ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಪೂರ್ವಭಾವಿಯಾಗಿ ಕಾರ್ಯಕರ್ತರಿಗೆ ಹೇಳದೇ ಏಕಾಏಕಿ ಬಂದಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಜಿಲ್ಲಾ ಉಸ್ತುವಾರಿ ಸಚಿವರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಪ್ರವಾಸಿ ಮಂದಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲರು ಭೇಟಿ ನೀಡಿದಾಗ ಸ್ಥಳೀಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಿಗೆ ಯಾವುದೇ ಮಾಹಿತಿ ಇಲ್ಲದೆ ಏಕಾಏಕಿ ತಾಲ್ಲೂಕಿಗೆ ಬಂದರೆ ಹೇಗೆ ಎಂದು ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ಮನರೇಗಾ ಹಾಜರಾತಿ ವಿಳಂಬ; ಪಿಡಿಒ ಶರಣಯ್ಯ ವಿರುದ್ಧ ಕೂಲಿಕಾರರ ಪ್ರತಿಭಟನೆ
ಇದರ ಬಗ್ಗೆ ಸಚಿವ ಶರಣಪ್ರಕಾಶ್ ಪಾಟೀಲ್ ಕ್ರೋದಿತಗೊಂಡು ಗದ್ದೆನಗೌಡ ಕಾರ್ಯಕರ್ತನಿಗೆ ನಿಮಗೆ ಏಕೆ ಹೇಳಬೇಕು, ನಾನ್ಸೆನ್ಸ್ನಂತೆ ಮಾತನಾಡಬೇಡ ಎಂದು ಏರು ದ್ವನಿಯಲ್ಲಿ ಗದರಿಸಿದ್ದಾರೆ.ಆಗ ಇಬ್ಬರ ನಡುವೆ ಮಾತಿನ ಚಕಮಕಿ ತಾರಕ್ಕೇರಿದಾಗ ಸ್ಥಳದಲ್ಲಿದ್ದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ,ಮುಖಂಡರು ಗದ್ದೇನಗೌಡ ಕಾರ್ಯಕರ್ತನಿಗೆ ಬುದ್ಧಿವಾದ ತಿಳಿಸಿದರು.
