ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ನಾಗರಾಳು ಗ್ರಾಮದಲ್ಲಿ, ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಆರು ಕುರಿಗಳ ಸಾವನಪ್ಪಿರುವ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ.
ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ, ಕುರಿಗಳು ಮೃತಪಟ್ಟಿವೆ. ನಾಗರಾಳು ಗ್ರಾಮದ ತಿಮ್ಮಾನಾಯ್ಕ ಎಂಬುವರಿಗೆ ಸೇರಿದ ಕುರಿಗಳು. ಕಳೆದ ರಾತ್ರಿ ಸುಮಾರಿಗೆ ಕುರಿಗಳು ಇದ್ದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲೇ 6 ಕುರಿಗಳು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. 15ಕ್ಕೂ ಹೆಚ್ಚು ಕುರಿಗಳು ತಪ್ಪಿಸಿಕೊಂಡಿವೆ ಎಂದು ಕುರಿಗಳ ಮಾಲೀಕ ತಿಮ್ಮಾನಾಯ್ಕ ತಿಳಿಸಿದರು.
ಸ್ಥಳಕ್ಕೆ ಶಾಸಕ ಹೆಚ್.ಡಿ ತಮ್ಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು. ಕಳೆದ ರಾತ್ರಿ ಸುಮಾರಿಗೆ ಕುರಿ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲೇ 6 ಕುರಿಗಳು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. 15ಕ್ಕೂ ಹೆಚ್ಚು ಕುರಿಗಳು ತಪ್ಪಿಸಿಕೊಂಡಿವೆ ಎಂದು ರೈತ ತಿಮ್ಮಾ ನಾಯ್ಕ ಶಾಸಕರ ಮುಂದೆ ಅಳಲು ತೋಡಿಕೊಂಡರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ವಾಹನ ಅಪಘಾತ; ಅಂಗಡಿಗೆ ನುಗ್ಗಿದ ಕಾರು
ಕುರಿ ಮಾಲೀಕನಿಗೆ ಸಾಂತ್ವನ ಹೇಳಿ, ಪಶು ಸಂಗೋಪನೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ವತಿಯಿಂದ ನೀಡುವ ಪರಿಹಾರವನ್ನು ಶೀಘ್ರವಾಗಿ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
