ಕೇಂದ್ರ ಸರ್ಕಾರದ ವಕ್ಸ್ ತಿದ್ದುಪಡಿ ಕಾಯ್ದೆ-2025 ರ ವಿರುದ್ಧ ಮುಸ್ಲಿಂ ಸಮುದಾಯದ ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ (ರಿ) ಸಂಸ್ಥೆ ವತಿಯಿಂದ ಮೇ 5, 2025 ರ ಶುಕ್ರವಾರ ದಾವಣಗೆರೆಯಲ್ಲಿ ವಕ್ಫ್ ಉಳಿಸಿ, ಸಂವಿಧಾನ ಉಳಿಸಿ ಸಮಾವೇಶ ಆಯೋಜಿಸಲಾಗಿದೆ.
“ಕೇಂದ್ರ ಸರ್ಕಾರದ ವಕ್ಸ್ ತಿದ್ದುಪಡಿ ಕಾಯ್ದೆ-2025 ಯಾವುದೇ ಕಾರಣಕ್ಕೂ ದೇಶದ ಮುಸಲ್ಮಾನರು ಸ್ವೀಕರಿಸಲು ಸಾಧ್ಯವಿಲ್ಲ. ಹಾಗಾಗಿ ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ (ರಿ) ಸಂಸ್ಥೆ ವತಿಯಿಂದ ಮೇ 5, 2025 ರ ಶುಕ್ರವಾರ ಮಧ್ಯಾಹ್ನ 01:30 ಘಂಟೆಗೆ ಮಾಗನಹಳ್ಳಿ ರಸ್ತೆಯ ಮಂಡಕ್ಕಿ ಭಟ್ಟಿ ಲೇಔಟ್ ನ ಮೀಲಾದ್ ಮೈದಾನದಲ್ಲಿ ‘ವಕ್ಫ್ಉಳಿಸಿ ಸಂವಿಧಾನ ಉಳಿಸಿ’ ಎಂಬ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ” ಎಂದು ಸಂಘಟನೆಯ ಕಾರ್ಯದರ್ಶಿ ಮುಹಮ್ಮದ್ ತಿಳಿಸಿದ್ದಾರೆ.

“ಈ ಸಮಾವೇಶದ ಕೆಲಸ ಕಾರ್ಯಗಳು ಇಂದು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಲಾಗಿದೆ. ಈ ಸಮಾವೇಶಕ್ಕೆ ದಾವಣಗೆರೆ ಜಿಲ್ಲೆಯ ಎಲ್ಲಾ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಸಮಾವೇಶಕ್ಕೆ ಮುಸ್ಲಿಂ ಧಾರ್ಮಿಕ ಗುರುಗಳು ಹಾಗೂ ಪ್ರಗತಿಪರ ಚಿಂತಕರು ಜಾತ್ಯಾತೀಕತೆಯಲ್ಲಿ ವಿಶ್ವಾಸ ಇಡುವ ರಾಜಕೀಯ ಪಕ್ಷದ ಗಣ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸುತ್ತಾರೆ” ಎಂದು ಪೋಸ್ಟರ್ ಬಿಡುಗಡೆ ಮಾಡಿ ತಂಜಿಮ್ ಸಂಸ್ಥೆಯ ಅಧ್ಯಕ್ಷರಾದ ಬಾಡು ಸೇಠ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ: ಭತ್ತ ಖರೀದಿ ಕೇಂದ್ರಕ್ಕೆ ಆಗ್ರಹಿಸಿ
ರಸ್ತೆಯಲ್ಲಿ ಭತ್ತ ಸುರಿದು ರೈತರ ಪ್ರತಿಭಟನೆ.
ಈ ಸಂಧರ್ಭದಲ್ಲಿ ಕಾರ್ಯದರ್ಶಿ ಮಹಮ್ಮರ್ ಜಬೀವುಲ್ಲಾ, ಡಂಕುದ್ದೀನ್ ರಸ್ತೆ, ಸಾಬೀರ ಅಲಿ ಖಾನ್, ಇಮ್ರಾನ್ ರಜಾ, ಖಾದರ್ ಬಾಷ ರಸ್ತೆ, ಕೌಕತ್ ಆಲಿ ವಕೀಲದು ಖಲೀಲ್ ಖಾಸ್ ವಕೀಲರು, ಅನಿನ್ ಪಾಷ ವಕೀಲರು, ಸಯ್ಯದ್ ರಫೀಕ್, ದಾದಾಪೀರ್, ಕೆ. ಇಸ್ಮಾಯಿಲ್ ಸಾಬ್, ಜಬೀವುಲ್ಲಾ (ಟೈಲ್ಸ್), ವೈ, ಜಬೀವುಲ್ಲಾ, ತೂರ್ ಅಹಮದ್, ಟಿ, ಆಸ್ಕರ್, ನಾಜಿಲ್, ಮಹದ್ಗುರ್ ಸೋಯೇಬ್ ಅಲಿ, ಮಸೂದ್ ಅಹ್ಮದ್ ಜಿ ಹಜ್, ನಿಜಾಮ್, ಇಬ್ರಾಹಿಮ್, ಅದೀಲ್, ರಹಮತ್, ವಾಜಿದ್, ಇಸ್ಮಾಯಿಲ್, ಎಸ್.ಕೆ. ಅಮ್ಮದ್, ದಾದಾಪೀರ್, ಟಿ.ಮೊಪ್ಟರ್ ಸಮೀರ್, ಮೊಹಮ್ಮರ್ ಸುಹೀಲ್, ರಪನಾಶ್ ಉಲ್ಲಾ ಇತರರು ಹಾಜರಿದ್ದರು.