ಶಾಲಾ ಶಿಕ್ಷಕ ಮತ್ತು ವಿದ್ಯಾರ್ಥಿನಿಯ ಮೃತದೇಹಗಳು ಉತ್ತರ ಪ್ರದೇಶದ ಅಲಿಗಢದ ಓಯೋ ಹೋಟೆಲ್‌ನಲ್ಲಿ ಪತ್ತೆಯಾಗಿವೆ. ಇಬ್ಬರೂ ವಿಷ ಸೇವಿಸಿ, ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮೃತರನ್ನು 23 ವರ್ಷದ ಶಿಕ್ಷಕ ಚಂದ್ರಪ್ರಭ್ ಮತ್ತು 14 ವರ್ಷದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರೀತಿಸುತ್ತಿದ್ದರು, ಊರು ತೊರೆದು ಹೋಗಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಅವರ ಜೀವನವು ದುರಂತದಲ್ಲಿ ಅಂತ್ಯಗೊಂಡಿದ್ದು, ಇಬ್ಬರೂ ತಮ್ಮ ಜೀವ ಕಳೆದುಕೊಂಡಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಮೃತ ಶಿಕ್ಷಕ ಚಂದ್ರಪ್ರಭ್ ಅವರು ಜ್ವಾಲಾಜಿಪುರಂ ನಿವಾಸಿಯಾಗಿದ್ದು, ಖಾಸಗಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಅದೇ ಶಾಲೆಯಲ್ಲಿ ವಿದ್ಯಾರ್ಥಿನಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಕ ಟ್ಯೂಷನ್ ತರಗತಿಗಳನ್ನೂ ತೆಗೆದುಕೊಳ್ಳುತ್ತಿದ್ದರು. ಈ ವೇಳೆ, ಶಿಕ್ಷಕ ಮತ್ತು ವಿದ್ಯಾರ್ಥಿನಿ ನಡುವೆ ಪ್ರೇಮ ಬೆಳೆದಿತ್ತು ಎಂದು ಹೇಳಲಾಗಿದೆ.
ಶಿಕ್ಷಕ ಮತ್ತು ವಿದ್ಯಾರ್ಥಿನಿಯ ಪ್ರೇಮ ಸಂಬಂಧದ ಬಗ್ಗೆ 3 ತಿಂಗಳ ಹಿಂದೆ ಕುಟುಂಬಗಳಿಗೆ ಗೊತ್ತಾಗಿತ್ತು. ಬಳಿಕ, ವಿದ್ಯಾರ್ಥಿನಿಯನ್ನು ಟ್ಯೂಷನ್‌ಗೆ ಕಳಿಸುವುದನ್ನು ಪೋಷಕರು ನಿಲ್ಲಿಸಿದ್ದರು. ಶಾಲೆಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿನಿ ಭೇಟಿಯಾಗದಂತೆ ತೆಡೆಯಲು ಎರಡೂ ಕುಟುಂಬಗಳು ಯತ್ನಿಸಿದ್ದವು. ಆದರೂ, ಅವರು ರಹಸ್ಯವಾಗಿ ಭೇಟಿ ಮಾಡುತ್ತಿದ್ದರು ಎಂದು ವರದಿಯಾಗಿದೆ.
In a shocking incident in #UttarPradesh's #Aligarh, a private school teacher, #Chandrabhan, and a class 8 student were found dead in an #OYOHotel after allegedly consuming poison.
— Hate Detector 🔍 (@HateDetectors) May 6, 2025
The two had reportedly been in a relationship, which caused tension between their families.… pic.twitter.com/FVzdSQQrXC
ಮೇ 5ರ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಪೊಲೀಸರಿಗೆ 112 ತುರ್ತು ಸಂಖ್ಯೆಗೆ ಕರೆ ಬಂದಿತು. ಖೇರೇಶ್ವರ ಪೊಲೀಸ್ ಠಾಣೆಯ ಪೊಲೀಸರು ಓಯೋ ಹೋಟೆಲ್‌ಗೆ ತೆರಳಿ, ಪರಿಶೀಲಿಸಿದಾಗ, ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಹೋಟೆಲ್ ಕೊಠಡಿಯಲ್ಲಿ ವಿಷದ ಖಾಲಿ ಬಾಟಲಿ ಪತ್ತೆಯಾಗಿದೆ.
ವಿದ್ಯಾರ್ಥಿನಿ ಸೊಮವಾರ ಬೆಳಿಗ್ಗೆ ಶಾಲೆಗೆ ಹೋಗಿದ್ದಳು. ಆಕೆಯನ್ನು ಶಿಕ್ಷಕ ಹೋಟೆಲ್‌ಗೆ ಕರೆದೊಯ್ದಿದ್ದಾನೆ. ಇಬ್ಬರೂ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.