ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಹಿಂದು-ಮುಸ್ಲಿಂ ಭಯೋತ್ಪಾದಕತೆಯಂತಿದೆ: ಸಚಿವ ರಾಮಲಿಂಗಾರೆಡ್ಡಿ

Date:

Advertisements

ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಹಿಂದು ಹಾಗೂ ಮುಸ್ಲಿಂ ಸಂಘಟನೆಗಳ ಭಯೋತ್ಪಾದಕರ ಕಾರ್ಖಾನೆಯಂತೆ ತೋರುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ವಿಜಯನಗರದ ಹೊರವಲಯದ ಅಮರಾವತಿ ಗ್ರಾಮದಲ್ಲಿ ನಿರ್ಮಿಸಲಾದ ದೇವರಾಜ ಅರಸ್ ಟ್ರಕ್ ಟರ್ಮಿನಲ್ ಉದ್ಘಾಟನೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ದಕ್ಷಿಣ ಕನ್ನಡದ ಚರಿತ್ರೆ ತೆಗೆದು ನೋಡಿದರೆ ಯಾರೇನೂ ಕಡಿಮೆ ಇಲ್ಲವೆಂದೇ ಅರ್ಥ. ಯಾರೇ ಇಂತಹ ಹೀನ ಕೃತ್ಯ ಮಾಡಿರಲಿ,‌ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕು” ಎಂದು ಆಗ್ರಹಿಸಿದರು.

“ಒಂದು ಕೈಯಿಂದ ಚಪ್ಪಾಳೆ ಆಗಲು ಸಾಧ್ಯವಿಲ್ಲ. ಎರಡೂ ಕೋಮುದ್ವೇಷಿ ಸಮುದಾಯಗಳಿಂದ ಅಪಾರ ಸಂಖ್ಯೆಯಲ್ಲಿ ಕೊಲೆಯಾಗಿವೆ. ಗಲಾಟೆ ಮಾಡಿದವರು, ಕೊಲೆ ಮಾಡಿದವರು ಬಂಧಿತರಾಗುತ್ತಾರೆ. ಆದರೆ, ಅವರ ಹಿಂದೆ ಇರುವ ಶಕ್ತಿಗಳ ಬಂಧನ ಆಗುತ್ತಿಲ್ಲ. ಬಡ ಜೀವಗಳು ಕೊಲೆಯಾಗುತ್ತಿವೆ. ಬಡವರು ಅಪರಾಧ ಮಾಡಿ ಜೈಲುಪಾಲಾಗುತ್ತಿದ್ದಾರೆ. ನಾನು ಗೃಹಸಚಿವನಾಗಿದ್ದಾಗ ಗಲಭೆಯ ಹಿಂದೆ ಯಾರಿದ್ದಾರೋ ಅವರನ್ನು ಹುಡುಕುವ ಪ್ರಯತ್ನ ಮಾಡಿ ಕಾನೂನು ಕ್ರಮ ಕೈಗೊಂಡಿದ್ದೆ. ಬಷೀರ್, ದೀಪಕ್ ರಾವ್ ಪ್ರಕರಣಗಳು ಇದಕ್ಕೆ ಸಾಕ್ಷಿಗಳಾಗಿವೆ. ಐದಾರು ವರ್ಷ ಯಾವುದೇ ಇಂತಹ ಘಟನೆಗಳು ಆಗಿರಲಿಲ್ಲ, ಈಗ ಮತ್ತೆ ಆರಂಭವಾಗಿವೆ” ಎಂದು ಆರೋಪಿಸಿದರು.

Advertisements

“ನಾನು ಗೃಹ ಸಚಿವನಾಗಿದ್ದಾಗ ‘ನಗ್ನ ಸತ್ಯ’ ಎಂಬ ಪುಸ್ತಕ ಬಿಡುಗಡೆ ಮಾಡಿದ್ದೆ. ಅದನ್ನು ಓದಿದರೆ ಗಲಭೆ ನಡೆಯುವ ಹಿನ್ನೆಲೆ, ಕಾರಣಗಳು ಗೊತ್ತಾಗುತ್ತವೆ. ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಮಾಡಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ನಾವು ಯಾರಿಗೂ ಕುಮ್ಮಕ್ಕು ಕೊಡುವುದಿಲ್ಲ. ಇಲ್ಲಿ ನಮ್ಮ ಪಕ್ಷದವರು ಇದ್ದರೂ ‘ಅಂತರವನ್ನು ಬಂಧಿಸಿ’ ಎಂದೇ ಹೇಳುತ್ತೇವೆ. ಆರೋಪಿಗಳು ಜೈಲಿಗೆ ಹೋದಾಗ, ಕುಟುಂಬ ಸಂರಕ್ಷಣೆ ಮಾಡೋರು ಯಾರು? ಕೋರ್ಟ್ ಗೆ ಓಡಾಡೋರು ಯಾರು? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು” ಎಂದರು.

ಇದನ್ನೂ ಓದಿ: ವಿಜಯನಗರ | ಪಹಲ್ಗಾಮ್‌ನ ಉಗ್ರ ದಾಳಿ; ಡಿವೈಎಫ್‌ಐ ಆಕ್ರೋಶ

ಮುಂದುವರೆದು, “ಕೆಎಸ್‌ಆರ್‌ಟಿಸಿ ನೌಕರರ ಸಂಬಳ ಬಾಕಿ ಸಮಸ್ಯೆಗೆ ಬಿಜೆಪಿ ಸರ್ಕಾರವೇ ಕಾರಣ. ಅವರ ಅವಧಿಯಲ್ಲಿ ಬಾಕಿ ಉಳಿಸಿದ ಹಣವೇ ಹೆಚ್ಚಾಗಿದೆ. ಬಜೆಟ್ ಇಲ್ಲದೆ ಘೋಷಣೆ ಮಾಡಿದ್ದರಿಂದ ಹೀಗಾಗಿದೆ. ಈ ಸಮಸ್ಯೆಯನ್ನು ಸದ್ಯದಲ್ಲೇ ಬಗೆಹರಿಸಲಾಗುತ್ತದೆ. ಅಲ್ಲದೆ ಅವಧಿ ಮುಗಿದ ಯಾವುದೇ ವಾಹನವನ್ನು ಓಡಿಸಲ್ಲ, 15 ವರ್ಷ ದಾಟಿದ ಯಾವುದೇ ವಾಹನವನ್ನು ರಸ್ತೆಗೆ ಇಳಿಸಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ 700 ಹೊಸ ಬಸ್ ನೀಡಲಾಗುತ್ತದೆ. ಬಿಜೆಪಿ ಅವಧಿಯಲ್ಲಿ ಒಂದೇ ಒಂದು ಬಸ್ ಕೊಟ್ಟಿರಲಿಲ್ಲ” ಎಂದು ಅವರು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X