ಶುಕ್ರವಾರ ತಡರಾತ್ರಿ ಗೋವಾದ ಶಿರ್ಗಾವೊದಲ್ಲಿ ಶ್ರೀ ಲೈರೈ ದೇವಸ್ಥಾನದ ಜಾತ್ರೆ ವೇಳೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜು (ಜಿಎಂಸಿ) ಮತ್ತು ಮಾಪುಸಾದ ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: 30 ಸಾವು
ಘಟನೆಯ ನಂತರ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು. ಬಿಚೋಲಿಮ್ ಆಸ್ಪತ್ರೆಗೂ ಭೇಟಿ ನೀಡಿದ್ದಾರೆ.
VIDEO | Goa CM Pramod Sawant (@DrPramodPSawant) visited North Goa District Hospital in Mapusa to meet the injured as several people have been feared dead and injured in a stampede at a temple festival in Shirgao village last night.
— Press Trust of India (@PTI_News) May 3, 2025
(Source: Third Party)#Goa pic.twitter.com/DjA0G4mYNA
ಕಾಲ್ತುಳಿತಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಹಾಗೆಯೇ ಮೃತರ ಗುರುತುಗಳ ಬಗ್ಗೆಯೂ ಅಧಿಕಾರಿಗಳು ಇನ್ನೂ ಅಧಿಕ ವಿವರಗಳನ್ನು ಬಿಡುಗಡೆ ಮಾಡಿಲ್ಲ.
ಶುಕ್ರವಾರ ಜಾತ್ರೆ ಪ್ರಾರಂಭವಾಗಿದೆ. ಗೋವಾದ ಶಿರ್ಗಾವೊದಲ್ಲಿರುವ ಶ್ರೀ ಲೈರೈ ದೇವಿ ದೇವಸ್ಥಾನದಲ್ಲಿ ಆಚರಿಸಲಾಗುವ ಶ್ರೀ ಲೈರೈ ಜಾತ್ರೆ ಅತ್ಯಂತ ಬೃಹತ್ ಉತ್ಸವವಾಗಿದೆ. ಈ ಹಬ್ಬದ ವೇಳೆ ಸಾವಿರಾರು ಭಕ್ತರು ಉರಿಯುತ್ತಿರುವ ಕೆಂಡಗಳ ಮೇಲೆ ಬರಿಗಾಲಿನಲ್ಲಿ ನಡೆಯುತ್ತಾರೆ.
