ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಿಸಿದ್ದು, ಎರಡನೇ ದಿನದ ಕಾರ್ಯಾಚರಣೆಯೂ ಯಶಸ್ವಿಯಾಗಿದೆ.
ಇಟಿಎಫ್ ಸಿಬ್ಭಂದಿಗಳು ಹಳ್ಳಿಯೂರು ಗ್ರಾಮದಲ್ಲಿ ಪುಂಡಾನೆ ಇರುವ ಸ್ಥಳವನ್ನು ಇಂದು ಬೆಳಿಗ್ಗೆ ಪತ್ತೆ ಹಚ್ಚಿದ್ದು, ಪಾರ್ವತಮ್ಮ ಬೆಟ್ಟದ ಬಳಿ ನಿಂತಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ.
ಈ ಅಡಕ-ಬಡಕ ಹೆಸರಿನ ಕಾಡಾನೆಗೆ, ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದ್ದರು. ಹಾಗಾಗಿ ಆ ಕಾಡಾನೆಯೂ ಸ್ವಲ್ಪ ದೂರ ಓಡಿ ಪ್ರಜ್ಞೆ ತಪ್ಪಿ ಬಿದ್ದಿತ್ತು. ಈ ದೈತ್ಯಾಕಾರದ ಕಾಡಾನೆಗೆ ನೀರು ಹಾಕಿ ಆರೈಕೆ ಮಾಡಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು, ಕಾಲಿಗೆ ಹಗ್ಗಕಟ್ಟಿದ್ದಾರೆ. ಅಲ್ಲದೇ ವೈದ್ಯರು ರಿವರ್ಸಲ್ ಇಂಜೆಕ್ಷನ್ ನೀಡಿದ್ದಾರೆ.
ಅಡಕ-ಬಡಕ ಎಂಬ ಕಾಡಾನೆ ಎಚ್ಚರಗೊಂಡ ಕೂಡಲೇ ಘೀಳಿಟ್ಟು ಅಬ್ಬರಿಸಿದ್ದು, ಸಾಕಾನೆಗಳನ್ನು ಹೈರಾಣಗಿಸಿದೆ. ಇನ್ನೂ ಕಾಡಾನೆಯನ್ನು ಎಳೆದು ತರಲು ಸಾಕಾನೆಗಳು ಹರಸಾಹಸಪಡುತ್ತಿವೆ.
ಈ ಸುದ್ದಿ ಓದಿದ್ದೀರಾ? ಮತ್ತೆ ಕೆಪಿಎಸ್‌ಸಿ ಎಡವಟ್ಟು : ಮೇ 3ರ ಕೆಎಎಸ್ ಮುಖ್ಯ ಪರೀಕ್ಷೆಗೆ ಮಧ್ಯರಾತ್ರಿ 12ಕ್ಕೆ ಹಾಲ್ ಟಿಕೆಟ್ ವಿತರಣೆ!
ಈ ಕಾರ್ಯಾಚರಣೆಯೂ ಡಿಎಫ್‌ಒ ಸೌರಭ್‌ಕುಮಾರ್, ಆರ್‌ಎಫ್‌ಒ ಹೇಮಂತ್ ನೇತೃತ್ವದಲ್ಲಿ ನಡೆದಿದ್ದು, ಸಾಕಾನೆಗಳಾದ ಕಂಜನ್, ಕರ್ನಾಟಕ ಭೀಮ, ಮಹೇಂದ್ರ, ಧನಂಜಯ, ಏಕಲವ್ಯ, ಸುಗ್ರೀವ ಎಂಬ ಆನೆಗಳು ಇದ್ದವು.