ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳೆಂದು ಬಿಂಬಿಸಿ ನಾಲ್ಕು ವರ್ಷಗಳ ಹಳೆಯ ಫೋಟೋವೊಂದನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ʼಆರ್ ಟಿವಿʼ ಮಾಧ್ಯಮದ ವಿರುದ್ಧ ದೂರು ದಾಖಲಿಸಲಾಗಿದೆ.
ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ತಸ್ಲೀಂ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ನಾನು ಹಾಗೂ ಕೆಲ ಗೆಳೆಯರಿರುವ ಫೋಟೋವನ್ನು ಟಿವಿ ಚಾನಲ್ ಪ್ರಸಾರ ಮಾಡಿದೆ. ಇದು 2021ರಲ್ಲಿ ಭಾಗಿಯಾಗಿದ್ದ ಪ್ರಕರಣವೊಂದರ ಫೋಟೋ ಆಗಿದೆ. ಆದರೆ, ಆರ್ ಟಿವಿ ಅದನ್ನು ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳೆಂದು ಬಿಂಬಿಸಿ ಪ್ರಸಾರ ಮಾಡಿ ಮಾನಹಾನಿ ಮಾಡಿದೆ. ಸಂಸ್ಥೆ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ತಸ್ಲೀಂ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು | ಸಂಘಪರಿವಾರದ ನಿರೂಪಣೆಯನ್ನು ಕಾಂಗ್ರೆಸ್ ನಾಯಕರು ಪಾಲಿಸುತ್ತಿರುವುದು ದುರದೃಷ್ಟಕರ: ಲಬೀದ್ ಶಾಫಿ
