ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಸುಮಾರು 15 ಗಂಟೆಗಳ ಕಾಲ ಪತ್ರಿಕಾಗೋಷ್ಠಿ ನಡೆಸಿ ಹೊಸ ದಾಖಲೆ ಬರೆದಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರ ಹಿಂದಿನ ದಾಖಲೆಯನ್ನು ಇದು ಮೀರಿಸಿದೆ.
ʼಮುಯಿಝ್ಝು ಅವರು ಶನಿವಾರ ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿಯನ್ನು ಪ್ರಾರಂಭಿಸಿದ್ದರು. ಪ್ರಾರ್ಥನೆಗಾಗಿ ಅಲ್ಪ ವಿರಾಮಗಳೊಂದಿಗೆ 14 ಗಂಟೆ 54 ನಿಮಿಷಗಳ ಕಾಲ ಪತ್ರಿಕಾಗೋಷ್ಠಿ ನಡೆಯಿತುʼ ಎಂದು ಮುಯಿಝ್ಝು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
2019ರ ಅಕ್ಟೋಬರ್‌ನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ 14 ಗಂಟೆಗಳ ಕಾಲ ಪತ್ರಿಕಾಗೋಷ್ಠಿ ನಡೆಸಿ ದಾಖಲೆ ಬರೆದಿದ್ದರು. ಇದಕ್ಕೂ ಮೊದಲು ಬೆಲರೂಸಿಯನ್ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ 7 ಗಂಟೆಗಳ ಕಾಲ ನಡೆಸಿದ್ದ ಪತ್ರಿಕಾಗೋಷ್ಠಿ ದಾಖಲೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳೂರು ಹತ್ಯೆಗಳಲ್ಲಿ ಮಾಧ್ಯಮಗಳೂ ಆರೋಪಿಗಳಲ್ಲವೇ?
ʼಮುಯಿಝ್ಝು ಅವರ ವಿಸ್ತೃತ ಪತ್ರಿಕಾಗೋಷ್ಠಿ ಮೂಲಕ ಸಮಾಜದಲ್ಲಿ ಪತ್ರಿಕೆಗಳ ನಿರ್ಣಾಯಕ ಪಾತ್ರವನ್ನು ಒಪ್ಪಿಕೊಂಡರು ಮತ್ತು ವಾಸ್ತವಿಕ, ಸಮತೋಲಿತ ಮತ್ತು ನಿಷ್ಪಕ್ಷಪಾತ ವರದಿಗಾರಿಕೆಯ ಮಹತ್ವವನ್ನು ಹೇಳಿದರುʼ ಎಂದು ಮಾಲ್ಡೀವ್ಸ್ ಸರಕಾರ ಹೇಳಿಕೆಯಲ್ಲಿ ತಿಳಿಸಿದೆ. ಸುದೀರ್ಘ ಪತ್ರಿಕಾಗೋಷ್ಟಿಯಲ್ಲಿ ಮುಯಿಝ್ಝು ಪತ್ರಕರ್ತರ ಪ್ರಶ್ನೆಗಳಿಗೆ ಕೂಡ ಉತ್ತರಿಸಿದರು.