ಎನ್‌ಡಿಎಯಲ್ಲೇ ಇರುತ್ತೇನೆ, ಯಾವುದೇ ಬದಲಾವಣೆಗಳ ಬಗ್ಗೆ ಯೋಚಿಸುವುದಿಲ್ಲ: ನಿತೀಶ್ ಕುಮಾರ್

Date:

Advertisements

ಸತತ ಐದನೇ ಬಾರಿಗೆ ಅಧಿಕಾರವನ್ನು ಮತ್ತೆ ಪಡೆಯುವ ತಯಾರಿಯನ್ನು ನಡೆಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು “ಎನ್‌ಡಿಎಯಲ್ಲೇ ಇರುತ್ತೇನೆ, ಯಾವುದೇ ಬದಲಾವಣೆಗಳ ಬಗ್ಗೆ ಯೋಚಿಸುವುದಿಲ್ಲ” ಎಂದು ಹೇಳಿದ್ದಾರೆ.

ದೇಶಾದ್ಯಂತ ಸಾವಿರಾರು ಯುವ ಕ್ರೀಡಾಪಟುಗಳು ಭಾಗವಹಿಸುತ್ತಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜೆಡಿ(ಯು) ನಾಯಕ ಕುಮಾರ್, ತಾನು ಎನ್‌ಡಿಎ ಕೂಟದಲ್ಲೇ ಉಳಿಯುವುದಾಗಿ ಪುನರುಚ್ಚರಿಸಿದರು.

ಇದನ್ನು ಓದಿದ್ದೀರಾ? ಎರಡು ಬಾರಿ ತಪ್ಪು ಮಾಡಿದೆ, ಇನ್ನೆಂದೂ ಎನ್‌ಡಿಎ ತೊರೆಯಲ್ಲ: ನಿತೀಶ್‌ ಕುಮಾರ್‌

Advertisements

ಹಲವು ಬಾರಿ ಪಕ್ಷಾಂತರಗೊಳ್ಳುವ ಮೂಲಕವೇ ಸುದ್ದಿಯಾಗಿರುವ ನಿತೀಶ್ ಕುಮಾರ್ ಅವರು ಈಗ ಮತ್ತೆ ಪಕ್ಷಾಂತರಗೊಳ್ಳಬಹುದು ಎಂಬ ಸುದ್ದಿಗಳು ಆಗಾಗೇ ಆಗುತ್ತಲೇ ಇದೆ. ಈ ನಡುವೆ ತಾನು ಎನ್‌ಡಿಎಯಲ್ಲೇ ಇರುತ್ತೇನೆ ನಿತೀಶ್ ಕುಮಾರ್ ಹೇಳಿದ್ದಾರೆ.

“ನಾನು ಯಾವಾಗಲೂ ಇಲ್ಲೇ ಇರುತ್ತೇನೆ. ನನ್ನ ಪಕ್ಷ ಎರಡು ಬಾರಿ ನಾನು ಎನ್‌ಡಿಎ ಕೂಟದೊಂದಿಗಿನ ಮೈತ್ರಿಯನ್ನು ಮುರಿಯುವಂತೆ ಮಾಡಿದೆ. ಆದರೆ ಇದು ಮತ್ತೆ ಸಂಭವಿಸುವುದಿಲ್ಲ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

“ನನ್ನನ್ನು (ಮುಖ್ಯಮಂತ್ರಿ) ಮಾಡಿದವರು ಯಾರು? ಅಟಲ್ ಬಿಹಾರಿ ವಾಜಪೇಯಿ ಅವರು” ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಅವರ ಪಕ್ಷವು 1990ರ ದಶಕದ ಮಧ್ಯಭಾಗದಿಂದ ಬಿಜೆಪಿ ಮಿತ್ರಪಕ್ಷವಾಗಿತ್ತು. 2013ರಲ್ಲಿ ನರೇಂದ್ರ ಮೋದಿ ಅವರೊಂದಿಗಿನ ಅತೃಪ್ತಿಯ ನಂತರ ಬಿಜೆಪಿಯೊಂದಿಗಿನ ಮೈತ್ರಿ ಕೈಬಿಟ್ಟರು.

ಇದನ್ನು ಓದಿದ್ದೀರಾ? ಮೋದಿ 3.0 ಸರ್ಕಾರದಲ್ಲಿ ನಿತೀಶ್ ಪಕ್ಷಕ್ಕೆ 2 ಮಂತ್ರಿಗಿರಿ

ಒಂದು ವರ್ಷದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಹೀನಾಯವಾಗಿ ಸೋತಿದ್ದಾರೆ. ಮೋದಿ ಪ್ರಧಾನಿಯಾದರೂ ನಿತೀಶ್ ಕುಮಾರ್ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇದಕ್ಕೆ ಕಾರಣ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರೊಂದಿಗಿನ ಮೈತ್ರಿ. ಅದಾದ ಬಳಿಕ 2017ರಲ್ಲಿ ಮತ್ತೆ ಎನ್‌ಡಿಎಗೆ ಮರಳಿದರು.

2022ರವರೆಗೆ ಈ ಮೈತ್ರಿ ಮುಂದುವರೆದಿದ್ದು, ಬಳಿಕ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಜೊತೆ ಕುಮಾರ್ ಕೈಜೋಡಿಸಿದರು. ಬಿಜೆಪಿಯನ್ನು ಸೋಲಿಸುವುದಾಗಿ ಪ್ರತಿಜ್ಞೆ ಮಾಡಿದರು.

ಬಳಿಕ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೆ ಮುನ್ನ, 70ರ ಹರೆಯದ ನಿತೀಶ್ ಕುಮಾರ್ ಅವರು ಎನ್‌ಡಿಎಗೆ ಮರಳಿದರು. ಬಿಜೆಪಿ ವಿರುದ್ಧವಾಗಿ ಒಟ್ಟುಗೂಡಿದ ಇಂಡಿಯಾ ಒಕ್ಕೂಟವನ್ನು ತ್ಯಜಿಸಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X