ಮದ್ಯ ಸೇವನೆ ಮಾಡುವುದನ್ನು ನಿಲ್ಲಿಸಲು ಹೇಳಿದ್ದಕ್ಕೆ ಮದ್ಯ ವ್ಯಸನಿಯೋರ್ವ ಸಿಟ್ಟಿಗೆದ್ದು ಮಗ, ಸೊಸೆಯ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ನಿವೃತ್ತ ಗೃಹರಕ್ಷಕ ದಳದ ಸಿಬ್ಬಂದಿ ಹರಿ ಯಾದವ್ ಮನೆಯಲ್ಲಿ ಮದ್ಯಪಾನ ಮಾಡುವುದನ್ನು ಮತ್ತು ಗಲಾಟೆ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಕ್ಕೆ ಅವರ ಮಗ ಮತ್ತು ಸೊಸೆ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಬೆಂ.ಗ್ರಾ | ಮದ್ಯ ವ್ಯಸನಿಗಳ ತಾಣವಾದ ಕಾಲೇಜು ಮೈದಾನ
ಹಿರಿಯ ಮಗ ಅನುಪ್ ಯಾದವ್ (38) ಅವರ ಎದೆಗೆ ಗುಂಡು ಹಾರಿಸಲಾಗಿದ್ದು, ಕಿರಿಯ ಸೊಸೆ ಸುಪ್ರಿಯಾ ಯಾದವ್ (30) ಅವರ ಎಡಗೈ ಮತ್ತು ಹೊಟ್ಟೆಗೆ ಗುಂಡು ಹಾರಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಇಬ್ಬರನ್ನೂ ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಪ್ರಸ್ತುತ ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.
ಆರೋಪಿ ಹರಿ ಯಾದವ್ ಅನ್ನು ವಶಕ್ಕೆ ಪಡೆದು ಪರವಾನಗಿ ಪಡೆದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬರ್ಹಲ್‌ಗಂಜ್ ಎಸ್‌ಎಚ್‌ಒ ಚಂದ್ರಭನ್ ಸಿಂಗ್ ತಿಳಿಸಿದ್ದಾರೆ. ಜೊತೆಗೆ ದೂರು ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
