ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯ ಸಂವಿಧಾನ ಬಾಹಿರ ಕಾನೂನು ಹಿಂಪಡೆಯಬೇಕೆಂದು ಒತ್ತಾಯಿಸಿ ಅಖಿಲ ಭಾರತ ಮುಸ್ಲಿಂ ವಯಕ್ತಿಕ ಕಾನೂನು ಮಂಡಳಿ ಹಾಗೂ ಪ್ರಗತಿಪರ ಸಂಘಟನೆಗಳಿಂದ ಕೊಪ್ಪಳ ನಗರದ ಗಡಿಯಾರ ವೃತ್ತದಿಂದ ಅಶೋಕ ವೃತ್ತದವರೆಗೂ ಬೃಹತ್ ಪ್ರತಿಭಟನೆ ನಡೆಯಿತು.
“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಲ್ಪಸಂಖ್ಯಾತರ ವಕ್ಫ್ ತಿದ್ದುಪಡೆ ಮಸೂದೆ ಜನ ವಿರೋಧಿ ಕಾನೂನು. ಇದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹಾಗೂ ಸಂವಿಧಾನಬಾಹಿರ ತಿದ್ದುಪಡಿ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡಲೇ ಸಂವಿಧಾನ ಬಾಹಿರ ಕಾಯ್ದೆಯನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಾಯ್ಧೆ ವಿರೋಧಿಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, “ಕೇಂದ್ರ ಸರ್ಕಾರ ಯಾವಾಗಲೂ ಜನ ವಿರೋಧಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿ ಕಾಯ್ದೆ ರೂಪಿಸುತ್ತದೆ. ದೇಶದಲ್ಲಿ ಅರ್ಥಿಕತೆ ಕುಸಿಯುತ್ತಿದೆ, ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಗಮನಿಸುತ್ತಿಲ್ಲ. ಕೇವಲ ಓಟಿಗಾಗಿ ಅನ್ಯಕೋಮಿನ ಸಮುದಾಯದ ಗದಾ ಪ್ರಹಾರ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್‌ಗೆ ದಾನ ಕೊಡುವವರು ಹೆಚ್ಚಾದರೆ ಬಿಜೆಪಿಗೆ ನೋವಾಗುತ್ತದೆ. ಕಾಯಕ ಹಾಗೂ ದಾಸೋಹ ಪದ್ದತಿ ಶರಣರ ಕಾಲದಿಂದ ಬಂದಿದೆ. ಅದು ಇಸ್ಲಾಂನಲ್ಲೂ ಇದೆ. ಕೇಂದ್ರ ಸರ್ಕಾರ ಅಭಿವೃದ್ಧಿ ಕಡೆ ಗಮನ ಕೊಡದೆ, ಸಮುದಾಯಗಳು ಹಾಗೂ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುತ್ತಿದೆ” ಎಂದರು.

ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತಾನಾಡಿ, “ವಕ್ಫ್ ತಿದ್ದುಪಡಿ ಮಸೂದೆಯು, ಹಿಂದೂ, ಸಿಖ್, ಬೌದ್ಧ, ಹಾಗೂ ಕ್ರಿಶ್ಚಿಯನ್ ಸಮುದಾಯಗಳಿಗೆ ಲಭ್ಯವಿರುವ ವಕ್ಫ್ ಆಸ್ಥಿಗಳಿಗೆ ನೀಡಲಾದ ರಕ್ಷಣೆ ಹಾಗೂ ಸುರಕ್ಷತೆಯನ್ನು ಕಸಿದುಕೊಂಡು ತಾರತಮ್ಯ ಮಾಡುತ್ತಿದೆ. ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಭಾವೈಕ್ಯತೆಯನ್ನು ಕದಡುತ್ತಿದೆ. ಇದು ಧರ್ಮದ ಮುಕ್ತ ಆಚರಣೆಯ ಹಕ್ಕಿಗೆ ಹಾಗೂ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕಿಗೆ ವಿರುದ್ಧವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಜಾತಿ ಜನಗಣತಿ; ಕಾಲಂ 61ರಲ್ಲಿ ಮಾದಿಗ ಎಂದು ನಮೂದಿಸಿ; ಸಿದ್ದರಾಜು ಸ್ವಾಮೀಜಿ
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, “ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೂರದೃಷ್ಟಿಯಿಂದ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದ್ವೇಷ ಹರಡುತ್ತ ಹೋದರೆ ಅಧಿಕಾರದಲ್ಲಿ ಶಾಶ್ವತವಾಗಿ ಇರಬಹುದು ಎಂಬ ಹುಚ್ಚು ಕಲ್ಪನೆಯಲ್ಲಿ ಅಧಿಕಾರ ನಡೆಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿಂದ ಸಂವಿಧಾನ ವಿರೋಧಿ ಕಾಯ್ದೆ ಜಾರಿಗೆ ತರುತ್ತಲೇ ಇದೆ. ಆದರೆ, ಅದರ ವಿರುದ್ಧ ಗಟ್ಟಿಯಾಗಿ ಪ್ರತಿಭಟನೆ ಮಾಡಬೇಕಾಗಿದೆ. ಸಿಎಎ, ಎನ್‌ಆರ್‌ಸಿ ಕಾಯ್ದೆ ತಂದು ಅಲ್ಪಸಂಖ್ಯಾತರನ್ನು ಮಣಿಸಲು ಸತತ ಯತ್ನ ನಡೆಯಿತು, ಇದೂ ಕೂಡ ಸಮುದಾಯ ದ್ವೇಷದ ತಿದ್ದುಪಡಿ ಕಾಯ್ದೆ. ಇದು ಭಾವೈಕ್ಯತೆಯ ವಿರೋಧಿ ಕಾನೂನು” ಎಂದರು.