“ಮಳೆಗಾಲದಲ್ಲಿ ಸಿಡಿ ಮೇಲೆ ಹರಿಯುವ ನೀರಿನಿಂದ ರೈತರ ಹೊಲಗಳಿಗೆ, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲು 50 ಲಕ್ಷ ರೂ ಕಾಮಗಾರಿ ನಡೆಯಲಿದೆ” ಎಂದು ಚೆಕ್ ಡ್ಯಾಂ ಭೂಮಿ ಪೂಜೆ ನೆರವೇರಿಸಿ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮಾತನಾಡಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಊಂಡೇನಹಳ್ಳಿ ಗ್ರಾಮದ ಸಮೀಪ ಇರುವ ಸೂರಣಗಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಇರುವ ಚೆಕ್ ಡ್ಯಾಂ ಭೂಮಿ ಪೂಜೆ ಕಾರ್ಯಕ್ರಮವನ್ನ ನೆರವೇರಿಸಿ ಅವರು ಮಾತನಾಡಿದರು.
“ಮುಂದಿನ ದಿನಮಾನಗಳಲ್ಲಿ ದೊಡ್ಡೂರ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿದ್ದ ಸಿಡಿ ನಿರ್ಮಾಣ ಕೈಗೆತ್ತಿಕೊಳ್ಳಲಾಗುವುದು” ಎಂದು ಶಾಸಕ ಚಂದ್ರು ಲಮಾಣಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸುಹಾಸ್ ಶೆಟ್ಟಿ ಹತ್ಯೆಗೆ ಜಿಲ್ಲಾ ಬಿಜೆಪಿ ತೀವ್ರ ಖಂಡನೆ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಚಂದ್ರಶೇಖರ ಈಳಿಗೇರ, ಗ್ರಾಪಂ ಸದಸ್ಯರು ಫಕ್ಕಿರಗೌಡ್ರು ಭರಮಗೌಡ್ರ, ಶಂಕ್ರಪ್ಪ ಲಮಾಣಿ, ನಿಂಗಪ್ಪ ಬಂಕಾಪುರ, ಮಧುಮಾಲತಿ ಈಳಿಗೇರ, ಪಿಡಿಓ ಎಸ್, ಕೆ, ವಾಲಿ ಗ್ರಾಮದ ಹಿರಿಯರು ಭೀಮನಗೌಡ ಈಳಿಗೇರ, ಪುಂಡಲೀಕ ಲಮಾಣಿ, ಲೊಕೇಶ ಈಳಿಗೇರ, ಜಗದೀಶ ಈಳಿಗೇರ ಹಾಗೂ ದೊಡ್ಡೂರ ಗ್ರಾಮದ ಹಿರಿಯರು ಸಂಜಯ ಪಾಟೀಲ, ಟೋಪಣ್ಣ ಲಮಾಣಿ ಸೇರಿದಂತೆ ಅನೇಕರಿದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ ಸಿಟಿಜನ್ ಜರ್ನಲಿಸ್ಟ್ ಲಕ್ಷ್ಮೇಶ್ವರ