ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿಗಳಾದ ಹೀರಾಬಾಯಿ ನಾಗರಾಜ್ ಸಿಂಗ್ ಅವರು ಅಧ್ಯಕ್ಷರಾಗಿ ಹಾಗೂ ಸುಧಾ ಸೋಮನಾಥ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಯ ಎಲ್ಲಾ 28 ಸದಸ್ಯರೂ ಒಗ್ಗಟ್ಟಾಗಿ ಬೆಂಬಲ ನೀಡಿದ್ದರಿಂದ ಹೀರಾಬಾಯಿ ಮತ್ತು ಸುಧಾ ಇಬ್ಬರೂ ಏಕಮತದಿಂದ ಆಯ್ಕೆಯಾದರು. ಈ ಮೂಲಕ ನಗರಸಭೆಯ ಆಡಳಿತವನ್ನು ಮತ್ತೊಮ್ಮೆ ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡಿದೆ.
ಫಲಿತಾಂಶ ಕುರಿತು ಶಾಸಕ ಗಾಲಿ ಜನಾರ್ಧನ ರೆಡ್ಡಿ ಮಾತನಾಡಿ, “ಈ ಚುನಾವಣೆಯ ಫಲಿತಾಂಶವು ಬಿಜೆಪಿಯ ಸಂಘಟಿತ ಶಕ್ತಿ ಮತ್ತು ನಗರದ ಜನತೆಯ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಅಧ್ಯಕ್ಷರಾದ ಹೀರಾಬಾಯಿ ನಾಗರಾಜ್ ಸಿಂಗ್ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಸೋಮನಾಥ್ ಅವರ ನೇತೃತ್ವದಲ್ಲಿ ಗಂಗಾವತಿ ನಗರವು ಸರ್ವತೋಮುಖವಾಗಿ ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಯಲಿ, ಜನಸೇವೆ, ಪಾರದರ್ಶಕ ಆಡಳಿತ ಹಾಗೂ ನಗರದ ಸಮಗ್ರ ಬೆಳವಣಿಗೆಗೆ ಇಬ್ಬರೂ ಶ್ರಮಿಸಲಿ” ಎಂದು ಹಾರೈಸಿದರು.

ಈ ವೇಳೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಬಸವರಾಜ್ ದಡೇಸುಗೂರು, ವಿರುಪಾಕ್ಷಪ್ಪ ಸಿಂಗನಾಳ್, ಗೆರೇಗೌಡ್ರು, ತಿಪ್ಪೇರುದ್ರಸ್ವಾಮಿ, ಕಾಶಿನಾಥ್ ಚಿತ್ರಗಾರ, ರಮೇಶ್ ಚೌಡ್ಕಿ, ಪಂಪಾಪತಿ ಸಿಂಗನಾಳ್, ಡಿ.ಕೆ ಆಗೋಲಿ, ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ಚನ್ನವೀರನ ಗೌಡ್ರು, ಚಂದ್ರು ಹೀರೂರು, ವೆಂಕಟೇಶ್ ಜಬ್ಬಲಗುಡ್ಡ, ನಾಗರಾಜ್ ಚಳಗೇರಿ, ರಮೇಶ್ ಹೊಸಮಲಿ, ಅರ್ಜುನ್ ನಾಯಕ್, ದುರ್ಗಪ್ಪ ದಳಪತಿ, ಗಂಗಾಧರ ಸ್ವಾಮಿ, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೊಪ್ಪಳ | ತರಕಾರಿ ಬೆಲೆ ಕುಸಿತ; ರೈತರಿಗೆ ಆರ್ಥಿಕ ಹೊಡೆತ