ಜೂನ್ 28,29 ರಂದು ಜಿಲ್ಲೆಯಲ್ಲಿ ನಡೆಯಲಿರುವ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ದಲಿತ ಪರ ಹೋರಾಟಗಾರರು ,ವಿವಿಧ ಸಂಘ ಸಂಸ್ಥೆಗಳು ,ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಹಾಗೂ ಸಮ್ಮೇಳನದ ಸಮಿತಿಯ ಸದಸ್ಯರು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರು ಹಾಗು ಸಮ್ಮೇಳನ ಸಂಯೋಜಕರಾದ ತಾಯರಾಜ್ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಎರಡು ದಿನದ ಸಮ್ಮೇಳನ ಕಾರ್ಯಕ್ರಮದ ಬಗ್ಗೆ ಪದಾಧಿಕಾರಿಗಳನ್ನು ಪೂರ್ವಭಾವಿ ಸಭೆ ಕರೆದು ಮಾತನಾಡಿದರು.
ರಾಯಚೂರು ಜಿಲ್ಲೆಯು ಚಳುವಳಿ,ಹೋರಾಟಗಾರರ ಕೇಂದ್ರ ಬಿಂದು ಎಂದು ಹೆಸರಾಗಿದೆ. ಹಲವು ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆಯಲಿರುವ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಿ ಯಶಸ್ವಿಯಾಗುವುದಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ರಾಜ್ಯ ಮುಖಂಡ ಡಾ.ಅರ್ಜುನ ಗೊಳಸಂಗಿ ಸಭೆಯನ್ನು ಉದ್ದೇಶಿಸಿ ಸಮ್ಮೇಳನ ಸಲುವಾಗಿ ರಚಿಸಿದ ವಿವಿಧ ಸಮಿತಿಗಳ ಕಾರ್ಯ ಮತ್ತು ಆರ್ಥಿಕ ಕ್ರೋಢೀಕರಣ ಬಹುಮುಖ್ಯವಾಗಿರುತ್ತದೆ. ಸಮ್ಮೇಳನ ಯಶಸ್ವಿ ಆಗಬೇಕಾದರೆ ನಮ್ಮ ವೈಯಕ್ತಿಕ ಕೆಲಸಗಳನ್ನು ಕೆಲವು ದಿನಗೋಸ್ಕರ ಬದಿಗೊತ್ತಿ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಹಿರಿಯ ಮುಖಂಡರಿಗೆ ವಸತಿ ವ್ಯವಸ್ಥೆ ಸೇರಿದಂತೆ ಯಾವುದು ಲೋಪವಾಗದಂತೆ ಎಚ್ಚರ ವಹಿಸಿ ಅತಿಥೋಪಚಾರ ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸಬೇಕು.ಎಲ್ಲಾ ಪದಾಧಿಕಾರಿಗಳು ಒಟ್ಟಿಗೆ ಕಾರ್ಯ ನಿರ್ವಹಣೆ ಮೂಲಕ ಸಮ್ಮೇಳನದ ಸಂದೇಶ ಸಾರೋಣ ಎಂದು ತಿಳಿಸಿದರು.
ಸಭೆಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ನರಸಿಂಹ ಭೈರವ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಧರ್ಮಾವತಿ ಎಸ್.ನಾಯಕ,ರಾಯಚೂರು ಯುವ ಘಟಕದ ಜಿಲ್ಲಾಧ್ಯಕ್ಷ ಪಾರ್ಥ ಸಿರವಾರ, ರಾಯಚೂರು ತಾಲೂಕು ಅಧ್ಯಕ್ಷ ನರಸಿಂಹಲು ಪಿ, ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮಿ , ಮಾನ್ವಿ ತಾಲ್ಲೂಕಿನ ಅಧ್ಯಕ್ಷ ಆರ್.ಕೆ ಈರಣ್ಣ, ಕಾರ್ಯದರ್ಶಿ ಡಾ.ಬಸವರಾಜ ಸುಂಕೇಶ್ವರ, ಲಿಂಗಸುಗೂರು ತಾಲ್ಲೂಕ ಅಧ್ಯಕ್ಷ ಅಮರೇಶ ವೆಂಕಟಪುರ ,ಕಾರ್ಯದರ್ಶಿ ಡಾ.ಮಹಾಂತಗೌಡ ಪಾಟೀಲ್, ಡಾ.ಪರಮಾನಂದ, ಲಿಂಗಸುಗೂರು ತಾಲ್ಲೂಕಿನ ಯುವ ಘಟಕದ ಅಧ್ಯಕ್ಷ ಸುರೇಶ್ ಹಟ್ಟಿ, ಮಲ್ಲಿಕಾರ್ಜುನ ಕಡೆಚೂರು, ಸಿಂಧನೂರು ತಾಲ್ಲೂಕು ಕಾರ್ಯದರ್ಶಿ ರಾಮಣ್ಣ ಹಿರೇಬೇರಿಗಿ, ಸದಸ್ಯರಾದ ಯಂಕಪ್ಪ ಪಿರಂಗಿ,ಈರಪ್ಪ ಕೊಂಬಿನ್,ಮಲ್ಲೇಶ್ ಭೈರವ ರಾಯಚೂರು ತಾಲೂಕ ದಲಿತ ವಿದ್ಯಾರ್ಥಿ ಪರಿಷತ್ತಿನ ಪಾಲರಾಜ್,ರವಿ ಮುಂತಾದವರು ಭಾಗವಹಿಸಿದ್ದರು.