ಯಾದಗಿರಿ ಜಿಲ್ಲಾ ಒಳ ಮೀಸಲಾತಿ ಸಮನ್ವಯ ಸಮಿತಿ ವತಿಯಿಂದ ಬಲಗೈ ಸಮುದಾಯ ಮುಖಂಡರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನಲ್ಲಿ ಒಳ ಮೀಸಲಾತಿ ಜಾತಿ ಜನಗಣತಿ ಜಾಗೃತಿ ಕುರಿತು ಸಭೆ ನಡೆಸಿದರು.
ಜಿಲ್ಲಾಧ್ಯಕ್ಷ ಡಾ.ಗಾಳೆಪ್ಪ ಪೂಜಾರಿ ಮಾತನಾಡಿ, ʼನ್ಯಾಯಮೂರ್ತಿ ಎಸ್.ನಾಗಮೋಹನ್ ದಾಸ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಒಳ ಮೀಸಲಾತಿ ಜಾತಿ ಜನಗಣತಿ ಮೇ 5 ರಿಂದ 17 ವರೆಗೆ ನಡೆಯುವ ಜಾತಿ ಗಣತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಬಲಗೈ ಸಮುದಾಯದವರು ಕಡ್ಡಾಯವಾಗಿ ʼಹೊಲೆಯʼ ಎಂದು ನಮೂದಿಸಬೇಕುʼ ತಿಳಿಸಿದರು.
ಸಮಿತಿಯ ಡಾ.ಭಗವಂತ ಅನ್ವರ, ಗೌರವಾಧ್ಯಕ್ಷ ಶ್ರೀಶೈಲ ಹೂಸಮನಿ, ಉಪಾಧ್ಯಕ್ಷ ಸಾಬಣ್ಣ ಬಡಿಗೇರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಲ್ಲಿಕಾರ್ಜುನ ಪೂಜಾರಿ, ಮರೆಪ್ಪ ಬುಕ್ಕಲ್, ಮುಖಂಡರಾದ ರಾಹುಲ್ ಹುಲಿಮನಿ, ಶಿವಪುತ್ರ ಜವಳಿ, ಮಾಳಿಂಗರಾಯ ಅನಕಸೂಗುರ, ಕಾಶಿನಾಥ ನಾಟೇಕರ್, ಪರಶುರಾಮ, ಅಶೋಕ ಹೂಸಮನಿ, ಮರೆಪ್ಪ ಪರಮೇಶ್ವರ್, ಮಲ್ಲೆಶ ಕುರುಕುಂದಿ, ಶರಣಪ್ಪ ಮದ್ದರಕಿ, ಚಂದ್ರಕಾಂತ ಚಲುವಾದಿ, ಶಿವು ಕುರುಕುಂಬಳ, ರಂಗನಾಥ ಬಾಗ್ಲಿ, ವಿರೇಶ್ ಕೊಂಕಲ್ ಮುಂತಾದವರು ಉಪಸ್ಥಿತರಿದ್ದರು