ಕೊಲ್ಲೂರು ಬಡ ವಿಧವೆ ಕೊರಗ ಸಮುದಾಯಕ್ಕೆ ಸೇರಿದ ಗಂಗಾ ಕೊರಗ ಅವರ ವಾಸ್ತವ್ಯದ ಮನೆಯನ್ನು ಕರುಣೆಯಿಲ್ಲದ ಸ್ಥಳೀಯ ಜಗದಂಬಾ ಟ್ರಸ್ಟ್ ಬುಲ್ಡೋಜರ್ ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿತ್ತು.
ಈ ಪ್ರಕರಣದಲ್ಲಿ ಆರೋಪಿಗಳು ತಪ್ಪು ಮಾಹಿತಿ ನೀಡಿ,ನ್ಯಾಯಾಲಯದಿಂದ ಆದೇಶ ಪಡೆದದ್ದರಿಂದ ಪೊಲೀಸರು,ಜಿಲ್ಲಾಡಳಿತ ಮತ್ತು ಸಂಘಟನೆಗೆ ಆರೋಪಿಗಳ ಕೃತ್ಯ ನಿಜವಾಗಿಯೂ ಅಪರಾಧ ಎಂದು ತಿಳಿದಿದ್ದರೂ ಕಾನೂನು ಪ್ರಕ್ರಿಯೆಗಳ ಜಿಜ್ಞಾಸೆಯಿಂದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವುದು ವಿಳಂಭವಾಗಿತ್ತು.
ಕೊನೆಗೂ ನ್ಯಾಯಾಲಯದಿಂದ ಎಲ್ಲಾ ದಾಖಲೆಗಳನ್ನು ಪಡೆದು,ಪಡೆದು ಕಂದಾಯ ಇಲಾಖೆಯಿಂದ ವರದಿಯನ್ನು ಪಡೆದು ಮೇ 2 ರಂದು ಕೊನೆಗೂ ಕೃತ್ಯವನ್ನು ಮಾಡಿದ ಜಗದಂಬಾ ಸೇವಾ ಟ್ರಸ್ಟ್ ಕೊಲ್ಲೂರು ಇದರ ಎಲ್ಲಾ ಪದಾಧಿಕಾರಿಗಳ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ BNS ಕಾಯ್ದೆ ಮತ್ತು ಪ.ಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂ ಗಳಡಿ FIR ದಾಖಲಿಸಲಾಯಿತು.
ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ವಿಬಾಗೀಯ ಸಂ.ಸಂಚಾಲಕ ಶಾಮರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಕರ್ನಾಟಕ-ಕೇರಳ ಆದಿವಾಸಿ ಕೊರಗ ಸಂಘಟನೆಯ ಸುಶೀಲಾ ನಾಡ, ಕುಮಾರದಾಸ್ ಹಾಲಾಡಿ, ಜಿಲ್ಲಾ ಸಂಘಟನಾ ಸಂಚಾಲಕ ಶಾಮ್ ಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಹಕ್ಲಾಡಿ ರಾಜು ಕೆ.ಸಿ ಬೆಟ್ಟಿನಮನೆ, ಹೋರಾಟಗಾರ ಪುತ್ರನ್ ಹೆಬ್ರಿ ಇತರರು ಹಾಜರಿದ್ದರು.
ಗಂಗೆ ಕೊರಗ ಮನೆಧ್ವಂಸ ಪ್ರಕರಣವನ್ನು ಕ್ಲಪ್ತ ಸಮಯಕ್ಕೆ ಹೊರಗೆಳೆದು, ಹೋರಾಟಕ್ಕೆ ಪ್ರೇರೇಪಿಸಿದ ಎಲ್ಲಾ ಮಾಧ್ಯಮ ಗೆಳೆಯರು, ವೆಬ್-ಸಾಮಾಜಿಕ ಜಾಲತಾಣಗಳ ಸುದ್ದಿಗಾರರಿಗೆ, ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದರು.