ಆಂತರಿಕ ನವ ವಸಾಹತುಶಾಹಿ ನಿಯಂತ್ರಣ ಆರಂಭ: ಡಿ.ಉಮಾಪತಿ ಆತಂಕ

Date:

Advertisements
"ರಾಜ್ಯಪಾಲರ ಪಕ್ಷಪಾತ ನಡವಳಿಕೆ ಇಂದಿಗೂ ನಿಂತಿಲ್ಲ. ನ್ಯಾಯಾಂಗವನ್ನು ಗಣನೆಗೆ ತೆಗೆದುಕೊಳ್ಳುವವರು ಯಾರು ಎಂಬಂತೆ ಈ ದೇಶದ ರಾಜಕಾರಣ ಮುಂದುವರಿಯುತ್ತಿದೆ"

ಒಂದು ದೇಶದ ಮೇಲೆ ಇನ್ನೊಂದು ದೇಶ ನಿಯಂತ್ರಣ ಸಾಧಿಸುವುದು ಮಾತ್ರ ನವ ವಸಾಹತುಶಾಹಿ ಅಲ್ಲ. ದೇಶದ ಒಳಗಿನ ಒಂದು ಶಕ್ತಿ ಇಡೀ ದೇಶದ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳುವುದು ಕೂಡಾ ನವ ವಸಾಹತುಶಾಹಿಯಾಗಿದೆ. ದೇಶದಲ್ಲಿ ಈ ರೀತಿಯ ನಿಯಂತ್ರಣ ಸಾಧಿಸುವ ಪ್ರಕ್ರಿಯೆ ಆರಂಭಗೊಂಡು ನೂರು ವರ್ಷ ತುಂಬಿದೆ ಎಂದು ಹಿರಿಯ ಪತ್ರಕರ್ತ, ಲೇಖಕ ಡಿ. ಉಮಾಪತಿ ಹೇಳಿದರು.

ಬೆಂಗಳೂರಿನ ಬಿ.ಎಂ.ಶ್ರೀ. ಕಲಾ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬಿ.ಶ್ರೀಪಾದ ಭಟ್ ಅವರ ‘ಒಕ್ಕೂಟವೋ ತಿಕ್ಕಾಟವೋ- ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟದ ಆಳ ಅಗಲ’ ಪುಸ್ತಕ ಬಿಡುಗಡೆ ಮತ್ತು ‘ಭಾತರದ ರಾಜಕೀಯ ಹಾಗೂ ಹಣಕಾಸು ಒಕ್ಕೂಟ ಸವಾಲುಗಳು, ಸಾಧ್ಯತೆಗಳು’ ವಿಚಾರಸಂಕಿರಣದಲ್ಲಿ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇಡೀ ದೇಶದ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಒಂದು ಶಕ್ತಿ ತನ್ನ ನಿಯಂತ್ರಣ ಸಾಧಿಸುವುದು ಕಣ್ಣಿಗೆ ಕಾಣುವಂತೆ ಬಹಿರಂಗವಾಗಿ ನಡೆಯುವುದಿಲ್ಲ. ಇದು ಬಹಳ ಸೂಕ್ಷ್ಮವಾಗಿ ನಡೆಯುತ್ತದೆ. ಅದರ ಪರಿಣಾಮಗಳು ಭಾರೀ ಹಾನಿಕಾರಕವಾಗಿರುತ್ತದೆ. ಕಳೆದ ಒಂದು ದಶಕದಿಂದ ಇಂತಹ ಕೆಲಸದಲ್ಲಿ ಅವರು ಹೆಚ್ಚಿನ ಯಶಸ್ಸು ಸಾಧಿಸುತ್ತಿದ್ದಾರೆ. ಆದರೆ ದೇಶದ ಜನರಿಗೆ ಇದರ ಅರಿವೇ ಇಲ್ಲವಾಗಿದೆ ಎಂದು ಅವರು ಹೇಳಿದರು.

Advertisements

ನಿಷ್ಪಕ್ಷಪಾತ ವ್ಯಕ್ತಿತ್ವ ಇರುವ ಗಣ್ಯರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡುವ ಪ್ರವೃತ್ತಿ 80ರ ದಶಕದವರೆ ಶೇಕಡಾ 50ರಷ್ಟು ಇತ್ತು. ಪ್ರಸಕ್ತ ದೇಶದಲ್ಲಿ ಅದು ಸಂಪೂರ್ಣವಾಗಿ ಮಾಯವಾಗಿದೆ. ಹೆಚ್ಚಿನ ರಾಜ್ಯಪಾಲರು ನಾವು ಕೇಂದ್ರ ಸರಕಾರದ ಏಜೆಂಟ್ ಎಂಬಂತೆ ತಮ್ಮನ್ನು ತಾವೇ ಭಾವಿಸಿಕೊಂಡಿದ್ದಾರೆ. ರಾಜ್ಯಪಾಲ ಹುದ್ದೆಯ ಬಳಿಕ ಕೇಂದ್ರ ಸರಕಾರದ ಬೇರೆ ಯಾವುದಾದರೂ ಹುದ್ದೆ ಗಿಟ್ಟಿಸಿಕೊಳ್ಳುವ ಅಥವಾ ರಾಜ್ಯಪಾಲ ಹುದ್ದೆಯಲ್ಲೇ ಮುಂದುವರಿಯುವ ನಿರೀಕ್ಷೆಯಲ್ಲಿರುತ್ತಾರೆ ಎಂದು ಸರಕಾರ ನೇಮಿಸಿದ ಆಯೋಗಗಳ ವರದಿಗಳು ಹೇಳುತ್ತಿವೆ ಎಂದು ಅವರು ವಿವರಿಸಿದರು.

ಇದನ್ನೂ ಓದಿರಿ: ಶಂಕರಾಚಾರ್ಯ ಸಮಾನತೆಯ ಪ್ರತಿಪಾದಕರೇ? ಜಸ್ಟಿಸ್ ಕೃಷ್ಣ ಮುಚ್ಚಿಟ್ಟ ಕಟು ಸತ್ಯಗಳೇನು?

ವಿಶೇಷವಾಗಿ ಪ್ರತಿಪಕ್ಷಗಳ ಸರಕಾರ ಇರುವ ರಾಜ್ಯಗಳಲ್ಲಿ ರಾಜ್ಯಪಾಲರ ಪಕ್ಷಪಾತ ನಡವಳಿಕೆ ಇರುತ್ತದೆ. ಈ ಪ್ರವೃತ್ತಿಯನ್ನು ಸುಪ್ರೀಂ ಕೋರ್ಟ್ ಕಾಲ ಕಾಲಕ್ಕೆ ದಮನ ಮಾಡುವ ಕ್ರಮಗಳನ್ನು ತೆಗೆದುಕೊಂಡು ಬಂದಿದೆ. ಆದರೆ ರಾಜ್ಯಪಾಲರ ಪಕ್ಷಪಾತ ನಡವಳಿಕೆ ಇಂದಿಗೂ ನಿಂತಿಲ್ಲ. ನ್ಯಾಯಾಂಗವನ್ನು ಗಣನೆಗೆ ತೆಗೆದುಕೊಳ್ಳುವವರು ಯಾರು ಎಂಬಂತೆ ಈ ದೇಶದ ರಾಜಕಾರಣ ಮುಂದುವರಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳ ಸರಕಾರವನ್ನು ಕೆಡವಲು ರಾಜ್ಯಪಾಲರು ಸಕ್ರಿಯ ಸಹಕಾರ ಕೊಡುವುದು ಹೆಚ್ಚುತ್ತಿವೆ. ನೆಹರು, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ವಿ.ಪಿ.ಸಿಂಗ್ ಕಾಲದಲ್ಲಿ ಕೂಡಾ ರಾಜ್ಯಪಾಲರನ್ನು ಕೇಂದ್ರದ ಕೈಗೊಂಬೆಯಂತೆ ನಡೆಸಿಕೊಳ್ಳಲಾಗಿದೆ. ಕಳೆದ ದಶಕದಿಂದ ಅದು ಮಿತಿ ಮೀರಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್ ವಿಷಯ ಮಂಡಿಸಿ ಮಾತನಾಡಿ, ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ರಾಜ್ಯಪಾಲರ ನಡೆಯನ್ನು ಗಮನಿಸಿದರೆ ಈ ದೇಶಕ್ಕೆ ರಾಜ್ಯಪಾಲರ ಅಗತ್ಯ ಇಲ್ಲ ಎಂಬುದು ಅರಿವಾಗುತ್ತದೆ. ರಾಜ್ಯ ಸರಕಾರ ಸೂಚಿಸಿದ ಮೂವರು ವ್ಯಕ್ತಿಗಳಲ್ಲಿ ಒಬ್ಬರನ್ನು ಕೇಂದ್ರ ಸರಕಾರ ರಾಜ್ಯಪಾಲರನ್ನಾಗಿ ನೇಮಕ ಮಾಡಿದರೆ ಕೇಂದ್ರ ಮತ್ತು ರಾಜ್ಯದ ನಡುವೆ ನಡೆಯುವ ತಿಕ್ಕಾಟ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಪ್ರಯೋಜಿತ ಯೋಜನೆಗಳಿಗೆ ರಾಜ್ಯದ ಅನುದಾನ ಬಳಸುವ ಮೂಲಕ ರಾಜ್ಯದ ಮೇಲೆ ಹೊರೆ ಹಾಕುವ ಕೆಲಸ ಕೇಂದ್ರದಿಂದ ನಡೆಯುತ್ತಿದ್ದು ಇದರಿಂದ ರಾಜ್ಯದ ಅಭಿವೃದ್ಧಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತಿದೆ. ರಾಜ್ಯಗಳು ಹಣಕಾಸಿನ ವಿಚಾರದಲ್ಲಿ ದುರ್ಬಲವಾಗಬೇಕು. ರಾಜ್ಯ ಸರಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ತಿಳಿದು ಜನರು ರಾಜ್ಯ ಸರಕಾರದ ವಿರುದ್ಧ ತಿರುಗಿ ಬೀಳಬೇಕು ಎಂಬುದು ಕೇಂದ್ರ ಸರಕಾರದ ಹುನ್ನಾರ ಅಡಗಿದೆ ಎಂದರು.

ಇದನ್ನೂ ಓದಿರಿ: ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ವಿಶೇಷ ಪಡೆಯ ಅಗತ್ಯವಿದೆ: ಸಿಎಂ ಸಿದ್ದರಾಮಯ್ಯ

ವರ್ಷಕ್ಕೆ ಎರಡು ಬಾರಿಯಾದರೂ ಎಲ್ಲಾ ರಾಜ್ಯಗಳ‌ ಮುಖ್ಯಮಂತ್ರಿಗಳ ಸಭೆಯನ್ನು ಕೇಂದ್ರ ಸರಕಾರ ನಡೆಸಿ ರಾಜ್ಯದ ಸಮಸ್ಯೆಗಳನ್ನು ಆಳಿಸಬೇಕು. ಆದರೆ ಇದು ನಡೆಯುತ್ತಿಲ್ಲ. ಯೋಜನಾ ಆಯೋಗ ಮೊದಲಾದವುಗಳನ್ನು ಕಿತ್ತು ಹಾಕಿ ರಾಜ್ಯಗಳ ಅಧಿಕಾರವನ್ನು ದುರ್ಬಲ ಮಾಡಲಾಗಿದೆ. ರಾಜ್ಯದ ಸಮಸ್ಯೆಗಳನ್ನು ಹೇಳುವಂತ ವೇದಿಕೆಗಳೇ ಇಲ್ಲದಂತೆ ಮೋದಿ ಸರಕಾರ ಮಾಡಿದೆ ಟೀಕಿಸಿದರು.

ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕಿತ್ತುಹಾಕಿ ಕೇಂದ್ರ ಆಡಳಿತ ಪ್ರದೇಶವನ್ನಾಗಿ ಮಾಡಿರುವುದು ಒಕ್ಕೂಟ ತತ್ವದ ನೇರ ಉಲ್ಲಂಘನೆಯಾಗಿದೆ. ಯು.ಎ.ಪಿ.ಎ. ಕಾನೂನನ್ನು ದುರ್ಬಳಕೆ ಮಾಡಿ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ರಾಜ್ಯಕ್ಕೆ ನುಗ್ಗಿ ರಾಜ್ಯದ ಯಾರನ್ನು ಬೇಕಾದರೂ ಭಯೋತ್ಪಾದಕರನ್ನಾಗಿ ಮಾಡಲಾಗುತ್ತಿದೆ. ಈ ಕಾಯ್ದೆ ರಾಜ್ಯದ ಜನರ ಹಕ್ಕುಗಳನ್ನು ಕಾಪಾಡಲು ದ್ವನಿ ಎತ್ತುವವರ ದ್ವನಿ ಅಡಗಿಸಲು ಕೇಂದ್ರ ಸರಕಾರ ದುರ್ಬಳಕೆ ಮಾಡುತ್ತಿರುವುದು ನಡೆಯುತ್ತಿದೆ ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಸಂತ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಯ ಲೇಖನ ಬಿ.ಶ್ರೀಪಾದ ಭಟ್ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X