ಸಂಸ್ಕೃತ ಅತ್ಯಂತ ವೈಜ್ಞಾನಿಕ ಭಾಷೆಯಾಗಿದ್ದು, ಕಂಪ್ಯೂಟರ್ ಸ್ನೇಹಿಯಾಗಿದೆ. ನಾಸಾ ವಿಜ್ಞಾನಿಗಳು ಕೂಡ ಭಾಷೆಯ ಕೋಡಿಂಗ್ ಮತ್ತು ಇತರ ವೈಜ್ಞಾನಿಕ ಕಾರ್ಯಗಳಿಗೆ ಪ್ರಾಚೀನ ಭಾರತೀಯ ಭಾಷೆಯ ಸಾಮರ್ಥ್ಯವನ್ನು ಗುರುತಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಶರ್ಮಾ ತಿಳಿಸಿದ್ದಾರೆ.
ದೆಹಲಿಯ ಸಂಸ್ಕೃತ ಭಾಷಾ ಕಲಿಕೆಯ ಉಪಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಭವ್ಯ ಇತಿಹಾಸವನ್ನು ಇದರಲ್ಲಿ ಬರೆಯಲಾಗಿದೆ. ನಮ್ಮ ಸಂಸ್ಕೃತಿಯನ್ನು ಇದರಲ್ಲಿ ದಾಖಲಿಸಲಾಗಿದೆ. ವಿಶ್ವದಾದ್ಯಂತ 60 ವಿವಿಗಳಲ್ಲಿ ಈ ಭಾಷೆಯನ್ನು ಹೇಳಿಕೊಡುತ್ತಾರೆ. ನಾಸಾ ವಿಜ್ಞಾನಿಗಳು ಕೂಡ ಸಂಸ್ಕೃತದ ಬಗ್ಗೆ ಸಂಶೋಧನಾ ಪ್ರಬಂಧ ಬರೆದಿದ್ದಾರೆ. ಇದು ಕೋಡಿಂಗ್ ಹಾಗೂ ಕಮಾಂಡ್‌ಗಳನ್ನು ಬೆಂಬಲಿಸುತ್ತದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಸಂಸ್ಕೃತವು ಭಾರತದ ಸಂಸ್ಕೃತಿ ಹಾಗೂ ಹಲವು ಭಾಷೆಗಳ ಆಧಾರಸ್ತಂಭವಾಗಿದೆ. ದೇಶದಾದ್ಯಂತ ಈ ಭಾಷೆಯನ್ನು ಮಾತನಾಡುತ್ತಾರೆ. ಪ್ರತಿಯೊಂದು ರಾಜ್ಯವು ಮಾತೃಭಾಷೆ ಹೊಂದಿದೆ. ಆದರೆ ವಾಸ್ತವವೇನೆಂದರೆ ಸಂಸ್ಕೃತ ನಮ್ಮ ಮಾತೃಭಾಷೆಯಾಗಿದ್ದು, ಪ್ರತಿಯೊಂದು ಭಾಷೆಯು ಅದರಿಂದ ಹುಟ್ಟಿಕೊಂಡಿದೆ. ಹಿಂದಿ, ಮರಾಠಿ, ಬಂಗಾಳಿ, ಸಿಂಧಿ, ಮಲಯಾಳಂ ಎಲ್ಲ ಸಂಸ್ಕೃತದ ಅಂಗಗಳು ಎಂದು ರೇಖಾ ಗುಪ್ತಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಹಾಸ್ ಶೆಟ್ಟಿ ಸಾವಿನಲ್ಲಿ ಬಿಜೆಪಿ ಕೆಟ್ಟ ರಾಜಕೀಯ
“ವಿಶ್ವವು ವಿಶ್ವ ಗುರುವನ್ನು ಹೊಂದಬೇಕಾದರೆ, ನಾವು ಖಂಡಿತಾ ಸಂಸ್ಕೃತದ ಮೂಲಕ ಆಳವಾದ ಜ್ಞಾನವನ್ನು ಹೊಂದಬೇಕಿದೆ. ಈ ಭಾಷೆಯಿಂದಲೇ ಹಿಂದೆ ನಮ್ಮ ವಿಜ್ಞಾನ, ವ್ಯವಹಾರ ಹಾಗೂ ಸಂಸ್ಖೃತಿ ನಡೆಯುತ್ತಿತ್ತು ಎಂದು ದೆಹಲಿ ಸಿಎಂ ಹೇಳಿದರು.
ನಮ್ಮ ಮಕ್ಕಳು ಫ್ರೆಂಚ್, ಜರ್ಮನ್ ಅಥವಾ ಇಂಗ್ಲಿಷ್ ಮಾತನಾಡಿದರೆ, ನಾವು ಆ ಮಗುವನ್ನು ತುಂಬಾ ಪ್ರತಿಭಾನ್ವಿತ ಎಂದು ಪರಿಗಣಿಸಿ ಅವರ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ಒಂದು ಮಗು ಸಂಸ್ಕೃತದಲ್ಲಿ ಅದೇ ನಿರರ್ಗಳವಾಗಿ ಮಾತನಾಡಿದಾಗ, ಅದನ್ನು ದೊಡ್ಡ ವಿಷಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಅವರು ಹೇಳಿದರು.