ಕಾಡುಹಂದಿಗಳನ್ನು ಭೇಟೆಯಾಡಿ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಉಪ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ನವೀನ್ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದಿರುವ ಆರೋಪಿ.
ಬಾಗೇಪಲ್ಲಿ ತಾಲೂಕಿನ ಪುಟ್ಟಪರ್ತಿ ಮತ್ತು ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಕಾಡುಹಂದಿಗಳನ್ನು ಭೇಟೆಯಾಡಿ, ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪಾತಪಾಳ್ಯ ಉಪ ವಲಯ ಅರಣ್ಯಾಧಿಕಾರಿಗಳು ಬೊಲೆರೊ ವಾಹನವನ್ನು ಹಿಂಬಾಲಿಸಿದ್ದು, ಕಾಡುಹಂದಿಗಳ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯಿಂದ 9 ಜೀವಂತ ಮತ್ತು 11 ಮೃತ ಕಾಡು ಹಂದಿಗಳು, ಭೇಟೆಗೆ ಬಳಸಿದ್ದ ಬಲೆ, ಚಾಕು, ಮೊಬೈಲ್ ಪೋನ್, ಬೊಲೆರೊ ವಾಹನ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣವನ್ನು ಭೇದಿಸಿರುವ ಅಧಿಕಾರಿಗಳನ್ನು ಬಾಗೇಪಲ್ಲಿ ಅರಣ್ಯ ವಲಯಾಧಿಕಾರಿ ಜಿ.ವಾಸುದೇವ್ ಮೂರ್ತಿ ಅಭಿನಂದಿಸಿದ್ದಾರೆ.