ವ್ಯತ್ಯಾಸ

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅದರಲ್ಲೂ ಟೊಮ್ಯಾಟೊ ದರ ಕೆಜಿಗೆ ₹120-150 ಏರಿಕೆಯಾಗಿದೆ. ಇದೀಗ ಬೀನ್ಸ್‌, ಕ್ಯಾರೆಟ್‌ ದರ ಕೂಡ ನಗರದ ಮಾರುಕಟ್ಟೆಗಳಲ್ಲಿ ₹100ರ ಗಡಿ ದಾಟಿವೆ. ಗ್ರಾಹಕರು ಬೆಲೆ ಏರಿಕೆಯಿಂದ ಅಕ್ಷರಶಃ ಕಂಗಾಲಾಗಿದ್ದಾರೆ.

ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ರೋಗ ಸೇರಿದಂತೆ ಹಲವಾರು ಕಾರಣಗಳಿಂದ ಈ ಬಾರಿ ಟೊಮ್ಯಾಟೊ ದರದಲ್ಲಿ ಏರಿಕೆ ಕಂಡಿದೆ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದ್ದು, ಸದ್ಯಕ್ಕೆ ಈ ಬೆಲೆ ಇಳಿಯುವ ಸಾಧ್ಯತೆ ಕಡಿಮೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಕೆ.ಆರ್‌.ಮಾರುಕಟ್ಟೆಯಲ್ಲಿ ಸಾಧಾರಣ 24 ಕೆಜಿ ಬಾಕ್ಸ್‌ ಟೊಮ್ಯಾಟೊ ಬೆಲೆ ₹1800ಗೆ ಮಾರಾಟವಾಗಿದೆ. ಕ್ಯಾರೆಟ್‌ ಬೆಲೆ ಏರುಗತಿಗೆ ಬಂದಿದೆ. ಕೆಜಿಗೆ ₹100-110 ನಂತೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್‌ನಲ್ಲಿ ಮಾರುಕಟ್ಟೆಗಿಂತ ₹5​-10 ದರ ವ್ಯತ್ಯಾಸವಿದೆ.

Advertisements

ಬೆಲೆ ಏರಿಕೆಯಿಂದ ಒಂದು ಕೆಜಿ ತರಕಾರಿ ಕೊಳ್ಳುವ ಬದಲಾಗಿ ಅರ್ಧ-ಕಾಲು ಕೆಜಿ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಹಕರು ಬೇಸರ ತೋಡಿಕೊಂಡರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರಿಯತಮೆ ಕೊಲೆ ಮಾಡಿ ತಿಂಗಳು ಕಾಲ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಟೊಮ್ಯಾಟೊ ಬೆಲೆ ₹109-121ಕ್ಕೆ ಏರಿಕೆಯಾಗಿದೆ. ಟೊಮ್ಯಾಟೊ(ನಾಟಿ) ₹125, ಟೊಮ್ಯಾಟೊ(ಜಾಮುನ್‌) ₹120, ಬೀನ್ಸ್‌ ₹120, ಬೀನ್ಸ್‌ಕಾಳು ₹110, ಕ್ಯಾರೆಟ್‌ ₹110, ಹಸಿ ಮೆಣಸಿನಕಾಯಿ ₹170, ಹಸಿರು ಬಟಾಣಿ ₹190, ಈರುಳ್ಳಿ‌ ದರ ₹59- 65, ಬಿಟ್ರೋಟ್ ₹52-57, ಆಲೂಗಡ್ಡೆ ₹37-41, ಬೇಬಿ ಕಾರ್ನ್ ₹64-71ವರೆಗೂ ಏರಿಕೆ ಕಂಡಿದೆ.

ದಪ್ಪ‌ ಮೆಣಸಿನ‌ಕಾಯಿ ₹55-61, ಹುರುಳಿಕಾಯಿ ₹55-61, ಹೂ ಕೂಸು ₹31-34, ನುಗ್ಗೆಕಾಯಿ ₹115-127 ಏರಿಕೆಯಾಗಿದೆ. ದಪ್ಪ ಬದನೆಕಾಯಿ‌ ₹32-36, ಬೆಳ್ಳುಳ್ಳಿ ₹44-48, ಶುಂಠಿ ₹81-89, ಬೆಂಡೆಕಾಯಿ ₹44-48, ಮೂಲಂಗಿ ₹36-39 ಏರಿಕೆಯಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X